ಕೃಷಿ ಸಚಿವಾಲಯ
ರಬಿ ಋತುವಿನ ಬೆಳೆಗಳ ಅಭಿಯಾನ 2026 ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ನಾಳೆ ನವದೆಹಲಿಯಲ್ಲಿ ಪ್ರಾರಂಭವಾಗಲಿದೆ
ಕೇಂದ್ರ-ರಾಜ್ಯ ಸಮನ್ವಯವನ್ನು ಬಲಪಡಿಸುವುದು ಮತ್ತು ಕೃಷಿಗಾಗಿ ಫಲಿತಾಂಶ-ಆಧಾರಿತ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಗಮನಹರಿಸುವ ಸಮ್ಮೇಳನ ಇದಾಗಿದೆ
ರಾಜ್ಯ ಕೃಷಿ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಐ.ಸಿ.ಎ.ಆರ್. ಮತ್ತು ಇತರ ಪಾಲುದಾರರು ಮುಂಬರುವ ರಬಿ ಋತುವಿನ ಬೆಳೆಗಳ ನಿಟ್ಟಿನಲ್ಲಿ ಪ್ರಮುಖ ಆದ್ಯತೆಗಳು ಮತ್ತು ಸಿದ್ಧತೆಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಿದ್ದಾರೆ
ಪ್ರಕಟಣಾ ದಿನಾಂಕ:
27 SEP 2026 10:19AM by PIB Bengaluru
ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರಬಿ ಋತುವಿನ ಬೆಳೆಗಳ ಅಭಿಯಾನ 2026 ಇದರ ಅಂಗವಾಗಿ ರಾಷ್ಟ್ರೀಯ ಕೃಷಿ ಸಮ್ಮೇಳನವನ್ನು ಸೆಪ್ಟೆಂಬರ್ 28-29 ರಂದು ನವದೆಹಲಿಯ ಪುಸಾದಲ್ಲಿರುವ ಎನ್.ಎ.ಎಸ್.ಸಿ. ಸಂಕೀರ್ಣದ ಭಾರತ ರತ್ನ ಸಿ. ಸುಬ್ರಮಣಿಯಂ ಸಭಾಂಗಣದಲ್ಲಿ ಆಯೋಜಿಸಲಿದೆ. ಈ ಸಮ್ಮೇಳನವನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಉದ್ಘಾಟಿಸಲಿದ್ದು, ದೇಶದಾದ್ಯಂತ ರಾಜ್ಯ ಕೃಷಿ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಐ.ಸಿ.ಎ.ಆರ್. ಮತ್ತು ಇತರ ಪಾಲುದಾರರನ್ನು ಒಟ್ಟುಗೂಡಿಸಿ ಮುಂಬರುವ ರಬಿ ಋತುವಿನ ಬೆಳೆಗಳ ನಿಟ್ಟಿನಲ್ಲಿ ಅನುಷ್ಠಾನ ಆಗಬೇಕಾದ ಪ್ರಮುಖ ಆದ್ಯತೆಗಳು ಮತ್ತು ಸಿದ್ಧತೆಗಳ ಕುರಿತು ಚರ್ಚಿಸಲಿದ್ದಾರೆ.
ಎರಡು ದಿನಗಳ ಸಮ್ಮೇಳನವು ಕೇಂದ್ರ-ರಾಜ್ಯ ಸಮನ್ವಯವನ್ನು ಬಲಪಡಿಸುವುದು ಮತ್ತು ಕೃಷಿ ಉತ್ಪಾದನೆ, ಉತ್ಪಾದಕತೆ, ಸುಸ್ಥಿರತೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಂಘಟಿತ, ಫಲಿತಾಂಶ-ಆಧಾರಿತ ಕಾರ್ಯತಂತ್ರವನ್ನು ರೂಪಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇತ್ತೀಚೆಗೆ ನಡೆದ ಕೃಷಿಯ ಕುರಿತಾದ ವಲಯ ಸಮ್ಮೇಳನಗಳ ಪ್ರಮುಖ ಕಲಿಕೆಗಳು ಮತ್ತು ಫಲಿತಾಂಶಗಳ ಮೇಲೆ ಚರ್ಚೆಗಳು ನಿರ್ಮಿಸಲ್ಪಡುತ್ತವೆ.
