ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶರತ್‌ಚಂದ್ರ ಚಟ್ಟೋಪಾಧ್ಯಾಯ ಅವರ 150ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 15 SEP 2026 4:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಖ್ಯಾತ ಬಂಗಾಳಿ ಬರಹಗಾರ ಶರತ್‌ಚಂದ್ರ ಚಟ್ಟೋಪಾಧ್ಯಾಯ ಅವರ 150ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಖ್ಯಾತ ಬರಹಗಾರರನ್ನು ಸ್ಮರಿಸಿದ ಶ್ರೀ ನರೇಂದ್ರ ಮೋದಿ ಅವರು ಅವರ ಸಾಹಿತ್ಯ ಕೃತಿಗಳ ಶಾಶ್ವತ ಮಹತ್ವವನ್ನು ಬಿಂಬಿಸಿದರು. ಅವು ಪ್ರತಿ ಭಾರತೀಯ ಭಾಷೆ ಮತ್ತು ಹಲವಾರು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿವೆ. ಶರತ್‌ ಚಂದ್ರ ಚಟ್ಟೋಪಾಧ್ಯಾಯ ಅವರ ಬರಹಗಳು 19ನೇ ಶತಮಾನದ ಭಾರತದ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಬಂಗಾಳಿ ಸಮಾಜದ ನಿಖರ ಮತ್ತು ಸೂಕ್ಷ್ಮ ಚಿತ್ರಣವನ್ನು ಒದಗಿಸುತ್ತವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ:

ಖ್ಯಾತ ಬಂಗಾಳಿ ಬರಹಗಾರ, ಬಹುಮುಖ ಪ್ರತಿಭೆ ಶರತ್‌ಚಂದ್ರ ಚಟ್ಟೋಪಾಧ್ಯಾಯ ಅವರ 150ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನಗಳು.

ಪ್ರತಿ ಭಾರತೀಯ ಭಾಷೆ ಮತ್ತು ಹಲವಾರು ವಿದೇಶಿ ಭಾಷೆಗಳಿಗೆ ಅನುವಾದಗೊಂಡ ಅವರ ಕೃತಿಗಳು 19ನೇ ಶತಮಾನದ ಭಾರತದ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಬಂಗಾಳಿ ಸಮಾಜದ ನಿಖರವಾದ ಚಿತ್ರಣಕ್ಕಾಗಿ ಸ್ಮರಣೀಯವಾಗಿವೆ. ಸಾಮಾಜಿಕ ಸುಧಾರಣೆ, ಮಹಿಳಾ ಹಕ್ಕುಗಳು ಮತ್ತು ರಾಷ್ಟ್ರೀಯತೆಗೆ ಅವರ ಬದ್ಧತೆಯೂ ಅಷ್ಟೇ ಗಮನಾರ್ಹವಾಗಿದೆ.

ಮುಂದಿನ ದಿನಗಳಲ್ಲಿಅವರ ಬರಹಗಳನ್ನು ಓದುವಂತೆ ನಾನು ಹೆಚ್ಚಿನ ಯುವಕರಿಗೆ ಕರೆ ನೀಡುತ್ತೇನೆ ಎಂದು ಹೇಳಿದ್ದಾರೆ.

প্রখ্যাত বাঙালি লেখক, বহুমুখী প্রতিভার অধিকারী শরৎচন্দ্র চট্টোপাধ্যায়ের ১৫০তম জন্মবার্ষিকীতে জানাই বিনম্র শ্রদ্ধাঞ্জলি।

ভারতের সমস্ত ভাষায় এবং একাধিক আন্তর্জাতিক ভাষায় অনূদিত তাঁর সাহিত্যকর্মগুলি উনিশ শতকের ভারত, বিশেষ করে গ্রামীণ অঞ্চলের বাঙালি সমাজকে সঠিকভাবে চিত্রিত করার জন্য স্মরণীয় হয়ে রয়েছে। সামাজিক সংস্কার, নারী অধিকার এবং জাতীয়তাবাদের প্রতি তাঁর দায়বদ্ধতাও সমানভাবে স্মরণীয়।

আগামী দিনের তরুণ-তরুণীকে আমি আরও বেশি করে তাঁর রচনা পড়ার জন্য আহ্বান জানাচ্ছি।

 

*****


(ಪ್ರಕಟಣೆ ಐ.ಡಿ.: 2310808) ವಿಸಿಟರ್ ಕೌಂಟರ್ : 5