ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಜಾಗತಿಕ ಫಿನ್‌ಟೆಕ್ ಫೆಸ್ಟ್ 2026ರಲ್ಲಿ ಆಧಾರ್ ಫೇಸ್ ಅಥೆಂಟಿಕೇಶನ್ ಎಸ್‌ಡಿಕೆ (SDK) ಮತ್ತು ಸ್ಯಾಂಡ್‌ಬಾಕ್ಸ್ ಬಿಡುಗಡೆ ಮಾಡಿದ ಯುಐಡಿಎಐ (UIDAI)


ಆರ್‌ಬಿಐ (RBI) ಕಡ್ಡಾಯಗೊಳಿಸಿರುವ ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್‌ಗಾಗಿ ಬಿಎಫ್‌ಎಸ್‌ಐ (BFSI) ವಲಯದ ಸಂಸ್ಥೆಗಳು ಆಧಾರ್ ಫೇಸ್ ಅಥೆಂಟಿಕೇಶನ್ ಬಳಸುವುದನ್ನು ಇದು ಇನ್ನಷ್ಟು ಸುಲಭಗೊಳಿಸುತ್ತದೆ

ಬಳಕೆದಾರರ ಪಯಣ ಸರಳೀಕರಣ: ಆಧಾರ್ ಫೇಸ್ ಅಥೆಂಟಿಕೇಶನ್‌ಗಾಗಿ ಹಲವು ಆಪ್‌ಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ

ಪ್ರಕಟಣಾ ದಿನಾಂಕ: 09 SEP 2026 6:15PM by PIB Bengaluru

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಬುಧವಾರ ಜಾಗತಿಕ ಫಿನ್‌ಟೆಕ್ ಫೆಸ್ಟ್ 2026ರಲ್ಲಿ, ಆಧಾರ್ ಫೇಸ್ ದೃಢೀಕರಣ ಎಸ್‌ಡಿಕೆ (ಸಾಫ್ಟ್‌ವೇರ್ ಅಭಿವೃದ್ಧಿ ಕಿಟ್) ಮತ್ತು ಆಧಾರ್ ಫೇಸ್ ದೃಢೀಕರಣ ಸ್ಯಾಂಡ್‌ಬಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಇದು ಪರಿಸರ ವ್ಯವಸ್ಥೆಯ ಪಾಲುದಾರರಿಗೆ ತಮ್ಮ ಡಿಜಿಟಲ್ ಅಪ್ಲಿಕೇಶನ್‌ಗಳೊಳಗೆ ಆಧಾರ್ ಫೇಸ್ ದೃಢೀಕರಣವನ್ನು ತಡೆರಹಿತವಾಗಿ ಸಂಯೋಜಿಸಲು, ಪರೀಕ್ಷಿಸಲು ಮತ್ತು ನಿಯೋಜಿಸಲು ಅನುವು ಮಾಡಿಕೊಡುತ್ತದೆ.

ಆಧಾರ್ ಫೇಸ್ ದೃಢೀಕರಣ ಎಸ್‌ಡಿಕೆಯು, ಯುಐಡಿಎಐನ ಫೇಸ್ ದೃಢೀಕರಣ ಸಾಮರ್ಥ್ಯವನ್ನು ನೇರವಾಗಿ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಆಪ್‌ಗಳಿಗೆ ತರುತ್ತದೆ. ಇದು ಬಳಕೆದಾರರು ವಿವಿಧ ಅಪ್ಲಿಕೇಶನ್‌ಗಳ ನಡುವೆ ಬದಲಾಯಿಸುವ ಅಗತ್ಯವನ್ನು ನಿವಾರಿಸುತ್ತದೆ, ಮತ್ತು ಒಂದೇ ಆಪ್‌ನಲ್ಲಿ ಸುಗಮವಾದ ದೃಢೀಕರಣ ಅನುಭವವನ್ನು ನೀಡುತ್ತದೆ.

ಬಳಕೆಗೆ ಸಿದ್ಧವಾಗಿರುವ ಈ ಎಸ್‌ಡಿಕೆ, ಎಐ/ಎಮ್‌ಎಲ್ (AI/ML) ಆಧಾರಿತ ಲೈವ್‌ನೆಸ್ ಮತ್ತು ಆಂಟಿ-ಸ್ಪೂಫಿಂಗ್ ಸಾಮರ್ಥ್ಯಗಳನ್ನು ಒಳಗೊಂಡಿದ್ದು, ಪರಿಸರ ವ್ಯವಸ್ಥೆಯ ಪಾಲುದಾರರಿಗೆ ಸಂಯೋಜನೆಯನ್ನು ಸರಳಗೊಳಿಸುತ್ತದೆ. ಇದು ದೃಢೀಕರಣ ದತ್ತಾಂಶದ ಸುರಕ್ಷಿತ ನಿರ್ವಹಣೆ ಮತ್ತು ಎನ್‌ಕ್ರಿಪ್ಶನ್ ಅನ್ನು ಸಹ ಬೆಂಬಲಿಸುತ್ತದೆ ಹಾಗೂ ಗ್ರಾಹಕರ ಸ್ಮಾರ್ಟ್‌ಫೋನ್‌ಗಳಾದ್ಯಂತ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಸರ್ಕಾರಿ ಇಲಾಖೆಗಳು, ಬ್ಯಾಂಕುಗಳು, ಫಿನ್‌ಟೆಕ್‌ಗಳು ಮತ್ತು ಇತರ ಸಂಸ್ಥೆಗಳು ಫೇಸ್ ದೃಢೀಕರಣ ಆಧಾರಿತ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯೋಜಿಸಲು ಈ ಎಸ್‌ಡಿಕೆ ನೆರವಾಗುವ ನಿರೀಕ್ಷೆಯಿದೆ.

ಎಸ್‌ಡಿಕೆ ಜೊತೆಗೆ, ಯುಐಡಿಎಐ ಆಧಾರ್ ಫೇಸ್ ದೃಢೀಕರಣ ಸ್ಯಾಂಡ್‌ಬಾಕ್ಸ್ ಅನ್ನು ಸಹ ಬಿಡುಗಡೆ ಮಾಡಿದೆ. ಇದೊಂದು ಸುರಕ್ಷಿತ ಮತ್ತು ನಿಯಂತ್ರಿತ ವಾತಾವರಣವಾಗಿದ್ದು, ಪ್ರೊಡಕ್ಷನ್ ಓನ್‌ಬೋರ್ಡಿಂಗ್‌ಗೆ ಮುನ್ನ ಸಂಪೂರ್ಣ ಫೇಸ್ ಅಥೆಂಟಿಕೇಶನ್ ಪಯಣವನ್ನು ಸಂಯೋಜಿಸಲು, ಪರೀಕ್ಷಿಸಲು ಮತ್ತು ಸಿಂಧುಗೊಳಿಸಲು ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ.

