ಪರಿಸರ ಮತ್ತು ಅರಣ್ಯ ಸಚಿವಾಲಯ
ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ನಡೆಯುತ್ತಿರುವ UNCCD CoP17 ಯಲ್ಲಿ ಬರ ನಿರ್ವಹಣೆಯಿಂದ ಬರ ಸ್ಥಿತಿಸ್ಥಾಪಕತ್ವಕ್ಕೆ ಬದಲಾವಣೆಗೆ ಕರೆ ನೀಡಿದ ಭಾರತ
ಬರವನ್ನು ಮರುಕಳಿಸುವ ವಿಪತ್ತಾಗಿ ಅಲ್ಲ, ಊಹಿಸಬಹುದಾದ ಮತ್ತು ತಡೆಗಟ್ಟಬಹುದಾದ ಅಪಾಯವಾಗಿ ಪರಿಗಣಿಸಿ: ಶ್ರೀ ಭೂಪೇಂದರ್ ಯಾದವ್
ನಿರ್ವಹಣೆಯ ಸಿದ್ಧತೆ, ಬಿಕ್ಕಟ್ಟು ನಿರ್ವಹಣೆಯ ಮೇಲೆ ತಡೆಗಟ್ಟುವಿಕೆ, ಚೇತರಿಕೆಯ ಮೇಲಿನ ಸ್ಥಿತಿಸ್ಥಾಪಕತ್ವ ಗುರಿಯಾಗಿರಬೇಕು: ಕೇಂದ್ರ ಪರಿಸರ ಸಚಿವರ ಕರೆ
ಪ್ರಕಟಣಾ ದಿನಾಂಕ:
25 AUG 2026 12:59PM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಇಂದು ಬರಗಾಲ ಎದುರಿಸಲು - ಪ್ರತಿಕ್ರಿಯಾತ್ಮಕ ಪರಿಹಾರದಿಂದ ಪೂರ್ವಭಾವಿಯಾಗಿ, ತಂತ್ರಜ್ಞಾನ-ಆಧರಿಸಿದ ಸ್ಥಿತಿಸ್ಥಾಪಕತ್ವಕ್ಕೆ ಜಾಗತಿಕ ವಿಧಾನದಲ್ಲಿ ಮೂಲಭೂತ ಬದಲಾವಣೆಗೆ ಕರೆ ನೀಡಿದರು. ಉಲಾನ್‌ಬಾತರ್ (ಮಂಗೋಲಿಯಾ) ನಲ್ಲಿ ನಡೆಯುತ್ತಿರುವ ಮರುಭೂಮೀಕರಣವನ್ನು ಎದುರಿಸುವ ವಿಶ್ವಸಂಸ್ಥೆಯ ಸಮಾವೇಶದ (ಯುಎನ್ ಸಿಸಿಡಿ) 17ನೇಸಮ್ಮೇಳನದಲ್ಲಿ (CoP17) 'ಬರ ಸ್ಥಿತಿಸ್ಥಾಪಕತ್ವವನ್ನು ವೇಗಗೊಳಿಸುವುದು' ಕುರಿತು ಸಚಿವರ ಸಂವಾದ ಉದ್ದೇಶಿಸಿ ಮಾತನಾಡಿದ ಸಚಿವರು, ಬರವು "ಇನ್ನು ಮುಂದೆ ಸಾಂದರ್ಭಿಕ ಘಟನೆಯಲ್ಲ, ಆದರೆ ವ್ಯಾಖ್ಯಾನಿಸುವ ಅಭಿವೃದ್ಧಿ ಸವಾಲು". ಇದು ನೀರಿನ ಭದ್ರತೆ, ಆಹಾರ ವ್ಯವಸ್ಥೆಗಳು, ಜೀವವೈವಿಧ್ಯತೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಭಾರತದ ಸಂಘಟಿತ, ಬಹು-ಸಾಂಸ್ಥಿಕ ವಿಧಾನವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಯಾದವ್ ಅವರು, ಮುನ್ಸೂಚನೆ ಎಚ್ಚರಿಕೆ, ಅಪಾಯ ತಗ್ಗಿಸುವಿಕೆ, ಪರಿಹಾರ ಮತ್ತು ಸಮುದಾಯ ಸ್ಥಿತಿಸ್ಥಾಪಕತ್ವವನ್ನು ಸಂಯೋಜಿಸುವ ಭಾರತದ ಕ್ರಮವನ್ನು ವಿವರಿಸಿ, ಮಳೆ ಮೇಲ್ವಿಚಾರಣೆ ಮತ್ತು ಉಪಗ್ರಹ ಆಧಾರಿತ ಬರ ಮೌಲ್ಯಮಾಪನಗಳು ಅಂತರ-ಸಚಿವಾಲಯ ಮತ್ತು ರಾಜ್ಯ ಮಟ್ಟದಲ್ಲಿ ಸನ್ನದ್ಧತೆಯನ್ನು ಪ್ರಚೋದಿಸುತ್ತವೆ, ಬರಗಾಲವು ಬಿಕ್ಕಟ್ಟಿಗೆ ಕಾರಣವಾಗದಂತೆ ನೋಡಿಕೊಳ್ಳುತ್ತವೆ. ಭೂಮಿ ಮತ್ತು ನೀರಿನ ನಡುವಿನ ನಿರ್ಣಾಯಕ ಸಂಪರ್ಕವಾಗಿದೆ ಎಂದರು. "ಮಳೆ ನೀರು ಹರಿವಿನ ಮೊದಲು ಅರಣ್ಯವನ್ನು ಪುನಃಸ್ಥಾಪಿಸಿ" ಎಂದು ಅವರು, ಇದು ಮಣ್ಣಿನ ಸವಕಳಿಯನ್ನು ಕಡಿಮೆ ಮಾಡಲು, ನೀರಿನ ಧಾರಣವನ್ನು ಸುಧಾರಿಸಲು ಮತ್ತು ಅಂತರ್ಜಲವನ್ನು ಮರುಪೂರಣ ಮಾಡಲು ಜಲಾನಯನ ಮತ್ತು ನದಿಗಳ ಅರಣ್ಯೀಕರಣದ ಮೇಲೆ ಭಾರತ ಹೆಚ್ಚಿನ ಗಮನಹರಿಸುತ್ತಿರುವುದನ್ನು ಒತ್ತಿಹೇಳಿದರು. ನದಿ ಪುನರುಜ್ಜೀವನ ಮತ್ತು ಸಾಂಪ್ರದಾಯಿಕ ಜಲಮೂಲಗಳ ಪುನರುಜ್ಜೀವನವು ನೀರಿನ ಭದ್ರತೆ ಮತ್ತು ಗ್ರಾಮೀಣ ಬರ ಸ್ಥಿತಿಸ್ಥಾಪಕತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.
ಭಾರತದ ಬೆಟ್ಟಗಳಲ್ಲಿ ಸಮುದಾಯ ನೇತೃತ್ವದ ಬುಗ್ಗೆಗಳು ಮತ್ತು ಮರು ಭರ್ತಿ ವಲಯಗಳ ಪುನಃಸ್ಥಾಪನೆಯು ಬಯಲು ಪ್ರದೇಶಗಳಲ್ಲಿ, ದೇಶಾದ್ಯಂತ ಜಲಾನಯನ ಕಾರ್ಯಕ್ರಮವು ಶಿಥಿಲಗೊಂಡ ಮಳೆಯಾಶ್ರಿತ ಭೂಮಿಯನ್ನು ಪರ್ವತದಿಂದ ಕಣಿವೆಯ ವಿಧಾನದ ಮೂಲಕ ಪರಿಹರಿಸುತ್ತದೆ ಎಂದು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದನ್ನು ಸಮುದಾಯ ಸಂಸ್ಥೆಗಳು ಮತ್ತು ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳೊಂದಿಗೆ ಒಗ್ಗೂಡಿಸಲಾಗುತ್ತದೆ. ಮನೆ ಮಟ್ಟದಲ್ಲಿ, ಕುಡಿಯುವ ನೀರಿನ ಕಾರ್ಯಕ್ರಮಗಳು ಒತ್ತಡದ ಅವಧಿಯಲ್ಲಿ ವಿಶ್ವಾಸಾರ್ಹ ಪೂರೈಕೆಗಳನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತವೆ, ಖಚಿತವಾದ ಸೇವಾ ಮಟ್ಟಗಳು, ಸ್ಥಳೀಯ ಗುಣಮಟ್ಟದ ಪರೀಕ್ಷೆ ಮತ್ತು ದುರ್ಬಲ ಪ್ರದೇಶಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಬೆಳೆ ಆವರ್ತನೆಯಲ್ಲಿ ಬರ ಮತ್ತು ಇತರ ತಡೆಗಟ್ಟಲಾಗದ ನಷ್ಟಗಳಿಂದ ರೈತರನ್ನು ರಕ್ಷಿಸುವ ಬೆಳೆ ವಿಮೆಯನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿ, ಇದು ಸಬ್ಸಿಡಿ ಪ್ರೀಮಿಯಂಗಳನ್ನು ತಂತ್ರಜ್ಞಾನ ಆಧಾರಿತ ಮೌಲ್ಯಮಾಪನದೊಂದಿಗೆ ಸಂಯೋಜಿಸಿ ತ್ವರಿತ ಮತ್ತು ಪಾರದರ್ಶಕ ಹಕ್ಕು ಇತ್ಯರ್ಥಕ್ಕಾಗಿ ಬಳಸಲಾಗಿದೆ. ಸಮುದಾಯ ಮಾಲೀಕತ್ವ, ಸಾಮರ್ಥ್ಯ ವೃದ್ಧಿ ಮತ್ತು ಜೀವನೋಪಾಯದ ವೈವಿಧ್ಯೀಕರಣವು ಪ್ರತಿಕ್ರಿಯಾತ್ಮಕ ಪರಿಹಾರದಿಂದ ಪೂರ್ವಭಾವಿಯಾಗಿ, ತಂತ್ರಜ್ಞಾನ-ಆಧರಿಸಿದ ಸ್ಥಿತಿಸ್ಥಾಪಕತ್ವಕ್ಕೆ ಪರಿವರ್ತನೆಗೊಳ್ಳಲು ಕೇಂದ್ರವಾಗಿದೆ ಎಂದು ಸಚಿವರು ಒತ್ತಿ ಹೇಳಿದರು
