ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಓಣಂ ಹಬ್ಬದ ಮುನ್ನಾದಿನದಂದು ಭಾರತದ ರಾಷ್ಟ್ರಪತಿ ಅವರಿಂದ ಶುಭಾಶಯ

ಪ್ರಕಟಣಾ ದಿನಾಂಕ: 25 AUG 2026 6:33PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಓಣಂ ಹಬ್ಬದ ಮುನ್ನಾದಿನದಂದು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ : -

“ಓಣಂ ಹಬ್ಬದ ನಿಮಿತ್ತ ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಕೇರಳದ ಸಹೋದರ ಸಹೋದರಿಯರಿಗೆ ನನ್ನ ಆತ್ಮೀಯ ಶುಭಾಶಯಗಳು ಮತ್ತು ಶುಭ ಹಾರೈಕೆಗಳು. 

ಈ ಹಬ್ಬವು ಹೊಸ ಸುಗ್ಗಿಯ ಆಗಮನದ ಸಮಯದಲ್ಲಿ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಆಚರಣೆಯಾಗಿದೆ. ಓಣಂ ಹಬ್ಬವು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಭ್ರಾತೃತ್ವ ಮನೋಭಾವವನ್ನು ಸಂಭ್ರಮಿಸುತ್ತದೆ. ಇದು ವೈವಿಧ್ಯತೆಯಲ್ಲಿ ಏಕತೆಯನ್ನು ಉತ್ತೇಜಿಸುತ್ತದೆ. ದೋಣಿ ಸ್ಪರ್ಧೆಗಳು, ಜಾನಪದ ನೃತ್ಯಗಳು, ಸಂಗೀತ ಮತ್ತು ಕ್ರೀಡೆಗಳು ಈ ಹಬ್ಬದೊಂದಿಗೆ ನಂಟು ಹೊಂದಿರುವ ಪ್ರಮುಖ ಸಂಪ್ರದಾಯಗಳಾಗಿದ್ದು, ಇವು ಕೇರಳದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರದರ್ಶಿಸುತ್ತವೆ.

ಈ ಶುಭದಾಯಕ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ತರಲಿ ಹಾಗೂ ದೇಶದ ಪ್ರಗತಿಗೆ ಕೊಡುಗೆ ನೀಡಲು ನಾಗರಿಕರನ್ನು ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ”.

 

*****


(ಪ್ರಕಟಣೆ ಐ.ಡಿ.: 2303378) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati , Tamil , Malayalam