ಹಣಕಾಸು ಸಚಿವಾಲಯ
azadi ka amrit mahotsav

2026ರ ಅಕ್ಟೋಬರ್ 1 ರಿಂದ 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್, 2026 ಜಾರಿಗೆ


ಸಾಕ್ಷ್ಯವಾಗಿ ಬ್ಯಾಂಕಿಂಗ್ ದಾಖಲೆಗಳ ಬಳಕೆಗೆ ಸಂಬಂಧಿಸಿದ ಕಾನೂನು ಚೌಕಟ್ಟು ಆಧುನೀಕರಿಣಗೊಳಿಸಲಿದೆ ಈ ಕಾಯಿದೆ

ಕಾನೂನು ಪ್ರಕ್ರಿಯೆಗಳಲ್ಲಿ ಬ್ಯಾಂಕಿಂಗ್ ದಾಖಲೆಗಳ ಬಳಕೆ ಸುಲಭಗೊಳಿಸಲು ಪ್ರಕ್ರಿಯೆ ಸರಳೀಕರಣ ಮತ್ತು ಪ್ರಮಾಣೀಕರಣ

ಪ್ರಕಟಣಾ ದಿನಾಂಕ: 11 SEP 2026 2:53PM by PIB Bengaluru

ಬ್ಯಾಂಕಿಂಗ್ ಮತ್ತು ಹಣಕಾಸು ವಲಯವನ್ನು ಬಲವರ್ಧನೆಗೊಳಿಸಲು 'ವ್ಯಾಪಾರವನ್ನು ಸುಲಭವಾಗಿ ನಡೆಸುವುದನ್ನು (ease of doing business) ಉತ್ತೇಜಿಸಲು ಮತ್ತು ಆರ್ಥಿಕತೆಯ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಕಾನೂನು ಹಾಗೂ ನಿಯಂತ್ರಕ ಚೌಕಟ್ಟನ್ನು ಆಧುನೀಕರಿಸಲು ಕೇಂದ್ರ ಸರ್ಕಾರವು ನಿರಂತರವಾಗಿ ಸುಧಾರಣೆಗಳನ್ನು ಕೈಗೊಂಡಿದೆ. ಬ್ಯಾಂಕಿಂಗ್ ಪದ್ಧತಿಗಳು ಮತ್ತು ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಬ್ಯಾಂಕಿಂಗ್ ದಾಖಲೆಗಳಿಗೆ ಸಂಬಂಧಿಸಿದ ಕಾನೂನುಗಳು ಕೂಡ ಈ ಬದಲಾವಣೆಗಳಿಗೆ ಅನುಗುಣವಾಗಿರಬೇಕಾದ ಅಗತ್ಯವಿದೆ.

2026ರ ಆಗಸ್ಟ್ 13 ರಂದು ರಾಷ್ಟ್ರಪತಿಗಳ ಅಂಕಿತ ಪಡೆದ 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್, 2026'ಯು, 'ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್, 1891' ರ ಸ್ಥಾನವನ್ನು ಪಡೆಯುತ್ತದೆ. ಅಲ್ಲದೆ, ಇದು ಸಮಕಾಲೀನ ಬ್ಯಾಂಕಿಂಗ್ ಪದ್ಧತಿಗಳಿಗೆ ಅನುಗುಣವಾಗಿ ಸಾಕ್ಷ್ಯವಾಗಿ ಬ್ಯಾಂಕಿಂಗ್ ದಾಖಲೆಗಳನ್ನು ಬಳಸಲು ಆಧುನಿಕ ಚೌಕಟ್ಟನ್ನು ಒದಗಿಸುತ್ತದೆ.

2026ರ ಸೆಪ್ಟೆಂಬರ್ 10 ಅಧಿಸೂಚನೆಯು (ಗೆಜೆಟ್ ಅಧಿಸೂಚನೆಯ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ), ಈ ಕಾಯಿದೆಯ ನಿಬಂಧನೆಗಳು ಜಾರಿಗೆ ಬರುವ ದಿನವನ್ನು 2026ರ ಅಕ್ಟೋಬರ್ 1 ಎಂದು ನಿಗದಿಪಡಿಸಿದೆ.

