ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ವತಿಯಿಂದ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ 'ಸ್ವಚ್ಛತಾ ಹೀ ಸೇವಾ 2026' ಚಟುವಟಿಕೆಗಳ ಆಯೋಜನೆ


ಗಿಡ ನೆಡುವಿಕೆ, ಸಾಮೂಹಿಕ ಸ್ವಚ್ಛತಾ ಅಭಿಯಾನ ಮತ್ತು ಸಫಾಯಿ ಕಾರ್ಯಕರ್ತರ ಸನ್ಮಾನದೊಂದಿಗೆ 'ಸ್ವಚ್ಛತಾ ಹೀ ಸೇವಾ 2026' ಆಚರಿಸಿದ ಪಿಐಬಿ ಕಾರ್ಯಾಲಯ

ಪ್ರಕಟಣಾ ದಿನಾಂಕ: 01 OCT 2026 4:39PM by PIB Bengaluru

'ಸ್ವಚ್ಛತಾ ಹೀ ಸೇವಾ 2026' (ಸ್ವಚ್ಛತೆಯೇ ಸೇವೆ 2026) ಅಭಿಯಾನದ ಭಾಗವಾಗಿ, ಪಿಐಬಿ ಪ್ರಧಾನ ಕಚೇರಿಯಾದ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ (ಎನ್ ಎಂ ಸಿ) ಪರಿಸರ ಸುಸ್ಥಿರತೆ, ಸ್ವಚ್ಛತೆ, ನೈರ್ಮಲ್ಯ ಮತ್ತು ಸ್ವಚ್ಚತಾ ಕಾರ್ಮಿಕರನ್ನು ಗೌರವಿಸುವುದರ ಮೇಲೆ ಗಮನ ಹರಿಸಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಯಿತು.

ಸೆಪ್ಟೆಂಬರ್ 30 ರಂದು 'ಏಕ್ ಪೇಡ್ ಮಾ ಕೆ ನಾಮ್' ಉಪಕ್ರಮದಡಿಯಲ್ಲಿ ಗಿಡ ನೆಡುವ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಅಭಿಯಾನವು ಪಾರಿಸರಿಕ ಸುಸ್ಥಿರತೆಯನ್ನು ಉತ್ತೇಜಿಸುವ ಮತ್ತು ಹಸಿರು ಹೊದಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದು, ಸ್ವಚ್ಛ ಹಾಗೂ ಹಸಿರು ವಾತಾವರಣವನ್ನು ನಿರ್ಮಿಸುವಲ್ಲಿ ಸಾಮೂಹಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿತು. ಮರಗಳನ್ನು ಪೋಷಿಸುವುದು ಮತ್ತು ಪರಿಸರವನ್ನು ರಕ್ಷಿಸುವುದು ಎಲ್ಲರ ಹಂಚಿಕೆಯ ಜವಾಬ್ದಾರಿ ಎಂಬುದನ್ನು ಇದು ಉಲ್ಲೇಖಿಸಿತು.

ಇಂದು, ಅಕ್ಟೋಬರ್ 1 ರಂದು, 'ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್' ಉಪಕ್ರಮದಡಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು. ಈ ಅಭಿಯಾನವು ಎನ್ ಎಂ ಸಿ  ಆವರಣದ ಸ್ವಚ್ಛತೆ ಮತ್ತು ನಿರ್ವಹಣೆಯ ಮೇಲೆ ಗಮನ ಹರಿಸಿತು ಜೊತೆಗೆ  ಸ್ವಚ್ಛ ಹಾಗೂ ನೈರ್ಮಲ್ಯಯುತ ಕೆಲಸದ ಸ್ಥಳವನ್ನು ನಿರ್ವಹಿಸಲು ಕೊಡುಗೆ ನೀಡಲು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪ್ರೋತ್ಸಾಹಿಸಿತು. ಸ್ವಚ್ಛ ಭಾರತದ ಉದ್ದೇಶಗಳನ್ನು ಮುನ್ನಡೆಸುವಲ್ಲಿ ನೈರ್ಮಲ್ಯ, ಶುಚಿತ್ವ ಮತ್ತು ಸಾಮೂಹಿಕ ಜವಾಬ್ದಾರಿಯ ಪ್ರಾಮುಖ್ಯತೆಯನ್ನು ಇದು ಪುನರುಚ್ಚರಿಸಿತು.

ಸಫಾಯಿ ಮಿತ್ರರು, ಸ್ವಚ್ಛಾಗ್ರಹಿಗಳು, ಸ್ವಚ್ಛತಾ ಕಾರ್ಮಿಕರಿಗಾಗಿ ಸನ್ಮಾನ ಸಮಾರಂಭವನ್ನು ಸಹ ಇಂದು ಎನ್ ಎಂ ಸಿ ಯಲ್ಲಿ ಆಯೋಜಿಸಲಾಗಿತ್ತು. ಕೆಲಸದ ಸ್ಥಳದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವಲ್ಲಿ ಅವರ ಸಮರ್ಪಿತ ಶ್ರಮ ಮತ್ತು ಮೌಲ್ಯಯುತ ಕೊಡುಗೆಗಳನ್ನು ಈ ಸಮಾರಂಭವು ಗುರುತಿಸಿ ಗೌರವಿಸಿತು. ಸ್ವಚ್ಛತಾ  ಕಾರ್ಮಿಕರ ಪಾತ್ರವನ್ನು ಗುರುತಿಸುವ ಮತ್ತು ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣಕ್ಕಾಗಿ ಅವರ ನಿರಂತರ ಕೊಡುಗೆಯನ್ನು ಪ್ರೋತ್ಸಾಹಿಸುವ ಪ್ರಾಮುಖ್ಯತೆಯನ್ನು ಈ ಉಪಕ್ರಮವು ಎತ್ತಿಹಿಡಿಯಿತು.

ಪಿ ಐ ಬಿಯ ಪ್ರಧಾನ ಮಹಾನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಭಾಗವಹಿಸುವಿಕೆಯೊಂದಿಗೆ ಈ ಚಟುವಟಿಕೆಗಳು ನಡೆದವು, ಇದು ಪಾರಿಸರಿಕ ಸುಸ್ಥಿರತೆ, ಸ್ವಚ್ಛತೆ ಮತ್ತು ಹಸಿರು ಹಾಗೂ ಆರೋಗ್ಯಕರ ಭವಿಷ್ಯಕ್ಕಾಗಿ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿತು.

ಈ ಸರಣಿ ಚಟುವಟಿಕೆಗಳು ಸ್ವಚ್ಛತಾ ಹೀ ಸೇವಾ 2026ರ ಉದ್ದೇಶಗಳಿಗೆ ಪಿಐಬಿ ಯ ಬದ್ಧತೆಯನ್ನು ಮತ್ತು ಸ್ವಚ್ಛತೆಯ ಸಂಸ್ಕೃತಿ, ಪರಿಸರದೆಡೆಗಿನ ಜವಾಬ್ದಾರಿ ಹಾಗೂ ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದನ್ನು ಪ್ರತಿಬಿಂಬಿಸಿದವು.

 

*****


(ಪ್ರಕಟಣೆ ಐ.ಡಿ.: 2317773) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil , Malayalam