ಹಣಕಾಸು ಸಚಿವಾಲಯ
ಹದಿನೈದು ದಿನಗಳಲ್ಲಿ ಸುಮಾರು 150 ಕೆಜಿ ಆಂಫಿಟಮೈನ್ ಮಾದರಿಯ ಉದ್ದೀಪನ ಮದ್ದುಗಳನ್ನು ನಿಷೇಧಿಸಿದ ಡಿ ಆರ್ ಐ
ಪ್ರಕಟಣಾ ದಿನಾಂಕ:
29 AUG 2026 5:14PM by PIB Bengaluru
ಸಿಂಥೆಟಿಕ್ ಡ್ರಗ್ಸ್ ಕಳ್ಳಸಾಗಣೆ ವಿರುದ್ಧದ ತನ್ನ ನಿರಂತರ ತನಿಖೆಯನ್ನು ಮುಂದುವರಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿ ಆರ್ ಐ), 25.8.2026 ರಂದು ನಡೆಸಿದ ಎರಡು ಗುಪ್ತಚರ ನೇತೃತ್ವದ ಕಾರ್ಯಾಚರಣೆಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 14.9 ಕೆಜಿ ಆಂಫಿಟಮೈನ್ ಹಾಗೂ ಪುಣೆಯಲ್ಲಿ 2.53 ಕೆಜಿ (ಅಂದಾಜು) ಆಂಫಿಟಮೈನ್ ಜೊತೆಗೆ 878 ಗ್ರಾಂ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದೆ. ಒಟ್ಟಾರೆಯಾಗಿ ಇವೆರಡೂ ಸೇರಿ 18 ಕೆಜಿಗಿಂತಲೂ ಹೆಚ್ಚು ಪ್ರಮಾಣದಲ್ಲಿದೆ. ಮಾದಕ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ ಡಿ ಪಿ ಎಸ್) 1985 ರ ನಿಬಂಧನೆಗಳ ಅಡಿಯಲ್ಲಿ ಈ ಎರಡು ಪ್ರಕರಣಗಳಲ್ಲಿ ನಾಲ್ಕು ಜನರನ್ನು ಬಂಧಿಸಲಾಗಿದೆ.
25.8.26 ರಂದು, ಗುಪ್ತಚರ ಇಲಾಖೆ ನೇತೃತ್ವದ ಕಾರ್ಯಾಚರಣೆಯಲ್ಲಿ, ಡಿಆರ್ಐ ಅಧಿಕಾರಿಗಳು ಕೆ ಎಸ್ ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ನವದೆಹಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಮಹಿಳಾ ಪ್ರಯಾಣಿಕರೊಬ್ಬರನ್ನು ತಡೆದರು. ಆಕೆಯ ಬಳಿ ಅಪಾರ ಪ್ರಮಾಣದ ನಿಷಿದ್ಧವಸ್ತುಗಳ ಸರಕು ಇದೆ ಎಂಬ ಶಂಕೆ ವ್ಯಕ್ತವಾಗಿತ್ತು.
ಆಕೆಯ ಬ್ಯಾಗೇಜ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸ್ಫಟಿಕದಂತಿರುವ ವಸ್ತುವನ್ನು ಹೊಂದಿದ್ದ ಏಳು ಪ್ಯಾಕೆಟುಗಳು ಪತ್ತೆಯಾಗಿವೆ. ಅವುಗಳ ತೂಕ 14.9 ಕೆಜಿ (ಸುಮಾರು) ಇದ್ದು, ಫೀಲ್ಡ್ ಡ್ರಗ್ ಡಿಟೆಕ್ಷನ್ ಕಿಟ್ ಬಳಸಿ ನಡೆಸಿದ ಪ್ರಾಥಮಿಕ ತಪಾಸಣೆಯಲ್ಲಿ ಅದು ಆಂಫಿಟಮೈನ್ ಎಂದು ತಿಳಿದುಬಂದಿತು. ವಶಪಡಿಸಿಕೊಂಡ ಮಾದಕ ವಸ್ತುವನ್ನು, ಅದರ ಪ್ಯಾಕಿಂಗ್ ಮತ್ತು ಅಡಗಿಸಿಟ್ಟಿದ್ದ ಸಾಮಗ್ರಿಗಳೊಂದಿಗೆ ಎನ್ ಡಿಪಿಎಸ್ ಕಾಯ್ದೆ, 1985 ರ ನಿಬಂಧನೆಗಳ ಅಡಿಯಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ.
