ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಜೈಪುರದಲ್ಲಿ (ರಾಜಸ್ಥಾನ) ಡಬ್ಲ್ಯೂಡಬ್ಲ್ಯೂಎಫ್  ಜಾಗತಿಕ ಸಂರಕ್ಷಣಾ ಸಮ್ಮೇಳನವನ್ನು ಉದ್ಘಾಟಿಸಿದ ಕೇಂದ್ರ ಪರಿಸರ ಸಚಿವರು


ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವ ಮೂಲಕ ಸಂರಕ್ಷಣೆ ಮತ್ತು ಸಹಬಾಳ್ವೆಗಾಗಿ ಜಾಗತಿಕ ಕಾರ್ಯಚಟುವಟಿಕೆಗೆ ಶ್ರೀ ಭೂಪೇಂದರ್ ಯಾದವ್ ಕರೆ

ಪ್ರಕಟಣಾ ದಿನಾಂಕ: 21 SEP 2026 2:12PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಇಂದು ಜೈಪುರದಲ್ಲಿ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯೂಡಬ್ಲ್ಯೂಎಫ್) ಸಂಘಟನೆಯ ಜಾಗತಿಕ ಸಂರಕ್ಷಣಾ ಸಮ್ಮೇಳನವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರು (ವನ್ಯಜೀವಿ) ಶ್ರೀ ರಮೇಶ್ ಪಾಂಡೆ; ರಾಜಸ್ಥಾನ ಸರ್ಕಾರದ ಅರಣ್ಯ ಪಡೆ ಮುಖ್ಯಸ್ಥರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಅರಿಜಿತ್ ಬ್ಯಾನರ್ಜಿ; ಡಬ್ಲ್ಯೂಡಬ್ಲ್ಯೂಎಫ್-ಇಂಟರ್ ನ್ಯಾಷನಲ್ ಸಂಸ್ಥೆಯ ಮುಖ್ಯ ಸಂರಕ್ಷಣಾಧಿಕಾರಿ ಶ್ರೀ ದೌದಿ ಸಾಂಬಾ; ಮತ್ತು ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾದ ಸಿಇಒ ಶ್ರೀ ರವಿ ಸಿಂಗ್ ಭಾಗವಹಿಸಿದ್ದರು.

ನೂರಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸಂರಕ್ಷಣೆ ಮತ್ತು ಸಹಬಾಳ್ವೆಯ ಪರವಾಗಿ ಕಾರ್ಯನಿರ್ವಹಿಸುವ, ಸಮುದಾಯವಾಗಿ ಮತ್ತೆ ಒಟ್ಟಾಗಿ ಇರುವ, ಸಾಧಿಸುತ್ತಿರುವ ಪ್ರಗತಿಯಿಂದ ಆತ್ಮವಿಶ್ವಾಸವನ್ನು ಪಡೆಯುವ ಹಾಗೂ ಒಂದೇ ಭರವಸೆ ಮತ್ತು ನಿರ್ದೇಶನವನ್ನು ನಿರ್ಮಿಸುವ ಅಗತ್ಯವನ್ನು ಪ್ರತಿಪಾದಿಸಿದರು. ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಹಂಚಿಕೊಂಡ ಶ್ರೀ ಯಾದವ್, ಕಳೆದ ದಶಕದಲ್ಲಿ ರಕ್ಷಿತ ಪ್ರದೇಶಗಳ ಸಂಖ್ಯೆ ಸುಮಾರು 750 ರಿಂದ 1000ಕ್ಕೂ ಹೆಚ್ಚಾಗಿದೆ ಎಂದು ಉಲ್ಲೇಖಿಸಿದರು. ಅದೇ ರೀತಿ ಹುಲಿ ರಕ್ಷಿತಾರಣ್ಯಗಳ ಸಂಖ್ಯೆ 47 ರಿಂದ 58ಕ್ಕೆ ಮತ್ತು ಆನೆ ರಕ್ಷಿತಾರಣ್ಯಗಳ ಸಂಖ್ಯೆ 30 ರಿಂದ 33ಕ್ಕೆ ಏರಿಕೆಯಾಗಿದ್ದರೆ, ರಾಮ್ ಸರ್ ತಾಣಗಳ ಸಂಖ್ಯೆ ಇದೇ ಅವಧಿಯಲ್ಲಿ 24 ರಿಂದ 101ಕ್ಕೆ ಹೆಚ್ಚಾಗಿದೆ. ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದಲ್ಲಿ ಚೀತಾಗಳನ್ನು ಮರುಪರಿಚಯಿಸುವ ಯಶಸ್ಸನ್ನು ಅವರು ವಿವರಿಸಿದರು.