ಬಾಹ್ಯ ಬಯೋಮೆಟ್ರಿಕ್ ಹಾರ್ಡ್‌ವೇರ್ ಅಗತ್ಯವಿಲ್ಲದೇ, ಬಳಕೆದಾರರ ಅನುಮತಿ, ಮುಖದ ಫೋಟೋ ಸೆರೆಹಿಡಿಯುವಿಕೆ, ಲೈವ್‌ನೆಸ್ ತಪಾಸಣೆ, ದೃಢೀಕರಣ, ದೋಷ ನಿರ್ವಹಣೆ ಮತ್ತು ಪ್ರತಿಕ್ರಿಯೆ ಸಿಂಧುಗೊಳಿಸುವಿಕೆ ಸೇರಿದಂತೆ ಪ್ರಮುಖ ಹಂತಗಳನ್ನು ಪರೀಕ್ಷಿಸಲು ಡೆವಲಪರ್‌ಗಳು ಮತ್ತು ಕ್ವಾಲಿಟಿ ಅಶ್ಯೂರೆನ್ಸ್ ತಂಡಗಳಿಗೆ ಈ ಸ್ಯಾಂಡ್‌ಬಾಕ್ಸ್ ಅನುವು ಮಾಡಿಕೊಡುತ್ತದೆ. ಅಮಾನ್ಯ ಡಿಜಿಟಲ್ ಸಹಿಗಳು, ನೆಟ್‌ವರ್ಕ್ ಅಡಚಣೆಗಳು, ಟೈಮ್‌ಔಟ್‌ಗಳು ಮತ್ತು ಸ್ಪೂಫಿಂಗ್ ಯತ್ನಗಳಂತಹ ವಿಫಲತೆಯ ಸನ್ನಿವೇಶಗಳನ್ನು ಪರೀಕ್ಷಿಸಲು ಇದು ಅನುಮತಿಸುತ್ತದೆ.

ಎಸ್‌ಡಿಕೆ ಮತ್ತು ಸ್ಯಾಂಡ್‌ಬಾಕ್ಸ್ ಬಿಡುಗಡೆಯು, ಬ್ಯಾಂಕ್/ಫಿನ್‌ಟೆಕ್ ಸಂಸ್ಥೆಯ ಮೊಬೈಲ್ ಅಪ್ಲಿಕೇಶನ್ ಒಳಗಿನಿಂದಲೇ ತಡೆರಹಿತ ಮತ್ತು ಸುರಕ್ಷಿತ ಬಳಕೆದಾರರ ನೊಂದಾವಣೆ  ಪಯಣವನ್ನು ನಿರ್ಮಿಸಲು ಫಿನ್‌ಟೆಕ್ ಮತ್ತು ಬ್ಯಾಂಕಿಂಗ್ ಪರಿಸರ ವ್ಯವಸ್ಥೆಯು ಬಹಳ ದಿನಗಳಿಂದ ಇಟ್ಟಿದ್ದ ಬೇಡಿಕೆಯನ್ನು ಈಡೇರಿಸುತ್ತದೆ.

ಇದು ಬಳಕೆದಾರರ ಪಯಣವನ್ನು ಸರಳಗೊಳಿಸುತ್ತದೆ. ಬಳಕೆದಾರರು ಬ್ಯಾಂಕಿಂಗ್/ವಿಮೆ/ಬ್ರೋಕಿಂಗ್ ಆಪ್‌ನಂತಹ ಕೇವಲ ಒಂದೇ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ ಮತ್ತು ಆಪ್ ಒಳಗಿನಿಂದಲೇ ಆಧಾರ್ ದೃಢೀಕರಣ ಪೂರ್ಣಗೊಳಿಸುತ್ತಾರೆ. ಈ ಮೊದಲು, ಇಂತಹ ಅನುಭವಕ್ಕಾಗಿ 'ಫೇಸ್ ಆರ್‌ಡಿ' (FaceRD) ಎಂಬ ಬ್ಯಾಕ್‌ಗ್ರೌಂಡ್ ಆಪ್ ಅಗತ್ಯವಿತ್ತು. ಇದು ಬಳಕೆದಾರರ ನೊಂದಾವಣೆ  ಪ್ರಕ್ರಿಯೆಯನ್ನು ಸುದೀರ್ಘಗೊಳಿಸುತ್ತಿತ್ತು ಮತ್ತು ಆಧಾರ್ ಫೇಸ್ ಆರ್‌ಡಿ ಆಪ್‌ನ ಉಪಸ್ಥಿತಿಯ ಮೇಲೆ ಅವಲಂಬಿತವಾಗುವಂತೆ ಮಾಡುತ್ತಿತ್ತು. ಈ ಬಿಡುಗಡೆಯೊಂದಿಗೆ, ಆಧಾರ್ ಫೇಸ್ ದೃಢೀಕರಣಕ್ಕಾಗಿ ಹಲವು ಆಪ್‌ಗಳ ಅಗತ್ಯ ಕಡಿಮೆಯಾಗಿದೆ.

