ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಡಿ ಎ ಆರ್ ಪಿ ಜಿ) ಆಯೋಜಿಸಲಿರುವ 'ವಿಶೇಷ ಅಭಿಯಾನ-6'ರಲ್ಲಿ ಸಕ್ರಿಯವಾಗಿ ಭಾಗವಹಿಸಲು ಗೃಹ ಸಚಿವಾಲಯ (ಎಂಎಚ್ಎ) ಸಜ್ಜು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಸ್ಫೂರ್ತಿ ಪಡೆದಿರುವ ಈ ಅಭಿಯಾನವು ಸರ್ಕಾರದಲ್ಲಿ ಸ್ವಚ್ಛತೆಯನ್ನು ಸಾಂಸ್ಥಿಕಗೊಳಿಸುವುದು ಮತ್ತು ಬಾಕಿ ಇರುವ ಕೆಲಸಗಳನ್ನು ಕನಿಷ್ಠಗೊಳಿಸುವ ಮೂಲಕ ಸ್ವಚ್ಛತೆಗೆ ಉತ್ತೇಜನ, ಕೆಲಸದ ಪ್ರಕ್ರಿಯೆಗಳನ್ನು ಸರಳೀಕರಿಸುವ ಮತ್ತು ಬಾಕಿ ಇರುವ ಕುಂದುಕೊರತೆ ಪರಿಹರಿಸುವ ಗುರಿ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಳಮಟ್ಟದ ಮತ್ತು ಹೊರವಲಯದ ಕಚೇರಿಗಳಿಗೆ ವಿಶೇಷ ಒತ್ತು

ಗೃಹ ಸಚಿವಾಲಯದಲ್ಲಿ ನಡೆಯಲಿರುವ 'ವಿಶೇಷ ಅಭಿಯಾನ-6'ಯು ಸುಸ್ಥಿರ ಮತ್ತು ಪರಿಸರ ಸ್ನೇಹಿ ದುಡಿಯುವ ಸ್ಥಳಗಳನ್ನು ಸೃಷ್ಟಿಸುವತ್ತ ಗಮನಹರಿಸುವುದರ ಜೊತೆಗೆ, ವಿವಿಧ ವರ್ಗದ ವಿಷಯಗಳು ಮತ್ತು ಪ್ರಕರಣಗಳಿಗೆ ಸಂಬಂಧಿಸಿದ ಬಾಕಿ ಇರುವ ಕೆಲಸ ವಿಲೇವಾರಿಗೂ ಹೆಚ್ಚಿನ ಹರಿಸಲಿದೆ

ಪ್ರಕಟಣಾ ದಿನಾಂಕ: 23 SEP 2026 1:16PM by PIB Bengaluru

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಡಿ ಎ ಪಿ ಆರ್ ಜಿ) ಆಯೋಜಿಸುತ್ತಿರುವ 'ವಿಶೇಷ ಅಭಿಯಾನ-6'ರಲ್ಲಿ ಸಕ್ರಿಯವಾಗಿ ಭಾಗವಹಿಸಲು ಗೃಹ ಸಚಿವಾಲಯ (ಎಂ ಎಚ್ ಎ) ಸಜ್ಜಾಗಿದೆ. ಈ ಅಭಿಯಾನವನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುವುದು:

  1. ಸಿದ್ಧತೆಯ ಹಂತ : 2026ರ ಸೆಪ್ಟಂಬರ್ 15 ರಿಂದ ಸೆಪ್ಟಂಬರ್ 30
  2. ಅನುಷ್ಠಾನ ಹಂತ: 2026ರ ಅಕ್ಟೋಬರ್ 2 ರಿಂದ ಅಕ್ಟೋಬರ್ 31

ಸರ್ಕಾರದಲ್ಲಿ ಸ್ವಚ್ಛತೆಯನ್ನು ಸಾಂಸ್ಥಿಕಗೊಳಿಸುವ ಮತ್ತು ಬಾಕಿ ಇರುವ ಕೆಲಸಗಳನ್ನು ಕನಿಷ್ಠಗೊಳಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಸ್ಫೂರ್ತಿ ಪಡೆದ  ಈ ಅಭಿಯಾನವು, ಸ್ವಚ್ಛತೆಯನ್ನು ಉತ್ತೇಜಿಸುವ, ಕೆಲಸದ ಪ್ರಕ್ರಿಯೆಗಳನ್ನು ಸರಳೀಕರಿಸುವ ಮತ್ತು ಬಾಕಿ ಇರುವ ಕುಂದುಕೊರತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಳಮಟ್ಟದ ಮತ್ತು ಹೊರವಲಯದ ಕಚೇರಿಗಳಿಗೆ ವಿಶೇಷ ಗಮನ ನೀಡಲಾಗುವುದು.