ಜೀವಿಗಳ ಸಂರಕ್ಷಣೆಗೆ ಭಾರತದ ಬದ್ಧತೆಯು ಸಾಂವಿಧಾನಿಕ ಮತ್ತು ಸಾಂಸ್ಕೃತಿಕವಾಗಿದ್ದು, ಆಧುನಿಕ ಸಂರಕ್ಷಿತ ಪ್ರದೇಶ ಕಾನೂನಿಗಿಂತಲೂ ಹಳೆಯದಾದ ವಿಶ್ವದೃಷ್ಟಿಕೋನದಲ್ಲಿ ಬೇರೂರಿದೆ ಎಂದು ಶ್ರೀ ಯಾದವ್ ತಿಳಿಸಿದರು. ವನ್ಯಜೀವಿಗಳನ್ನು ರಕ್ಷಿಸುವುದನ್ನು ರಾಜ್ಯ ನಿರ್ದೇಶನ ಮತ್ತು ನಾಗರಿಕರ ಕರ್ತವ್ಯವನ್ನಾಗಿ ಮಾಡುವ ಬಲವಾದ ಚೌಕಟ್ಟನ್ನು ಭಾರತವು ತನ್ನ ಸಂವಿಧಾನದಲ್ಲಿ ನಿರ್ಮಿಸಿದೆ, ಆದಾಗ್ಯೂ ಈ ಔಪಚಾರಿಕ ರಚನೆಯು ಆಳವಾದ ಮೌಲ್ಯಗಳ ಮೇಲೆ ನಿಂತಿದೆ. ಭಾರತವು ಸಿಐಟಿಇಎಸ್, ಸಿಎಂಎಸ್, ಸಿಬಿಡಿ ಮತ್ತು ರಾಮ್ ಸರ್ ಸಮಾವೇಶಗಳ ಭಾಗವಾಗಿದೆ. ಹುಲಿಗಳು, ಆನೆಗಳು, ಖಡ್ಗಮೃಗಗಳು ಮತ್ತು ಏಷ್ಯನ್ ಸಿಂಹಗಳ ಚೇತರಿಕೆಯು ದೃಢವಾದ ರಾಜಕೀಯ ಇಚ್ಛಾಶಕ್ತಿಯು ಏನನ್ನು ಸಾಧಿಸಬಲ್ಲದು ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿನ ವೈಜ್ಞಾನಿಕ ಸಂಶೋಧನೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳು ಸಂರಕ್ಷಣೆಯ ಯಶಸ್ಸಿಗೆ ಕಾರಣವಾಗಿವೆ ಎಂದೂ ಸಚಿವರು ತಿಳಿಸಿದರು. ಹುಲಿ, ಆನೆ, ಡಾಲ್ಫಿನ್, ಸಿಂಹ ಮತ್ತು ಹಿಮಚಿರತೆಯಂತಹ ತಳಿಗಳ ಸಮಗ್ರ ಭಾರತದಲ್ಲಿರುವ ಸಂಖ್ಯೆಯ ಅಂದಾಜು, ಆವಾಸಸ್ಥಾನ ಸುಧಾರಣೆ, ಕಾರಿಡಾರ್ ಗಳನ್ನು ಸುರಕ್ಷಿತಗೊಳಿಸುವುದು ಮತ್ತು ಬೃಹತ್ ಪ್ರಾಣಿ ಪ್ರಭೇದಗಳಲ್ಲಿ ಸಂಪೂರ್ಣ ಎಲ್ಲವನ್ನೊಳಗೊಳ್ಳುವ ವಲಯದ ವಿಧಾನವನ್ನು ತೆಗೆದುಕೊಳ್ಳಲು ಒಳನೋಟಗಳನ್ನು ಒದಗಿಸಿದೆ ಎಂದು ಅವರು ಒತ್ತಿಹೇಳಿದರು. ರಾಜಸ್ಥಾನದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ತಳಿಯ ಸಂರಕ್ಷಣಾ ಸಂತಾನೋತ್ಪತ್ತಿಯ ಯಶಸ್ಸು ಮತ್ತು 'ಓರಾನ್' ಎಂದು ಕರೆಯಲ್ಪಡುವ ಪವಿತ್ರ ತೋಪುಗಳ ಸಮುದಾಯ ನೇತೃತ್ವದ ರಕ್ಷಣೆ ಮತ್ತು ಸಂರಕ್ಷಣೆಯು ಭೂಮಿ ಕ್ಷೀಣಿಸುವುದನ್ನು ತಡೆಯುವ ತಟಸ್ಥತೆಗೆ ಸಹಾಯ ಮಾಡುತ್ತಿದೆ ಎಂದು ಅವರು ವಿವರಿಸಿದರು.

ಅರಣ್ಯ ಭೂಮಿ ಮತ್ತು ಜೌಗು ಪ್ರದೇಶಗಳೊಂದಿಗೆ ಹುಲ್ಲುಗಾವಲುಗಳ ಸಂರಕ್ಷಣೆಯ ಅಗತ್ಯವನ್ನು ಶ್ರೀ ಯಾದವ್ ಒತ್ತಿಹೇಳಿದರು. ಹುಲ್ಲುಗಾವಲು ಆಧಾರಿತ ಬೃಹತ್ ಸಸ್ಯಾಹಾರಿ ಪ್ರಾಣಿಗಳ ಸಂರಕ್ಷಣೆಯ ಕಡೆಗೆ ಭಾರತದ ವಿಧಾನವನ್ನು ಹಂಚಿಕೊಂಡ ಅವರು, ಒಂಟಿ ಕೊಂಬಿನ ಖಡ್ಗಮೃಗ ಮತ್ತು ಕಾಡೆಮ್ಮೆಯ ಕುರಿತು ನಡೆಯುತ್ತಿರುವ ಸಂರಕ್ಷಣಾ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ವನ್ಯಜೀವಿ ಸಂರಕ್ಷಣಾಧಿಕಾರಿಗಳು ಕೇವಲ ಚಿಂತಿಸಲು ಮಾತ್ರವಲ್ಲದೆ, ಮುನ್ನಡೆಯಲು, ಯಶಸ್ವಿಯಾದ ಕಾರ್ಯಗಳಿಂದ ಕಲಿಯಲು ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಒಟ್ಟಾಗಿ ಬರಬೇಕು ಎಂದು ಕರೆ ನೀಡುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

*****


(ಪ್ರಕಟಣೆ ಐ.ಡಿ.: 2312964) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Tamil