ಭೌತಿಕ, ಎಲೆಕ್ಟ್ರಾನಿಕ್, ಡಿಜಿಟಲ್, ವರ್ಚುವಲ್, ಕ್ಲೌಡ್-ಆಧಾರಿತ ಮತ್ತು ಇತರ ಸಮಕಾಲೀನ ರೂಪಗಳಲ್ಲಿ ನಿರ್ವಹಿಸಲಾದ ಬ್ಯಾಂಕಿಂಗ್ ದಾಖಲೆಗಳನ್ನು ಗುರುತಿಸುವ ಮೂಲಕ ಈ ಕಾಯಿದೆಯು ತಂತ್ರಜ್ಞಾನ-ತಟಸ್ಥ ವಿಧಾನವನ್ನು ಅಳವಡಿಸಿಕೊಂಡಿದೆ. ಇದು ಹಸ್ತಚಾಲಿತ, ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಸಹಿಗಳ ಮೂಲಕ ಬ್ಯಾಂಕಿಂಗ್ ದಾಖಲೆಗಳ ಸರಳೀಕೃತ ಮತ್ತು ಪ್ರಮಾಣೀಕೃತ ಪ್ರಮಾಣೀಕರಣವನ್ನು ಸಹ ಒದಗಿಸುತ್ತದೆ.

ಬ್ಯಾಂಕ್ ವಿಚಾರಣೆಯಲ್ಲಿ ಪಕ್ಷವಾಗಿಲ್ಲದ ಬ್ಯಾಂಕ್ ಅಧಿಕಾರಿಗಳಿಗೆ ಸಮನ್ಸ್ ನೀಡುವ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ಒದಗಿಸಲಾಗಿದೆ, ಅಂತಹ ಸಮನ್ಸ್‌ಗೆ ನ್ಯಾಯಾಲಯವು "ವಿಶೇಷ ಕಾರಣ" ವನ್ನು ಲಿಖಿತವಾಗಿ ದಾಖಲಿಸಬೇಕು.

ಅಲ್ಲದೆ, ಕೇಂದ್ರ ಸರ್ಕಾರವು ನಿರ್ದಿಷ್ಟ ಹಣಕಾಸು ವಲಯದ ಘಟಕಗಳು ಅಥವಾ ಘಟಕಗಳ ವರ್ಗಗಳಿಗೆ ನಿಬಂಧನೆಗಳನ್ನು ವಿಸ್ತರಿಸಬಹುದು, ಇದು ವಿಕಸನಗೊಳ್ಳುತ್ತಿರುವ ಆರ್ಥಿಕ ಆಯಾಮವನ್ನು ಪೂರೈಸಲು ಚೌಕಟ್ಟನ್ನು ಅನುಮತಿಸುತ್ತದೆ.

ಈ ಸುಧಾರಣೆಗಳು ತಾಂತ್ರಿಕ ಪ್ರಗತಿಗಳು ಮತ್ತು ವಿಕಸನಗೊಳ್ಳುತ್ತಿರುವ ಆರ್ಥಿಕ ಅಗತ್ಯಗಳಿಗೆ ಅನುಗುಣವಾಗಿ ಕಾನೂನುಗಳನ್ನು ಆಧುನೀಕರಿಸಲು, ವ್ಯವಹಾರ ಮಾಡುವ ಸುಲಭತೆಯನ್ನು ಉತ್ತೇಜಿಸಲು ಮತ್ತು ಆಧುನಿಕ ಮತ್ತು ಪರಿಣಾಮಕಾರಿ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.

2026ರ ಸೆಪ್ಟೆಂಬರ್ 10 ಗೆಜೆಟ್ ಅಧಿಸೂಚನೆಗಾಗಿ ಲಿಂಕ್:

https://egazette.gov.in/(S(0v51umtjulhvflhxyeripblv))/ViewPDF.aspx

https://egazette.gov.in/(S(blcfbghvrddn1sxjnyv5hrpw))/ViewPDF.aspx

 

*****


(ಪ್ರಕಟಣೆ ಐ.ಡಿ.: 2309148) ವಿಸಿಟರ್ ಕೌಂಟರ್ : 25
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , हिन्दी , Gujarati , Tamil , Malayalam