ರಾಷ್ಟ್ರಪತಿಗಳ ಕಾರ್ಯಾಲಯ
ಜನ್ಮಾಷ್ಟಮಿ ಪ್ರಯುಕ್ತ ಭಾರತದ ರಾಷ್ಟ್ರಪತಿ ಅವರಿಂದ ಶುಭ ಹಾರೈಕೆ
ಪ್ರಕಟಣಾ ದಿನಾಂಕ:
03 SEP 2026 7:09PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಜನ್ಮಾಷ್ಟಮಿ ಪ್ರಯುಕ್ತ ನೀಡಿರುವ ಸಂದೇಶ ಹೀಗಿದೆ:
“ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಶುಭ ಹಾರೈಕೆಗಳು.
ಭಗವಾನ್ ಶ್ರೀ ಕೃಷ್ಣನ ಜೀವನ ಮತ್ತು ಬೋಧನೆಗಳು ಭಾರತೀಯ ಸಾಂಸ್ಕೃತಿಕ ಮತ್ತು ತತ್ವಶಾಸ್ತ್ರ ಪರಂಪರೆಗೆ ಹೊಸ ಜೀವ ತುಂಬಿವೆ. ಭಗವಾನ್ ಶ್ರೀ ಕೃಷ್ಣನು ಸತ್ಯ, ಸದಾಚಾರ, ನ್ಯಾಯ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಮಾರ್ಗವನ್ನು ತೋರಿದನು. ಕಷ್ಟದ ಸಮಯದಲ್ಲಿ ವಿವೇಚನಾಯುತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನೈತಿಕ ಮೌಲ್ಯಗಳನ್ನು ಅಚಲವಾಗಿ ಹೊಂದಲು ಶ್ರೀಮದ್ ಭಗವದ್ಗೀತೆಯಲ್ಲಿನ ಬೋಧನೆಗಳು, ಮಾನವೀಯತೆಗೆ ಶಾಶ್ವತ ಸ್ಫೂರ್ತಿಯ ಸೆಲೆಯಾಗಿದೆ.
ಸಾಮರಸ್ಯದ ಮನೋಭಾವವನ್ನು ಹಾಗೂ ಕರ್ತವ್ಯ ಮತ್ತು ಸೇವೆಗೆ ಸಮರ್ಪಣೆಯನ್ನು ಎತ್ತಿಹಿಡಿಯಲು ಜನ್ಮಾಷ್ಟಮಿಯ ಪವಿತ್ರ ಹಬ್ಬ ನಮಗೆ ಸ್ಫೂರ್ತಿ ನೀಡುತ್ತದೆ.
ಈ ಶುಭ ಸಂದರ್ಭದಲ್ಲಿ, ಭಗವಾನ್ ಶ್ರೀ ಕೃಷ್ಣನ ಆದರ್ಶಗಳನ್ನು ಪಾಲಿಸುವ ಹಾಗೂ ಎಲ್ಲರನ್ನೂ ಒಳಗೊಂಡ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ಅವಿಶ್ರಾಂತವಾಗಿ ಶ್ರಮಿಸುವ ಸಂಕಲ್ಪ ಮಾಡೋಣ.”
*****
(ಪ್ರಕಟಣೆ ಐ.ಡಿ.: 2306617)
ವಿಸಿಟರ್ ಕೌಂಟರ್ : 9