ಆಯುಷ್
azadi ka amrit mahotsav

ಸೆಪ್ಟೆಂಬರ್ 23 ರಂದು ಭಾರತ ಮತ್ತು ಪ್ರಪಂಚದಾದ್ಯಂತ ಆಚರಿಸಲ್ಪಡಲಿರುವ 11 ನೇ ಆಯುರ್ವೇದ ದಿನ


ಆರೋಗ್ಯಕರ ನಾಳೆಗಾಗಿ ಆಯುರ್ವೇದ: ಸಾಕ್ಷ್ಯಾಧಾರ, ಸಂಶೋಧನೆ, ನಾವೀನ್ಯತೆ ಮತ್ತು ಸಮುದಾಯದ ಯೋಗಕ್ಷೇಮದ ಮೇಲೆ ಗಮನ

ಆಯುರ್ವೇದ ದಿನವು ಸುರಕ್ಷತಾ ದಾಖಲೆಗಳು, ಮಾರ್ಗಸೂಚಿಗಳು, ವರದಿಗಳು ಮತ್ತು ಸಿಸಿಆರ್ ಎ ಎಸ್-ಎಜಿಎನ್ ಐ ವೆಬ್ ಪೋರ್ಟಲ್ ಬಿಡುಗಡೆಗೆ ಸಾಕ್ಷಿಯಾಗಲಿದೆ

ಆಯುರ್ವೇದ ದಿನದಂದು ಬಿಡುಗಡೆಯಾಗಲಿದೆ ಆಯುಷ್ ಸೇವಾ ಕ್ಷೇತ್ರದ ಕುರಿತಾದ ಮೊಟ್ಟಮೊದಲ ವರದಿ

2047 ರವರೆಗಿನ ಆಯುರ್ವೇದದ ಪಥ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ (ಎನ್ ಸಿ ಡಿ) ಹೊರೆಯನ್ನು ಕಡಿಮೆ ಮಾಡುವ ಕುರಿತು ಚರ್ಚಿಸಲು ವೈಜ್ಞಾನಿಕ ಗೋಷ್ಠಿಗಳು

ಪ್ರಕಟಣಾ ದಿನಾಂಕ: 22 SEP 2026 6:55PM by PIB Bengaluru

ಆಯುಷ್ ಸಚಿವಾಲಯವು "ಆರೋಗ್ಯಕರ ನಾಳೆಗಾಗಿ ಆಯುರ್ವೇದ" ಎಂಬ ವಿಷಯದಲ್ಲಿ ನಾಳೆ ನಾಗ್ಪುರದಲ್ಲಿ 11ನೇ ಆಯುರ್ವೇದ ದಿನಾಚರಣೆಯನ್ನು ಆಯೋಜಿಸಲಿದೆ. ಭಾರತ ಮತ್ತು ವಿಶ್ವದಾದ್ಯಂತ ಆಯುರ್ವೇದ ಸಂಸ್ಥೆಗಳು, ವೈದ್ಯರು ಮತ್ತು ಸಂಬಂಧಪಟ್ಟವರು  ಈ ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ.

ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕ್ರಮದಲ್ಲಿ, ಅಭಿವೃದ್ಧಿಶೀಲ ದೇಶಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ ('ರಿಸರ್ಚ್ ಅಂಡ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಡೆವಲಪಿಂಗ್ ಕಂಟ್ರೀಸ್' - ಆರ್ ಐ ಎಸ್ ) ಸಿದ್ಧಪಡಿಸಿದ "ಆಯುಷ್ ಸೇವಾ ಕ್ಷೇತ್ರ"ದ ಕುರಿತಾದ ಮೊಟ್ಟಮೊದಲ ವರದಿಯ ಬಿಡುಗಡೆಗೆ ಸಾಕ್ಷಿಯಾಗಲಿದ್ದು, ಇದು ಆಯುಷ್ ಸೇವಾ ಕ್ಷೇತ್ರದ ಮೌಲ್ಯಮಾಪನವನ್ನು ಒದಗಿಸುತ್ತದೆ. ಆಯುರ್ವೇದದಲ್ಲಿ ಸಾಕ್ಷ್ಯಾಧಾರ, ಸಂಶೋಧನೆ, ನಾವೀನ್ಯತೆ ಮತ್ತು ಸಮುದಾಯದ ಯೋಗಕ್ಷೇಮವನ್ನು ಬಲಪಡಿಸುವ ಉದ್ದೇಶದಿಂದ ಗೋಕ್ಷುರ (Tribulus terrestris) ಮತ್ತು ಚಂದ್ರಶೂರ (Lepidium sativum) ಕುರಿತ ಸುರಕ್ಷತಾ ದಾಖಲೆಗಳು, ಚರ್ಮದ ಕಾಯಿಲೆಗಳ ಕುರಿತಾದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿಗಳು (ಎಸ್ ಟಿ ಜಿ) ಹಾಗೂ ಇತರ ಉಪಕ್ರಮಗಳು ಮತ್ತು ಪ್ರಕಟಣೆಗಳ ಬಿಡುಗಡೆಯನ್ನು ಸಹ ಈ ಕಾರ್ಯಕ್ರಮವು ಒಳಗೊಂಡಿರುತ್ತದೆ.

ಈ ಕಾರ್ಯಕ್ರಮದಲ್ಲಿ “ಸಾಂಪ್ರದಾಯಿಕ ಜ್ಞಾನದಿಂದ ಜಾಗತಿಕ ನಾಯಕತ್ವದತ್ತ: ಆಯುಷ್ ದೃಷ್ಟಿಕೋನ 2030” (Ayush Vision 2030) ವರದಿ ಹಾಗು ಭಾರತದಲ್ಲಿ ಆಯುಷ್ ಸಂಬಂಧಿತ ಸಂಶೋಧನೆಗಳ ಸ್ಥಿತಿ ವರದಿ ಬಿಡುಗಡೆಯಾಗಲಿದೆ ಮತ್ತು ಸಿ ಸಿ ಆರ್ ಎ ಎಸ್-ಎ ಜಿ ಎನ್ ಐ (ಆಯುರ್ವೇದ ವಿಜ್ಞಾನಗಳ ಸಂಶೋಧನೆಯ ಕೇಂದ್ರೀಯ ಮಂಡಳಿ - ಆಯುರ್ವೇದ ಜ್ಞಾನ ನೈಪುಣ್ಯ ಉಪಕ್ರಮ) ಮೌಲ್ಯಮಾಪನ ಮಾಪಕದ ವೆಬ್ ಪೋರ್ಟಲ್ ಚಾಲನೆ ನೀಡಲಾಗುತ್ತದೆ.

ಈ ಕಾರ್ಯಕ್ರಮವು ಎರಡು ವೈಜ್ಞಾನಿಕ ಗೋಷ್ಠಿಗಳನ್ನು ಒಳಗೊಂಡಿರುತ್ತದೆ. ವೈಜ್ಞಾನಿಕ ಗೋಷ್ಠಿ I ಶೀರ್ಷಿಕೆ- “ಶಾಶ್ವತಂನಿಂದ ವಿಶ್ವಾರ್ಹತೆಯತ್ತ - ಆರೋಗ್ಯಕರ ನಾಳೆಗಾಗಿ ಆಯುರ್ವೇದ ಮತ್ತು 2047 ರವರೆಗಿನ ಹಾದಿ”, ಮತ್ತು ವೈಜ್ಞಾನಿಕ ಗೋಷ್ಠಿ II ಶೀರ್ಷಿಕೆ - “2027ರ ವೇಳೆಗೆ ಸಾಂಕ್ರಾಮಿಕವಲ್ಲದ ರೋಗಗಳ (ಎನ್ ಸಿ ಡಿ) ಹೊರೆಯನ್ನು ಕಡಿಮೆ ಮಾಡಲು ಸಂಯೋಜಿತ ಚಿಕಿತ್ಸೆಗಳ ಅಗತ್ಯ”  

ಈ ಕಾರ್ಯಕ್ರಮದಲ್ಲಿ ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಗಳು, ವಿವಿಧ ಮಂಡಳಿಗಳು ಮತ್ತು ಆಯುಷ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ. ಈ ಆಚರಣೆಗಳು ಆಯುರ್ವೇದ ವ್ಯವಸ್ಥೆಯ ಪ್ರಮುಖ ಪಾಲುದಾರರನ್ನು ಒಂದೆಡೆ ತರಲಿದ್ದು, ಜ್ಞಾನ ವಿನಿಮಯ ಮತ್ತು ವ್ಯಾಪಕ ತೊಡಗಿಸಿಕೊಳ್ಳುವಿಕೆಗೆ ವೇದಿಕೆಯನ್ನು ಒದಗಿಸುತ್ತವೆ.

11ನೇ ಆಯುರ್ವೇದ ದಿನಾಚರಣೆಯು ಆಯುರ್ವೇದವನ್ನು ಬಲಪಡಿಸುವಲ್ಲಿ ಮತ್ತು ಸಮುದಾಯದ ಯೋಗಕ್ಷೇಮವನ್ನು ವೃದ್ಧಿಸುವಲ್ಲಿ ಸಾಕ್ಷ್ಯಾಧಾರ, ಸಂಶೋಧನೆ ಮತ್ತು ನಾವೀನ್ಯತೆಯ ಪ್ರಾಮುಖ್ಯತೆಯನ್ನು ಉಲ್ಲೇಖಿಸುತ್ತದೆ. ದೇಶಾದ್ಯಂತ ಮತ್ತು ವಿಶ್ವದಾದ್ಯಂತ ನಡೆಯುವ ಈ ಆಚರಣೆಯು 'ಆರೋಗ್ಯಕರ ನಾಳೆಗಾಗಿ ಆಯುರ್ವೇದ' ಎಂಬುದರ ಮೇಲಿನ ಗಮನವನ್ನು ಮತ್ತಷ್ಟು ಬಲಪಡಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2313697) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , English , हिन्दी , Urdu , Tamil