ಕಾರ್ಯಾಚರಣೆಯ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ಡಿ ಆರ್ ಐ ಅಧಿಕಾರಿಗಳು ನಿಯೋಜಿತ ಡೆಲಿವರಿ ಸ್ಥಳದಲ್ಲಿ ಕ್ಷಿಪ್ರ ತನಿಖಾ ಕಾರ್ಯಾಚರಣೆಯನ್ನು ನಡೆಸಿದರು. ತಂದವರಿಂದ ಸಾಮಾಗ್ರಿಗಳನ್ನು ಪಡೆಯಲು ಸ್ಥಳಕ್ಕೆ ಬಂದ ವ್ಯಕ್ತಿಯನ್ನು ತಡೆಹಿಡಿಯಲಾಯಿತು. ಮುಂದಿನ ತನಿಖಾ ಕಾರ್ಯಾಚರಣೆಯು ಸ್ವೀಕರಿಸಲು ಮೊದಲು ಬಂದವರಿಂದ ಮಾದಕದ್ರವ್ಯವನ್ನು ಪಡೆಯಲು ಬಂದಿದ್ದ ಮತ್ತೊಬ್ಬ ವ್ಯಕ್ತಿಯನ್ನು ತಡೆಹಿಡಿಯಲು ಕಾರಣವಾಯಿತು. ಮಾದಕ ದ್ರವ್ಯದ ಸಾಗಣೆ ಮತ್ತು ಅದನ್ನು ಸ್ವೀಕರಿಸಲು ಯತ್ನಿಸಿದ ಈ ಮೂವರನ್ನೂ ಎನ್ ಡಿಪಿಎಸ್ ಕಾಯ್ದೆ, 1985ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.
25.8.2026 ರಂದು ನಡೆದ ಮತ್ತೊಂದು ಪ್ರತ್ಯೇಕ ಗುಪ್ತಚರ ಇಲಾಖೆ ನೇತೃತ್ವದ ಕಾರ್ಯಾಚರಣೆಯಲ್ಲಿ, ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪುಣೆ ಮಾರ್ಗವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಭಾರತೀಯ ಮಹಿಳಾ ಪ್ರಯಾಣಿಕಳನ್ನು ಡಿಆರ್ಐ ಅಧಿಕಾರಿಗಳು ಪುಣೆ ಜಂಕ್ಷನ್ ನಿಲ್ದಾಣದಲ್ಲಿ ತಡೆ ಹಿಡಿದರು.
ಆಕೆಯ ಬ್ಯಾಗೇಜ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ 2.53 ಕೆಜಿ (ಸುಮಾರು) ತೂಕದ ಆಂಫಿಟಮೈನ್ ಎಂದು ಹೇಳಲಾದ ಬಿಳಿ, ಹಳದಿ ಬಣ್ಣದ ಸ್ಫಟಿಕದಂತಹ ವಸ್ತು ಮತ್ತು 878 ಗ್ರಾಂ (ಒಟ್ಟು) ತೂಕದ 3,4-ಮೀಥೈಲ್ನೇಡಿಯೋಕ್ಸಿಮೆಥಾಂಫಿಟಮೈನ್ (ಎಂಡಿಎಂಎ) ಎಂದು ಹೇಳಲಾದ ಮಾತ್ರೆಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮಾದಕ ದ್ರವ್ಯವನ್ನು ಎನ್ಡಿಪಿಎಸ್ ಕಾಯ್ದೆ, 1985ರ ನಿಬಂಧನೆಗಳ ಅಡಿಯಲ್ಲಿ ಜಪ್ತಿ ಮಾಡಲಾಗಿದ್ದು ಪ್ರಯಾಣಿಕಳನ್ನು ಬಂಧಿಸಲಾಗಿದೆ.
ಈ ಇತ್ತೀಚಿನ ಜಪ್ತಿಗಳು ಸಿಂಥೆಟಿಕ್ ಡ್ರಗ್ಸ್ ಗಳನ್ನು ತಡೆಯಲು ಮತ್ತು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕಳ್ಳಸಾಗಣೆ ಜಾಲಗಳನ್ನು ಧ್ವಂಸಗೊಳಿಸಲು ಡಿಆರ್ ಐ ತೀವ್ರಗೊಳಿಸಿರುವ ಪ್ರಯತ್ನಗಳ ಭಾಗವಾಗಿದೆ. ಹದಿನೈದು ದಿನಗಳಲ್ಲಿ, ಭಾರತದ ಈಶಾನ್ಯ ಗಡಿಯ ಉದ್ದಕ್ಕೂ ನಡೆಸಿದ ಎರಡು ಕಾರ್ಯಾಚರಣೆಗಳಲ್ಲಿ 76 ಕೆಜಿ ಮೆಥಾಂಫಿಟಮೈನ್ ಮಾತ್ರೆಗಳು ಹಾಗೂ ಸೌದಿ ಅರೇಬಿಯಾದ ಜೆಡ್ಡಾಗೆ ರಫ್ತಾಗಬೇಕಿದ್ದ ಜೋಳ ಮತ್ತು ಮೆಕ್ಕೇಜೋಳದ ಸರಕಿನಲ್ಲಿ ಹುದುಗಿಸಿ ಮರೆಮಾಡಲಾಗಿದ್ದ 55.86 ಕೆಜಿ ಮೆಥಾಂಫಿಟಮೈನ್ ಸೇರಿದಂತೆ ಒಟ್ಟು ಐದು ಕಾರ್ಯಾಚರಣೆಗಳಲ್ಲಿ ಡಿಆರ್ಐ ಈಗ ಸುಮಾರು 150 ಕೆಜಿ ಆಂಫಿಟಮೈನ್ ಮಾದರಿಯ ಉದ್ದೀಪನ (ಎಟಿಎಸ್) ವರ್ಗದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ.
*****
(ಪ್ರಕಟಣೆ ಐ.ಡಿ.: 2304553)
ವಿಸಿಟರ್ ಕೌಂಟರ್ : 11