ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು, ಅಲ್ಲಿನ ಜನತೆ ಮತ್ತು ವಿಶ್ವಾದ್ಯಂತದ ಯಹೂದಿ ಸಮುದಾಯಗಳಿಗೆ ರೋಶ್ ಹಶ್ ನಾಹ್ ಪ್ರಯುಕ್ತ ಪ್ರಧಾನಮಂತ್ರಿ ಶುಭ ಹಾರೈಕೆ

ಪ್ರಕಟಣಾ ದಿನಾಂಕ: 12 SEP 2026 2:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೋಶ್ ಹಶ್ ನಾಹ್ ಹಬ್ಬದ ನಿಮಿತ್ತ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್‌ ನ ಜನತೆ ಮತ್ತು ವಿಶ್ವದಾದ್ಯಂತ ಇರುವ ಯಹೂದಿ ಸಮುದಾಯದವರಿಗೆ ಶುಭಾಶಯ ಕೋರಿದ್ದಾರೆ.

ಹೊಸ ವರ್ಷವು ಎಲ್ಲರಿಗೂ ಶಾಂತಿ, ಭರವಸೆ, ಉತ್ತಮ ಆರೋಗ್ಯ ಮತ್ತು ನಿರಂತರ ಸಮೃದ್ಧಿ ತರಲಿ ಎಂದು ಪ್ರಧಾನಮಂತ್ರಿ ಆಶಿಸಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಉತ್ತಮ ವರ್ಷದ ಹಾರೈಕೆಗಳು (ಶಾನಾ ತೋವಾ)!

ಇಸ್ರೇಲ್‌ ಪ್ರಧಾನಮಂತ್ರಿ ನೆತನ್ಯಾಹು, ಅಲ್ಲಿನ ಜನರು ಮತ್ತು ಜಗತ್ತಿನಾದ್ಯಂತದ ಯಹೂದಿ ಸಮುದಾಯದವರಿಗೆ ರೋಶ್ ಹಶ್ ನಾಹ್ ಅಂಗವಾಗಿ ಹಾರ್ದಿಕ ಶುಭಾಶಯಗಳು.

ಸರ್ವರಿಗೂ ಹೊಸ ವರ್ಷದಲ್ಲಿ ಶಾಂತಿ, ಭರವಸೆ, ಉತ್ತಮ ಆರೋಗ್ಯ ಮತ್ತು ನಿರಂತರ ಪ್ರಗತಿ ತುಂಬಿರಲಿ.

שנה טובה!

 

מאחל שנה טובה ושמחה לראש הממשלה נתניהו, לעם ישראל ולקהילות היהודיות ברחבי העולם.

 

‎מי ייתן והשנה החדשה תביא עמה שלום, תקווה, בריאות טובה וקדמה לכולם.

‎@netanyahu‬”

 

*****


(ಪ್ರಕಟಣೆ ಐ.ಡಿ.: 2309521) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Assamese , Punjabi , Gujarati , Tamil , Telugu , Malayalam