ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

9/11 ದಾಳಿಯ ಸಂತ್ರಸ್ತರನ್ನು ಸ್ಮರಿಸಿದ ಪ್ರಧಾನಮಂತ್ರಿ, ಭಯೋತ್ಪಾದನೆ ವಿರುದ್ಧ ಹೋರಾಡುವ ದೃಢ ಸಂಕಲ್ಪ ಪುನರುಚ್ಚಾರ

ಪ್ರಕಟಣಾ ದಿನಾಂಕ: 11 SEP 2026 11:48AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೀಕರ 9/11 ದಾಳಿಯ 25ನೇ ವಾರ್ಷಿಕೋತ್ಸವದಂದು ಸಂತ್ರಸ್ತರನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು ಹಾಗೂ ಆ ಘಟನೆಯಿಂದಾಗಿ ತಮ್ಮ ಜೀವನವನ್ನೇ ಶಾಶ್ವತವಾಗಿ ಬದಲಾಯಿಸಿಕೊಂಡ ಕುಟುಂಬಗಳಿಗೆ ಒಗ್ಗಟ್ಟನ್ನು ಸೂಚಿಸಿದರು.

ಭಯೋತ್ಪಾದನೆಯು ವಿಶ್ವದಾದ್ಯಂತ ಅಸಂಖ್ಯಾತ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ, ಗಡಿಯಾಚೆಗಿನ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿರುವ ಭಾರತವು, ಕಳೆದ ಹಲವು ದಶಕಗಳಿಂದ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರತಿಪಾದಿಸಿದರು.

ಭಯೋತ್ಪಾದನೆಯ ಬೆದರಿಕೆಯ ಸ್ವರೂಪ ಬದಲಾಗುತ್ತಲೇ ಇದ್ದರೂ, ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಭಾರತದ ದೃಢ ಸಂಕಲ್ಪ ಮತ್ತು ವಿರೋಧವು ಅಚಲವಾಗಿದೆ ಎಂದು ಅವರು ಹೇಳಿದರು. ಈ ಪಿಡುಗಿನ ವಿರುದ್ಧದ ಹೋರಾಟದ ಎಲ್ಲಾ ಪ್ರಯತ್ನಗಳೊಂದಿಗೆ ತಾವು ಒಗ್ಗಟ್ಟಿನಿಂದ ನಿಲ್ಲುವುದಾಗಿ ಅವರು ತಿಳಿಸಿದರು.

2014ರಲ್ಲಿ ತಾವು '9/11 ಸ್ಮಾರಕ ಮತ್ತು ವಸ್ತುಸಂಗ್ರಹಾಲಯ'ಕ್ಕೆ ಭೇಟಿ ನೀಡಿದ್ದ ಕ್ಷಣಗಳನ್ನೂ ಪ್ರಧಾನಮಂತ್ರಿ ಹಂಚಿಕೊಂಡಿದ್ದಾರೆ.

ಶ್ರೀ ನರೇಂದ್ರ ಮೋದಿ ತಮ್ಮ 'ಎಕ್ಸ್' ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:

"ಭೀಕರ 9/11 ದಾಳಿ ನಡೆದು 25 ವರ್ಷಗಳು ಕಳೆದಿವೆ; ಈ ಸಂದರ್ಭದಲ್ಲಿ ನಾವು ಸಂತ್ರಸ್ತರನ್ನು ಸ್ಮರಿಸಿ ಗೌರವಿಸುತ್ತೇವೆ ಮತ್ತು ಆ ಘಟನೆಯಿಂದಾಗಿ ತಮ್ಮ ಜೀವನವನ್ನೇ ಶಾಶ್ವತವಾಗಿ ಬದಲಾಯಿಸಿಕೊಂಡ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ.

ಭಯೋತ್ಪಾದನೆಯು ವಿಶ್ವದಾದ್ಯಂತ ಅಸಂಖ್ಯಾತ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.  ಗಡಿಯಾಚೆಗಿನ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿರುವ ಭಾರತವು, ಕಳೆದ ಹಲವು ದಶಕಗಳಿಂದ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದೆ.

ಭಯೋತ್ಪಾದನೆಯ ಬೆದರಿಕೆಯ ಸ್ವರೂಪ ಬದಲಾಗುತ್ತಲೇ ಇದ್ದರೂ, ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ನಮ್ಮ ದೃಢ ಸಂಕಲ್ಪ ಮತ್ತು ವಿರೋಧವು ಅಚಲವಾಗಿದೆ. ಈ ಪಿಡುಗಿನ ವಿರುದ್ಧದ ಹೋರಾಟದ ಎಲ್ಲಾ ಪ್ರಯತ್ನಗಳೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ.

2014ರಲ್ಲಿ ನಾನು '9/11 ಸ್ಮಾರಕ ಮತ್ತು ವಸ್ತುಸಂಗ್ರಹಾಲಯ'ಕ್ಕೆ ಭೇಟಿ ನೀಡಿದ್ದ ಕ್ಷಣಗಳು ಇಲ್ಲಿವೆ."

 

*****


(ಪ್ರಕಟಣೆ ಐ.ಡಿ.: 2309066) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , हिन्दी , Manipuri , Assamese , Gujarati , Telugu , Malayalam