ಇಂಧನ ಸಚಿವಾಲಯ
ನೇಪಾಳಕ್ಕೆ ವಿದ್ಯುತ್ ರಫ್ತು ಮಾಡಲು ಅನುಮೋದನೆ
ಪ್ರಕಟಣಾ ದಿನಾಂಕ:
14 SEP 2026 1:38PM by PIB Bengaluru
ನೇಪಾಳ ವಿದ್ಯುತ್ ಪ್ರಾಧಿಕಾರಕ್ಕೆ 2026ರ ಸೆಪ್ಟೆಂಬರ್ 13 ರಿಂದ 2026ರ ಡಿಸೆಂಬರ್ 31 ರವರೆಗೆ ಪ್ರತಿದಿನ 18 ಗಂಟೆಗಳ ಕಾಲ (00:00 ಗಂಟೆಯಿಂದ 18:00 ಗಂಟೆಯವರೆಗೆ) ವಿದ್ಯುತ್ ರಫ್ತು ಮಾಡಲು ಇಂಧನ ಸಚಿವಾಲಯ ಅನುಮೋದನೆ ನೀಡಿದೆ.
ಮುಜಫರ್ ಪುರ್ - ಧಲ್ಕೆಬಾರ್ 400 ಕಿಲೋವ್ಯಾಟ್ ಡಿಸಿ ಮಾರ್ಗದ (ಏಕಮುಖವಾಗಿ ಪ್ರವಹಿಸುವ ವಿದ್ಯುತ್) ಮೂಲಕ 600 ಮೆಗಾ ವ್ಯಾಟ್ ವರೆಗೆ ಹಾಗೂ ತನಕ್ ಪುರ-ಮಹೇಂದ್ರನಗರ 132 ಕಿಲೋವ್ಯಾಟ್ ಸಿಂಗಲ್ ಸರ್ಕ್ಯೂಟ್ (ಮೂರು ಹಂತಹ ವಿದ್ಯುತ್ ಪ್ರವಾಹಕ) ಮಾರ್ಗದ ಮೂಲಕ 54 ಮೆಗಾ ವ್ಯಾಟ್ ವರೆಗೆ ವಿದ್ಯುತ್ ರಫ್ತು ಮಾಡಲು ಅನುಮೋದನೆ ನೀಡಲಾಗಿದೆ. 2027 ರ ಜನವರಿಯಿಂದ ರಫ್ತು ಮಾಡಬಹುದಾದ ವಿದ್ಯುತ್ ಪ್ರಮಾಣವನ್ನು ಡಿಸೆಂಬರ್ 2026 ರಲ್ಲಿ ಪರಾಮರ್ಶಿಸಲಾಗುವುದು.
ಇತ್ತೀಚಿನ ಪ್ರವಾಹಗಳು ನೇಪಾಳದ ಜಲವಿದ್ಯುತ್ ಮೂಲಸೌಕರ್ಯಕ್ಕೆ ಅಪಾರ ಹಾನಿಯನ್ನುಂಟು ಮಾಡಿದ್ದು, ಇದರಿಂದಾಗಿ ದೇಶೀಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕುಗ್ಗಿದ್ದು, ಹೆಚ್ಚುವರಿ ವಿದ್ಯುತ್ ನ ಅಗತ್ಯ ಎದುರಾಗಿದೆ. ಈ ಅನುಮೋದನೆಯು ಸಂಕಷ್ಟದ ಸಮಯದಲ್ಲಿ ನೇಪಾಳದ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಪೂರಕವಾಗಿದೆಯಲ್ಲದೇ, ಭಾರತ ಮತ್ತು ನೇಪಾಳ ನಡುವಿನ ನಿಕಟ ಹಾಗೂ ದೀರ್ಘಕಾಲೀನ ಇಂಧನ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ.
ನೇಪಾಳಕ್ಕೆ ಬೆಂಬಲ ನೀಡಲು ಹಾಗೂ ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಭಾರತದ ಬದ್ಧತೆ ಮುಂದುವರಿಯಲಿದೆ.
*****
(ಪ್ರಕಟಣೆ ಐ.ಡಿ.: 2310281)
ವಿಸಿಟರ್ ಕೌಂಟರ್ : 50