ಶಿಕ್ಷಣ ಸಚಿವಾಲಯ
ಶಾಸ್ತ್ರೀಯ ಭಾಷೆಗಳ ಅಧ್ಯಯನಕ್ಕಾಗಿ ಐದು 'ಶ್ರೇಷ್ಠತಾ ಕೇಂದ್ರ'ಗಳಿಗೆ ಶಿಕ್ಷಣ ಸಚಿವಾಲಯದ ಅನುಮೋದನೆ
ಭಾರತದ ಭಾಷಿಕ ಮತ್ತು ಸಾಹಿತ್ಯಿಕ ಪರಂಪರೆಯ ಸಂಶೋಧನೆ, ಸಂರಕ್ಷಣೆ, ಡಿಜಿಟಲೀಕರಣ ಹಾಗೂ ವ್ಯಾಪಕ ಪ್ರಸರಣಕ್ಕೆ ಈ ಕೇಂದ್ರಗಳಿಂದ ಉತ್ತೇಜನ
ಪ್ರಕಟಣಾ ದಿನಾಂಕ:
03 OCT 2026 5:40PM by PIB Bengaluru
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು, ಶಾಸ್ತ್ರೀಯ ಅಸ್ಸಾಮಿ, ಶಾಸ್ತ್ರೀಯ ಬಂಗಾಳಿ, ಶಾಸ್ತ್ರೀಯ ಮರಾಠಿ, ಶಾಸ್ತ್ರೀಯ ಪಾಲಿ ಮತ್ತು ಶಾಸ್ತ್ರೀಯ ಪ್ರಾಕೃತ ಭಾಷೆಗಳ ಅಧ್ಯಯನಕ್ಕಾಗಿ ಐದು 'ಶ್ರೇಷ್ಠತಾ ಕೇಂದ್ರ'ಗಳ (Centres of Excellence - CoEs) ಸ್ಥಾಪನೆಗೆ ಅನುಮೋದನೆ ನೀಡಿದೆ.
ಈ ಉಪಕ್ರಮವು ಉನ್ನತ ಶೈಕ್ಷಣಿಕ ಸಂಶೋಧನೆ, ಭಾಷಿಕ ಮತ್ತು ಸಾಹಿತ್ಯಿಕ ಪರಂಪರೆಯ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಮತ್ತು ಈ ಶಾಸ್ತ್ರೀಯ ಭಾಷೆಗಳಿಗೆ ಸಂಬಂಧಿಸಿದ ಜ್ಞಾನದ ವ್ಯಾಪಕ ಪ್ರಸರಣಕ್ಕಾಗಿ ಮೀಸಲಾದ ಸಾಂಸ್ಥಿಕ ಬೆಂಬಲವನ್ನು ಒದಗಿಸುತ್ತದೆ.
ಈ ಶ್ರೇಷ್ಠತಾ ಕೇಂದ್ರಗಳನ್ನು ಈ ಕೆಳಗಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುವುದು:
|
ಕ್ರ.ಸಂ.
|
ಶಾಸ್ತ್ರೀಯ ಭಾಷೆ
|
ಶ್ರೇಷ್ಠತಾ ಕೇಂದ್ರ
|
|
1.
|
ಶಾಸ್ತ್ರೀಯ ಅಸ್ಸಾಮಿ
|
ತೇಜ್‌ಪುರ ವಿಶ್ವವಿದ್ಯಾಲಯ, ಅಸ್ಸಾಂ
|
|
2.
|
ಶಾಸ್ತ್ರೀಯ ಬಂಗಾಳಿ
|
ವಿಶ್ವ-ಭಾರತಿ ವಿಶ್ವವಿದ್ಯಾಲಯ, ಪಶ್ಚಿಮ ಬಂಗಾಳ
|
|
3.
|
ಶಾಸ್ತ್ರೀಯ ಮರಾಠಿ
|
ಡೆಕ್ಕನ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ (ಡೀಮ್ಡ್ ವಿಶ್ವವಿದ್ಯಾಲಯ), ಪುಣೆ, ಮಹಾರಾಷ್ಟ್ರ
|
|
4.
|
ಶಾಸ್ತ್ರೀಯ ಪಾಲಿ
|
ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯ, ಒಡಿಶಾ
|
|
5.