ಸಮ್ಮೇಳನದ ಮೊದಲ ದಿನವು, ಮೂರು ವಿಶಾಲ ಕ್ಷೇತ್ರಗಳನ್ನು ಒಳಗೊಂಡ ಮೂರು ಸುತ್ತಿನ ಸಮಾನಾಂತರ ವಿಷಯಾಧಾರಿತ ಗುಂಪು ಚರ್ಚೆಗಳನ್ನು ಒಳಗೊಂಡಿರುತ್ತದೆ: ಆತ್ಮನಿರ್ಭರತೆ, ವೈವಿಧ್ಯೀಕರಣ ಮತ್ತು ಉತ್ಪಾದನಾ ಬೆಳವಣಿಗೆ; ಸುಸ್ಥಿರತೆ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿ; ಮತ್ತು ಡಿಜಿಟಲ್ ಕೃಷಿ, ಮೂಲಸೌಕರ್ಯ, ಹಣಕಾಸು ಮತ್ತು ಅಪಾಯ ನಿರ್ವಹಣೆ. ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಎಣ್ಣೆ ತಾಳೆ, ತೋಟಗಾರಿಕೆ, ಹತ್ತಿ, ಬೀಜ ಲಭ್ಯತೆ ಮತ್ತು ಬೀಜ ಮೌಲ್ಯ ಸರಪಳಿಯಲ್ಲಿ ಸುಧಾರಣೆಗಳು, ನೈಸರ್ಗಿಕ ಕೃಷಿ, ಮಣ್ಣಿನ ಆರೋಗ್ಯ, ಕೃಷಿ ಯಾಂತ್ರೀಕರಣ, ಎಸ್.ಪಿ.ಒ. ಹಣಕಾಸು ಮತ್ತು ಮೂಲಸೌಕರ್ಯ, ಮಾರುಕಟ್ಟೆ ಸುಧಾರಣೆಗಳು, ಪಿಎಂ ಧನ್-ಧಾನ್ಯ ಕೃಷಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯಾಪ್ತಿ, ಡಿಜಿಟಲ್ ಕೃಷಿ, ಪಿಎಂ ಫಸಲ್ ಬಿಮಾ ಯೋಜನೆ, ಸಸ್ಯ ಸಂರಕ್ಷಣೆ ಮತ್ತು ಕೃಷಿ ಅಂಕಿಅಂಶಗಳಲ್ಲಿ ಆತ್ಮನಿರ್ಭರತ ಅಭಿಯಾನದ ಕುರಿತು ಚರ್ಚಿಸಲಾಗುವ ಪ್ರಮುಖ ವಿಷಯಗಳಾಗಿವೆ.
ವಿಷಯಾಧಾರಿತ ಚರ್ಚೆಗಳು ಪ್ರಮುಖ ಅನುಷ್ಠಾನ ಸವಾಲುಗಳು, ರಾಜ್ಯ-ನಿರ್ದಿಷ್ಟ ಆದ್ಯತೆಗಳು ಮತ್ತು ರಬಿ ಋತುವಿಗಾಗಿ ಕಾರ್ಯಸಾಧ್ಯ ತಂತ್ರಗಳನ್ನು ಗುರುತಿಸುವ ಗುರಿಯನ್ನು ಹೊಂದಿವೆ, ಯೋಜನೆಗಳ ನಡುವೆ ಒಮ್ಮುಖವನ್ನು ಸುಧಾರಿಸುವುದು, ವಿತರಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು ಮತ್ತು ಕ್ಷೇತ್ರ ಮಟ್ಟದಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ನಿರ್ದಿಷ್ಟವಾಗಿ ಒತ್ತು ನೀಡಲಾಗುತ್ತದೆ.
