ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಕ್ಟೋಬರ್ 1 ರಂದು ಭಾರತ್ ಮಂಟಪದಲ್ಲಿ ನಡೆಯಲಿರುವ ಯುಪಿಎಸ್‌ಸಿ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಗಿ


ಯುಪಿಎಸ್‌ಸಿ ಶತಮಾನೋತ್ಸವದ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 30 SEP 2026 2:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಅಕ್ಟೋಬರ್ 1 ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

1926ರಲ್ಲಿ ಯುಪಿಎಸ್‌ಸಿ ಸ್ಥಾಪನೆಯಾಗಿದ್ದು, ಇದೀಗ ಅಕ್ಟೋಬರ್ 1ರಂದು 100 ವರ್ಷ ಪೂರೈಸಲಿರುವ ಅಂಗವಾಗಿ ವರ್ಷವಿಡೀ ನಡೆಯುವ ಅದ್ದೂರಿ ಆಚರಣೆಗಳ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ವೇಳೆ ಪ್ರಧಾನಮಂತ್ರಿ ಅವರು ಯುಪಿಎಸ್‌ಸಿ ಶತಮಾನೋತ್ಸವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿ ಮತ್ತು “ಭಾರತದಲ್ಲಿ ಯುಪಿಎಸ್‌ಸಿ ಮತ್ತು ಲೋಕ ಸೇವಾ ಆಯೋಗಗಳ ನೀತಿಗಳನ್ನು ರೂಪಿಸಿರುವ 100 ಹೆಗ್ಗುರುತು ತೀರ್ಪುಗಳು' ಎಂಬ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ರಾಜ್ಯಗಳ ಲೋಕಸೇವಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು, ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಯುಪಿಎಸ್‌ಸಿ ಅಧಿಕಾರಿಗಳು ಮತ್ತು ಇತರರು ಸೇರಿದಂತೆ ದೇಶಾದ್ಯಂತದ ಹಲವು ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಯುಪಿಎಸ್‌ಸಿ ಆಯೋಜಿಸಿರುವ ಈ ಕಾರ್ಯಕ್ರಮವು 2026ರ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1, ರಂದು ನಡೆಯುವ ಎರಡು ದಿನಗಳ ಕಾರ್ಯಕ್ರಮದ ಭಾಗವಾಗಿದೆ. ಮೊದಲ ದಿನ ಭಾರತ್ ಮಂಟಪದಲ್ಲಿ 'ಶತಾಬ್ದಿ ಸಮರೋಹ್ - ಮಂಥನ' ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಭಾಷಣಕಾರರ ಭಾಷಣಗಳು ನಡೆಯಲಿದ್ದು, ನಂತರ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

 

*****


(ಪ್ರಕಟಣೆ ಐ.ಡಿ.: 2316974) ವಿಸಿಟರ್ ಕೌಂಟರ್ : 15