|
ಶಾಸ್ತ್ರೀಯ ಪ್ರಾಕೃತ
|
ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯ, ಗುಜರಾತ್
|
ಈ ಐದು ಕೇಂದ್ರಗಳ ಸ್ಥಾಪನೆಯು ಭಾರತದ ಶಾಸ್ತ್ರೀಯ ಭಾಷೆಗಳ ಅಧ್ಯಯನ, ಸಂಶೋಧನೆ ಮತ್ತು ಸಂರಕ್ಷಣೆಗಾಗಿ ಸಾಂಸ್ಥಿಕ ವ್ಯವಸ್ಥೆಯನ್ನು (ಇಕೋಸಿಸ್ಟಮ್) ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಗಮನಹರಿಸಬೇಕಾದ ಪ್ರಮುಖ ಕ್ಷೇತ್ರಗಳು
ಶ್ರೇಷ್ಠತಾ ಕೇಂದ್ರಗಳು ಈ ಕೆಳಗಿನ ನಾಲ್ಕು ವಿಸ್ತೃತ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿವೆ:
ಶೈಕ್ಷಣಿಕ ಸಂಶೋಧನೆ ಮತ್ತು ಪಾಂಡಿತ್ಯವನ್ನು ಬಲಪಡಿಸುವುದು: ಈ ಕೇಂದ್ರಗಳು ಆಯಾ ಶಾಸ್ತ್ರೀಯ ಭಾಷೆಗಳಲ್ಲಿ ಉನ್ನತ ಸಂಶೋಧನೆ, ಪಾಂಡಿತ್ಯಪೂರ್ಣ ಕಾರ್ಯಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮೀಸಲಾದ ಸಾಂಸ್ಥಿಕ ವೇದಿಕೆಗಳನ್ನು ಒದಗಿಸಲಿವೆ.
ಸಂರಕ್ಷಣೆ ಮತ್ತು ಡಿಜಿಟಲೀಕರಣ: ಈ ಕೇಂದ್ರಗಳು ಭಾಷಿಕ ಮತ್ತು ಸಾಹಿತ್ಯಿಕ ಸಂಪನ್ಮೂಲಗಳ ದಾಖಲೀಕರಣ, ಸಂರಕ್ಷಣೆ ಮತ್ತು ಡಿಜಿಟಲೀಕರಣವನ್ನು ಬೆಂಬಲಿಸಲಿವೆ, ಆ ಮೂಲಕ ಭಾರತದ ಶ್ರೀಮಂತ ಪಠ್ಯ ಪರಂಪರೆಯ ದೀರ್ಘಕಾಲೀನ ಸಂರಕ್ಷಣೆಗೆ ಕೊಡುಗೆ ನೀಡಲಿವೆ.
ಶಾಸ್ತ್ರೀಯ ಭಾಷಾ ಪರಂಪರೆಯ ವ್ಯಾಪಕ ಪ್ರಸರಣ: ಆಯಾ ಶಾಸ್ತ್ರೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಿಕ, ಸಾಹಿತ್ಯಿಕ ಮತ್ತು ಜ್ಞಾನದ ಸಂಪ್ರದಾಯಗಳ ವ್ಯಾಪಕ ಲಭ್ಯತೆ ಮತ್ತು ಪ್ರಸರಣಕ್ಕೆ ಈ ಕೇಂದ್ರಗಳು ಅನುವು ಮಾಡಿಕೊಡಲಿವೆ.
ಪ್ರಾದೇಶಿಕ ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವುದು: ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಒಡಿಶಾ ಮತ್ತು ಗುಜರಾತ್ — ಈ ಐದು ರಾಜ್ಯಗಳಾದ್ಯಂತ ನೆಲೆಗೊಂಡಿರುವ ಈ ಕೇಂದ್ರಗಳು, ಶಾಸ್ತ್ರೀಯ ಭಾಷೆಗಳಲ್ಲಿ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಪಾಂಡಿತ್ಯಕ್ಕಾಗಿ ಪ್ರಾದೇಶಿಕ ವ್ಯವಸ್ಥೆಗಳನ್ನು ಬಲಪಡಿಸಲಿವೆ.
ಈ ಉಪಕ್ರಮವು ಭಾರತದ ಶ್ರೀಮಂತ ಭಾಷಿಕ ಮತ್ತು ಸಾಹಿತ್ಯಿಕ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಉತ್ತೇಜಿಸುವ ಸರ್ಕಾರದ ಪ್ರಯತ್ನಗಳಿಗೆ ಬಲ ತುಂಬಲಿದೆ. ಇದರ ಜೊತೆಗೆ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಂಶೋಧನೆ ಮತ್ತು ಪಾಂಡಿತ್ಯದ ಕೇಂದ್ರಗಳಾಗಿ ಬಲಪಡಿಸಲಿದೆ.
*****
(ಪ್ರಕಟಣೆ ಐ.ಡಿ.: 2318727)
ವಿಸಿಟರ್ ಕೌಂಟರ್ : 19