ಸಮ್ಮೇಳನದ ಎರಡನೇ ದಿನವು ವಲಯ ಸಮ್ಮೇಳನಗಳಿಂದ ಪಡೆದ ಪ್ರಮುಖ ಕಲಿಕೆಗಳು ಮತ್ತು ಮೊದಲ ದಿನ ನಡೆದ ವಿಷಯಾಧಾರಿತ ಚರ್ಚೆಗಳ ಫಲಿತಾಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ಕಾರ್ಯಸೂಚಿಯಲ್ಲಿ ರಬಿ ಋತುವಿನ ಹವಾಮಾನ ಮುನ್ನೋಟ, ರಸಗೊಬ್ಬರ ಲಭ್ಯತೆ ಮತ್ತು ರಸಗೊಬ್ಬರಗಳ ಸಮತೋಲಿತ ಬಳಕೆ, ಡಿಜಿಟಲ್ ಕೃಷಿ ಮಿಷನ್, ರೈತರ ನೋಂದಣಿ, ಡಿಜಿಟಲ್ ಬೆಳೆ ಸಮೀಕ್ಷೆ ಮತ್ತು ಅಗ್ರಿಸ್ಟ್ಯಾಕ್, ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಕ್ಕಾಗಿ ಮಿಷನ್, ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್, ಬೆಳೆ ಮತ್ತು ಬೀಜ ಸ್ಥಿತಿ, ವೈವಿಧ್ಯ ಅಳವಡಿಕೆ, ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ, ಮಾರುಕಟ್ಟೆ ಸುಧಾರಣೆಗಳು ಮತ್ತು ಎಟಿಎಂಎ ಮತ್ತು ಕೆವಿಕೆಗಳ ಮೂಲಕ ಕೃಷಿ ಯೋಜನೆಗಳ ತಯಾರಿಕೆ ಸೇರಿವೆ.
ಸಮ್ಮೇಳನವು ದೇಶದಾದ್ಯಂತ ರಾಜ್ಯ ಕೃಷಿ ಸಚಿವರು ತಮ್ಮ ಅಭಿಪ್ರಾಯಗಳು/ಅನುಭವಗಳು, ರಾಜ್ಯ ಆದ್ಯತೆಗಳು ಮತ್ತು ಕೃಷಿ ಅಭಿವೃದ್ಧಿ ಮತ್ತು ರಬಿ ಋತುವಿನ ಸಿದ್ಧತೆಗಾಗಿ ಸಲಹೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ವಿಷಯಾಧಾರಿತ ಚರ್ಚೆಗಳ ಫಲಿತಾಂಶಗಳ ಜೊತೆಗೆ ರಾಜ್ಯಗಳಿಂದ ಬರುವ ಮಾಹಿತಿಯು, ರಬಿ ಅಭಿಯಾನ 2026ಕ್ಕೆ ಸಂಘಟಿತ ಮತ್ತು ಫಲಿತಾಂಶ-ಆಧಾರಿತ ಕಾರ್ಯತಂತ್ರವನ್ನು ರೂಪಿಸಲು ಕೊಡುಗೆ ನೀಡುವ ನಿರೀಕ್ಷೆಯಿದೆ.
ಸಮಾರೋಪ ಅಧಿವೇಶನವು ರಬಿ ಬೆಳೆಗಳ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಹಾರ ಮತ್ತು ಪೌಷ್ಟಿಕಾಂಶ ಸುರಕ್ಷತೆಯನ್ನು ಖಾತ್ರಿಪಡಿಸುವ 'ಆತ್ಮನಿರ್ಭರತೆ ಮತ್ತು ವಿಕಸಿತ ಭಾರತ' ಇದರ ದೃಷ್ಟಿಕೋನವನ್ನು ಈಡೇರಿಸಲು ರೈತರನ್ನು ಸಬಲೀಕರಣಗೊಳಿಸಲು ಚರ್ಚೆಗಳನ್ನು ಸಂಕ್ಷಿಪ್ತಗೊಳಿಸುವುದು ಮತ್ತು ದೃಢವಾದ ಮಾರ್ಗಸೂಚಿಯನ್ನು ಸಿದ್ಧಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
*****
.
(ಪ್ರಕಟಣೆ ಐ.ಡಿ.: 2315605)
ವಿಸಿಟರ್ ಕೌಂಟರ್ : 33