2021ರಲ್ಲಿ ಬಿಡುಗಡೆಯಾದ ಯುಐಡಿಎಐನ ಸ್ವದೇಶಿ ವಿನ್ಯಾಸದ ಎಐ/ಎಮ್‌ಎಲ್ ಚಾಲಿತ ಫೇಸ್ ದೃಢೀಕರಣ ಪರಿಹಾರವು 500 ಕೋಟಿಗೂ ಹೆಚ್ಚು ವಹಿವಾಟುಗಳನ್ನು ಸಂಸ್ಕರಿಸಿದೆ. ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು, ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು, ಟೆಲಿಕಾಂ ಆಪರೇಟರ್‌ಗಳು, ಬ್ರೋಕರೇಜ್ ಸಂಸ್ಥೆಗಳು ಮತ್ತು ಪ್ರಮಾಣೀಕರಣ ಪ್ರಾಧಿಕಾರಗಳು ಸೇರಿದಂತೆ ಸುಮಾರು 200 ಸಂಸ್ಥೆಗಳು ಇದನ್ನು ಅಳವಡಿಸಿಕೊಂಡಿವೆ. ಈ ತಂತ್ರಜ್ಞಾನವು ನಾವೀನ್ಯತೆ ವಿಭಾಗದ ಅಡಿಯಲ್ಲಿ 'ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿ 2023' ಅನ್ನು ಪಡೆದುಕೊಂಡಿದೆ.

ಪಿಂಚಣಿದಾರರು ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸಲ್ಲಿಸುವುದು, ಆಯುಷ್ಮಾನ್ ಭಾರತ್ ಫಲಾನುಭವಿಗಳ ನೋಂದಣಿ, ಡಿಬಿಟಿ (DBT) ಯೋಜನೆಗಳು, ಆಧಾರ್ ಆಧಾರಿತ ಪಾವತಿಗಳು, ಇ-ಕೆವೈಸಿ (e-KYC) ಮೂಲಕ ಸಿಮ್ ಸಕ್ರಿಯಗೊಳಿಸುವಿಕೆ, ಪಿಎಂ ಇ-ಡ್ರೈವ್, ಪಿಎಂ ಆವಾಸ್ ಯೋಜನೆ ಮತ್ತು ಪಿಎಂ ಕಿಸಾನ್ ಮುಂತಾದ ಯೋಜನೆಗಳ ಫಲಾನುಭವಿಗಳ ದೃಢೀಕರಣದಂತಹ ಸೇವೆಗಳಾದ್ಯಂತ ಫೇಸ್ ದೃಢೀಕರಣವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಬಿಎಫ್‌ಎಸ್‌ಐ ಸಂಸ್ಥೆಗಳು ತಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ಇತರ ವ್ಯಾಪಾರ ಪಾಲುದಾರರ ಗುರುತಿನ ಪರಿಶೀಲನೆಗಾಗಿ ಯುಐಡಿಎಐ ದೃಢೀಕರಣ ಪರಿಸರ ವ್ಯವಸ್ಥೆಯಲ್ಲಿ ಸೇರ್ಪಡೆಗೊಳ್ಳಲು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ “ಪ್ಲೇಬುಕ್ ಆನ್ ಈಸ್ ಆಫ್ ಆನ್ ಬೋರ್ಡಿಂಗ್” ಅನ್ನು ಸಹ ಯುಐಡಿಎಐ ಅನಾವರಣಗೊಳಿಸಿದೆ.

 

*****


(ಪ್ರಕಟಣೆ ಐ.ಡಿ.: 2308557) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , Urdu , Marathi , हिन्दी , Assamese , Telugu