"ಬರವನ್ನು ಊಹಿಸಬಹುದಾದ, ತಡೆಗಟ್ಟಬಹುದಾದ ಅಪಾಯವಾಗಿ ನಿರ್ವಹಿಸಬೇಕು ಮತ್ತು ತುರ್ತು ಪ್ರತಿಕ್ರಿಯೆಯನ್ನು ಕೋರುವ ಪುನರಾವರ್ತಿತ ವಿಪತ್ತಾಗಿ ಅಲ್ಲ" ಎಂಬುದು ಭಾರತದ ಮೂಲ ನಂಬಿಕೆ ಎಂದು ಶ್ರೀ ಯಾದವ್ ಹೇಳಿದರು. ವಿಪತ್ತು-ಸಂಬಂಧಿತ ನಿಧಿಗಳು, ಉದ್ಯೋಗ ಖಾತರಿಗಳು, ಮೇವು ನೆರವು ಮತ್ತು ಅಗತ್ಯವಿದ್ದಾಗ ತುರ್ತು ನೀರಿನ ಸರಬರಾಜುಗಳಿಂದ ಪೂರಕವಾದ ಜಲಾನಯನ ಅಭಿವೃದ್ಧಿ, ನೀರು ಕೊಯ್ಲು, ಅರಣ್ಯೀಕರಣ, ಅಂತರ್ಜಲ ಮರು ಪೂರಣ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಬೆಳೆಗಳು ಸೇರಿದಂತೆ ತಡೆಗಟ್ಟುವ ಕ್ರಮಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಸದೃಢ ಜಾಗತಿಕ ಕ್ರಮಕ್ಕೆ ಕರೆ ನೀಡಿದ ಶ್ರೀ ಯಾದವ್, ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯಲ್ಲಿ ಹೆಚ್ಚಿನ ಹೂಡಿಕೆ, ಬಲವಾದ ಮುನ್ನೆಚ್ಚರಿಕೆ ವ್ಯವಸ್ಥೆಗಳು ಮತ್ತು ಸಂಘಟಿತ ಕ್ರಮವನ್ನು ಪ್ರತಿಪಾದಿಸಿದರು. "ಪ್ರತಿಕ್ರಿಯೆಗಿಂತ ಸಿದ್ಧತೆ, ಬಿಕ್ಕಟ್ಟು ನಿರ್ವಹಣೆಗಿಂತ ತಡೆಗಟ್ಟುವಿಕೆ, ಚೇತರಿಕೆಗಿಂತ ಸ್ಥಿತಿಸ್ಥಾಪಕತ್ವ ಗುರಿಯಾಗಿರಬೇಕು" ಎಂದು ಅವರು ಹೇಳಿದರು. ವಿಶ್ವದ ಅತ್ಯಂತ ದುರ್ಬಲರಿಗೆ ಬರ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಐಚ್ಛಿಕವಲ್ಲ, ಬದಲಿಗೆ ಬದುಕುಳಿಯುವ ವಿಷಯ ಎಂದು ಒತ್ತಿ ಹೇಳುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು ಮತ್ತು ಎಲ್ಲರಿಗೂ ಬರ-ನಿಗ್ರಹ ಭವಿಷ್ಯಕ್ಕಾಗಿ, ಮುನ್ನೆಚ್ಚರಿಕೆ ಸೇರಿದಂತೆ ತನ್ನ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಹಂಚಿಕೊಳ್ಳಲು ಭಾರತದ ಸಿದ್ಧತೆವಿದೆ ಎಂಬುದನ್ನು ಪುನರುಚ್ಚರಿಸಿದರು.
*****
(ಪ್ರಕಟಣೆ ಐ.ಡಿ.: 2303085)
ವಿಸಿಟರ್ ಕೌಂಟರ್ : 11