ಗೃಹ ಸಚಿವಾಲಯದಲ್ಲಿ ನಡೆಯಲಿರುವ 'ವಿಶೇಷ ಅಭಿಯಾನ-6'ಯು ಸುಸ್ಥಿರ ಮತ್ತು ಪರಿಸರ ಸ್ನೇಹಿ ದುಡಿಯುವ ಸ್ಥಳಗಳನ್ನು ಸೃಷ್ಟಿಸುವತ್ತ ಗಮನಹರಿಸುವುದರ ಜೊತೆಗೆ, ವಿವಿಧ ವರ್ಗದ ವಿಷಯಗಳು ಮತ್ತು ಪ್ರಕರಣಗಳಿಗೆ ಸಂಬಂಧಿಸಿದ ಬಾಕಿ ಇರುವ ಕೆಲಸಗಳನ್ನು ವಿಲೇವಾರಿ ಮಾಡುವುದಕ್ಕೆ ಗಮನಹರಿಸಲಿದೆ. ಇವುಗಳಲ್ಲಿ ಸಂಸದರಿಂದ ಬರುವ ಮನವಿಗಳು/ವಿಷಯಗಳು, ರಾಜ್ಯ ಸರ್ಕಾರಗಳಿಂದ ಬರುವ ವಿಷಯಗಳು, ಸಂಸತ್ತಿನಲ್ಲಿ ನೀಡಲಾದ ಭರವಸೆಗಳು, ಸಚಿವಾಲಯಗಳ ನಡುವಿನ ಸಮಾಲೋಚನೆಗಳು, ಸಾರ್ವಜನಿಕ ಕುಂದುಕೊರತೆಗಳು ಮತ್ತು ಮೇಲ್ಮನವಿಗಳು ಹಾಗೂ ದಾಖಲೆಗಳ ನಿರ್ವಹಣೆಯ ಸುಧಾರಣೆ ಮುಂತಾದವು ಸೇರಿವೆ.

'ವಿಶೇಷ ಅಭಿಯಾನ-6'ರ ಅನುಷ್ಠಾನವನ್ನು ಸಚಿವಾಲಯದ ಅತ್ಯುನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳಿಗೆ (ಸಿಪಿಒ) ಈ ಅಭಿಯಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ; ಅಲ್ಲದೆ, ಅಭಿಯಾನದಡಿಯಲ್ಲಿ ಗುರುತಿಸಲಾದ ಉದ್ದೇಶಗಳು ಮತ್ತು ಗುರಿಗಳನ್ನು ಸಾಧಿಸಲು ಸಂಘಟಿತ ಪ್ರಯತ್ನಗಳನ್ನು ಮಾಡುವಂತೆ ಹಾಗೂ ನಿಗದಿತ ಮಿತಿಗಿಂತಲೂ ಹೆಚ್ಚಿನದನ್ನು ಸಾಧಿಸಲು ಶ್ರಮಿಸುವಂತೆ ಅವುಗಳನ್ನು ಪ್ರೋತ್ಸಾಹಿಸಲಾಗಿದೆ.

ಸ್ವಚ್ಛತೆ, ಸಮರ್ಥ ದಾಖಲೆ ನಿರ್ವಹಣೆ, ಬಾಕಿ ಇರುವ ವಿಷಯಗಳ ಸಕಾಲಿಕ ವಿಲೇವಾರಿ ಹಾಗೂ ಸ್ವಚ್ಛ, ಹಸಿರು ಮತ್ತು ಹೆಚ್ಚು ಉತ್ಪಾದಕ ಕೆಲಸದ ಸ್ಥಳಗಳ ಸೃಷ್ಟಿಯತ್ತ ನಿರಂತರ ಪ್ರಯತ್ನಗಳ ಮೂಲಕ 'ವಿಶೇಷ ಅಭಿಯಾನ'ದ ಸಾಧನೆಗಳನ್ನು ಸಾಂಸ್ಥಿಕಗೊಳಿಸಲು ಸಚಿವಾಲಯವು ಬದ್ಧವಾಗಿದೆ.

ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಅದರ ಅಧೀನ ಸಂಸ್ಥೆಗಳು ಬಾಕಿ ಇರುವ ಕೆಲಸಗಳನ್ನು ವಿಲೇವಾರಿ ಮಾಡುವ ಹಾಗೂ ಸ್ವಚ್ಛತೆ ಮತ್ತು ಸಮರ್ಥ ದಾಖಲೆ ನಿರ್ವಹಣೆ ಉತ್ತೇಜಿಸುವ ವಿಶೇಷ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ. 2025ರ ನವೆಂಬರ್ ನಿಂದ 2026ರ ಆಗಸ್ಟ್ ನಡುವಿನ  ಅವಧಿಯಲ್ಲಿ, ಸಚಿವಾಲಯ ಮತ್ತು ಅದರ ತಳಮಟ್ಟದ ಹಾಗೂ ಹೊರವಲಯದ ಕಚೇರಿಗಳು ಬಾಕಿ ಇರುವ ವಿಷಯಗಳ ವಿಲೇವಾರಿ ಹಾಗೂ ಸ್ವಚ್ಛ ಮತ್ತು ಹೆಚ್ಚು ಸಮರ್ಥ ದುಡಿಯುವ ಸ್ಥಳವನ್ನು ರೂಪಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ.

ಅವಧಿಯ ಪ್ರಮುಖ ಸಾಧನೆಗಳು ಕೆಳಗಿನಂತಿವೆ:

  • ಸಚಿವಾಲಯ ಹಾಗೂ ಅದರ ತಳಮಟ್ಟದ ಮತ್ತು ಹೊರವಲಯದ ಕಚೇರಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ 761 ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಯಿತು.
  • ಸಂಸತ್ ಸದಸ್ಯರಿಂದ ಬಂದ 299 ಮನವಿಗಳು/ಸಂದರ್ಭಗಳು, ರಾಜ್ಯ ಸರ್ಕಾರಗಳಿಂದ ಬಂದ 336 ಮನವಿಗಳು ಮತ್ತು ಪ್ರಧಾನ ಮಂತ್ರಿಯವರ ಕಚೇರಿಯಿಂದ (ಪಿಎಂಒ) ಬಂದ 7 ಮನವಿಗಳನ್ನು ವಿಲೇವಾರಿ ಮಾಡಲಾಯಿತು.
  • ಈ ಅವಧಿಯಲ್ಲಿ ಸ್ವೀಕರಿಸಲಾದ ಒಟ್ಟು 52,050 ಸಾರ್ವಜನಿಕ ಕುಂದುಕೊರತೆಗಳು ಮತ್ತು 7,410 ಸಾರ್ವಜನಿಕ ಕುಂದುಕೊರತೆ ಮೇಲ್ಮನವಿಗಳನ್ನು ಸಚಿವಾಲಯವು ವಿಲೇವಾರಿ ಮಾಡಿದೆ.
  • ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್ ಎಸ್) ಕಚೇರಿಗಳಲ್ಲಿ 1,02,084 ಚದರ ಅಡಿಗಳಷ್ಟು ಕಚೇರಿ ಸ್ಥಳವನ್ನು ಮುಕ್ತಗೊಳಿಸಲಾಯಿತು.

ದತ್ತಾಂಶಗಳ ಸುಗಮ ಸಂಗ್ರಹಣೆಯನ್ನು ಸುಲಭಗೊಳಿಸಲು ಮತ್ತು ಅವುಗಳ ನಿಖರತೆಯನ್ನು ಖಾತ್ರಿಪಡಿಸಿಕೊಳ್ಳಲು, ಗೃಹ ವ್ಯವಹಾರಗಳ ಸಚಿವಾಲಯವು ಸಚಿವಾಲಯದೊಳಗಿನ ಒಂದು ಪೋರ್ಟಲ್ ಅನ್ನು ಬಳಸುತ್ತಿದೆ. ಇದರ ಮೂಲಕ ಸಚಿವಾಲಯದ ಎಲ್ಲಾ ವಿಭಾಗಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮತ್ತು ದೆಹಲಿ ಪೊಲೀಸರು ಅಭಿಯಾನಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಅಪ್‌ಲೋಡ್ ಮಾಡುತ್ತಾರೆ. ಈ ಪೋರ್ಟಲ್ ವಿವಿಧ ವಿಭಾಗಗಳು ಮತ್ತು ಕಚೇರಿಗಳ ನಡುವೆ ಪರಿಣಾಮಕಾರಿ ಸಮನ್ವಯವನ್ನು ಸಾಧ್ಯವಾಗಿಸಿದೆ ಹಾಗೂ ನಿಖರವಾದ ದತ್ತಾಂಶಗಳ ಸಕಾಲಿಕ ಸಂಗ್ರಹಣೆ ಮತ್ತು ಕ್ರೋಢೀಕರಣಕ್ಕೆ ಅನುವು ಮಾಡಿಕೊಟ್ಟಿದೆ.

 

*****


(ಪ್ರಕಟಣೆ ಐ.ಡಿ.: 2313873) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati