ಪ್ರಧಾನ ಮಂತ್ರಿಯವರ ಕಛೇರಿ
ಖೇಲೋ ಇಂಡಿಯಾ ಸಂವಾದದ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
27 AUG 2026 9:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖೇಲೋ ಇಂಡಿಯಾ ಸಂವಾದದ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನ ಮಂತ್ರಿಗಳು, ಕೇಂದ್ರ ಸಂಪುಟ ಸದಸ್ಯರು, ಮುಖ್ಯಮಂತ್ರಿಗಳು ಮತ್ತು ಲಕ್ಷಾಂತರ ಮೈ ಭಾರತ್ ಸ್ವಯಂಸೇವಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. ಆಗಸ್ಟ್ 29 ರಂದು ನಡೆಯಲಿರುವ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ಅವರು ಮುಂಚಿತವಾಗಿಯೇ ದೇಶಾದ್ಯಂತದ ಯುವಕರು ಮತ್ತು ಇಡೀ ಕ್ರೀಡಾ ಸಮುದಾಯಕ್ಕೆ ಶುಭಾಶಯಗಳನ್ನು ಕೋರಿದರು. "ಈ ದಿನ ಭಾರತ ಮಾತೆಯ ಶ್ರೇಷ್ಠ ಪುತ್ರ ಮೇಜರ್ ಧ್ಯಾನ್ ಚಂದ್ ಜಿ ಅವರನ್ನು ಸ್ಮರಿಸುವುದು ಕೂಡ ಆಗಿದೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಪ್ರಧಾನಮಂತ್ರಿಗಳು ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ಭಾರತದ ಒಲಿಂಪಿಕ್ ಪಯಣದ ಬಗ್ಗೆ ಕೆಲವು ಸಂಗತಿಗಳು ನಿಮ್ಮ ಬೆರಗುಗೊಳಿಸುತ್ತವೆ.
ಆದ್ದರಿಂದ, ಈಗ ಶ್ರೇಷ್ಠತೆಯ ಮೇಲೆ ಗಮನ ಹರಿಸುವ ಸಮಯ ಮತ್ತು ನಾವು ಮಾಡುತ್ತಿರುವುದು ಇದನ್ನೇ...
ಕ್ರೀಡೆಯ ವಿಷಯಕ್ಕೆ ಬಂದಾಗ ನೀವು ಮನೋಭಾವದಲ್ಲಿ ಬದಲಾವಣೆಯನ್ನು ನೋಡುತ್ತಿಲ್ಲವೇ?
*****
(ಪ್ರಕಟಣೆ ಐ.ಡಿ.: 2304865)
ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Telugu
,
Malayalam