ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಶೂಟರ್ ಇಳವೆನಿಲ್ ವಾಲರಿವನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 20 SEP 2026 5:00PM by PIB Bengaluru

ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಶೂಟರ್ ಇಳವೆನಿಲ್ ವಾಲರಿವನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಭಾರತೀಯ ಶೂಟರ್ ಗಳು ದೇಶಕ್ಕೆ ಹೆಮ್ಮೆ ತರುವುದನ್ನು ಮುಂದುವರಿಸಿದ್ದಾರೆ ಎಂದು ಶ್ರೀ ಮೋದಿ ಹೇಳಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:

ಭಾರತೀಯ ಶೂಟರ್ ಗಳು ನಮಗೆ ಸದಾ ಹೆಮ್ಮೆ ತರುತ್ತಿದ್ದಾರೆ!

ಏಷ್ಯನ್ ಕ್ರೀಡಾಕೂಟದ 10 ಮೀಟರ್ ಏರ್ ರೈಫಲ್ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಇಳವೆನಿಲ್ ವಾಲರಿವನ್ ಅವರಿಗೆ ಅಭಿನಂದನೆಗಳು. ಇದು ಅವರ ಪಾಲಿಗೆ ಈ ದಿನದ ಎರಡನೇ ಪದಕವಾಗಿದ್ದು, ಈ ಸಾಧನೆಯನ್ನು ಮತ್ತಷ್ಟು ವಿಶೇಷವಾಗಿಸಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi

 

*****


(ಪ್ರಕಟಣೆ ಐ.ಡಿ.: 2312786) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Manipuri , Gujarati , Tamil , Malayalam