ಕೃಷಿ ಸಚಿವಾಲಯ
ಆಗಸ್ಟ್ 18 ರಂದು ಪುಸಾದಲ್ಲಿ 'ಸಪ್ತ್ ಧಾರಾ ಆಫ್ ಶಕ್ತಿ' ಪ್ರತಿಜ್ಞೆಯ ನೇತೃತ್ವ ವಹಿಸಲಿರುವ ಶಿವರಾಜ್ ಸಿಂಗ್ ಚೌಹಾಣ್
ವಿಕಸಿತ ಭಾರತ್ 2047 ಸಾಕಾರ ನಿಟ್ಟಿನಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ನೀಲನಕ್ಷೆಯನ್ನು ರೂಪಿಸಲಿರುವ ಶಿವರಾಜ್ ಸಿಂಗ್ ಚೌಹಾಣ್
'ಸಪ್ತ್ ಧಾರಾ ಆಫ್ ಶಕ್ತಿ' ಪ್ರತಿಜ್ಞೆಗೆ ರೈತರು, ಲಖ್ ಪತಿ ದೀದಿಗಳು, ರಫ್ತುದಾರರು ಮತ್ತು ಆಹಾರ ಸಂಸ್ಕರಣಾದಾರರು ಸೇರ್ಪಡೆ
6 ಕೋಟಿ ಲಖ್ ಪತಿ ದೀದಿಗಳು, ಬಲವಾದ ಕೃಷಿ: ಗ್ರಾಮೀಣಾಭಿವೃದ್ಧಿ ಕಾರ್ಯಸೂಚಿ ಮುನ್ನಡೆಸಲಿರುವ 'ಸಪ್ತ್ ಧಾರಾ ಆಫ್ ಶಕ್ತಿ'
प्रविष्टि तिथि:
17 AUG 2026 3:22PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಆಗಸ್ಟ್ 15 ರಂದು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವರಿಸಿದ "ಸಪ್ತ್ ಧಾರಾ ಆಫ್ ಶಕ್ತಿ" ವನ್ನು ಅನುಸರಿಸಿ ಆಗಸ್ಟ್ 18 ರಂದು ನವದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿ ಎರಡೂ ಸಚಿವಾಲಯಗಳ ಅಧಿಕಾರಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಲಿದ್ದಾರೆ. ಈ ಕಾರ್ಯಕ್ರಮವು ವಿವಿಧ ಇಲಾಖೆಗಳ ನೀಲನಕ್ಷೆ, ಲಖ್ ಪತಿ ದೀದಿ ಕಾರ್ಯಕ್ರಮದ ವಿಸ್ತರಣೆ ಮತ್ತು ರೈತರು ಮತ್ತು ಗ್ರಾಮೀಣ ಸಮುದಾಯಗಳ ಹಿತಾಸಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳ ಮೇಲೆ ಕೇಂದ್ರೀಕರಿಸುತ್ತದೆ. 2047ರ ವೇಳೆಗೆ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸ್ಪಷ್ಟ ಮತ್ತು ಕಾರ್ಯಸಾಧ್ಯವಾದ ನೀಲನಕ್ಷೆಯನ್ನು ರೂಪಿಸುವುದು ಈ ಸಭೆಯ ಉದ್ದೇಶವಾಗಿದೆ. ಪ್ರಗತಿಪರ ರೈತರು, ಲಖ್ ಪತಿ ದೀದಿಗಳು, ಕೃಷಿ ರಫ್ತುದಾರರು ಮತ್ತು ಆಹಾರ ಸಂಸ್ಕರಣಾಗಾರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಂಡಿಸಿರುವ “ಶಕ್ತಿಯ ಸಪ್ತ್ ಧಾರಾ”ಕೃಷಿ ಮತ್ತು ಗ್ರಾಮೀಣ ಭಾರತಕ್ಕೆ ಪ್ರಮುಖ ನಿರ್ದೇಶನವನ್ನು ಒದಗಿಸುತ್ತದೆ ಎಂದು ಶ್ರೀ ಚೌಹಾಣ್ ಹೇಳಿದರು. ಜನ ಸ್ನೇಹಿ ಕಾರ್ಯಕ್ರಮಗಳು, ಪಾರದರ್ಶಕ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಅನುಷ್ಠಾನದ ಮೂಲಕ ಈ ದೂರದೃಷ್ಟಿಯನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು. “ರೈತರು ಮತ್ತು ಗ್ರಾಮೀಣ ಮಹಿಳೆಯರು ನೇರವಾಗಿ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳುವುದು ಮತ್ತು ನಮ್ಮ ಪ್ರಯತ್ನಗಳು 2047 ರ ವೇಳೆಗೆ ವಿಕಸಿತ ಭಾರತದ ಕನಸು ಸಾಕಾರಕ್ಕೆ ಕೊಡುಗೆ ನೀಡುವುದನ್ನು ಖಾತ್ರಿಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ನಾವು ಇಲಾಖಾ ನೀಲನಕ್ಷೆಗಳನ್ನು ಪರಿಶೀಲಿಸುತ್ತೇವೆ ಮತ್ತು ಅವುಗಳ ಅನುಷ್ಠಾನವನ್ನು ವೇಗಗೊಳಿಸಲು ಕೆಲಸ ಮಾಡುತ್ತೇವೆ” ಎಂದು ಶ್ರೀ ಚೌಹಾಣ್ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕೆಂಪು ಕೋಟೆಯಿಂದ ಮಾಡಿದ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ“ಶಕ್ತಿಯ ಸಪ್ತ್ ಧಾರಾ”ವನ್ನು ಪ್ರಮುಖ ಆದ್ಯತೆಗಳಾಗಿ ವಿವರಿಸಿದರು. ಅದರಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆಯನ್ನು ಬಲವರ್ಧನೆಗೊಳಿಸುವುದು, ಆಹಾರ ಸಂಸ್ಕರಣೆ ಉತ್ತೇಜಿಸುವುದು ಮತ್ತು ದೇಶದ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ವಿಸ್ತರಿಸುವುದು ಸೇರಿವೆ. ಜಾಗತಿಕ ಬಿಕ್ಕಟ್ಟುಗಳು ಮತ್ತು ಅನಿಶ್ಚಿತತೆಗಳ ನಡುವೆಯೂ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ರಸಗೊಬ್ಬರಗಳನ್ನು ಒದಗಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಹೊಸ ಜಾಗತಿಕ ಮಾರುಕಟ್ಟೆಗಳು ಮತ್ತು ರೈತರಿಗೆ, ವಿಶೇಷವಾಗಿ ಸಮುದ್ರಾಹಾರ ಸೇರಿದಂತೆ ಕೃಷಿ ಮತ್ತು ಸಮುದ್ರ ಉತ್ಪನ್ನಗಳಲ್ಲಿ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಸ್ವಾವಲಂಬನೆಯ ಮೇಲೆ ಗಮನ ಹರಿಸುವುದು ಕಾರ್ಯಸೂಚಿಯ ಪ್ರಮುಖ ಭಾಗವಾಗಿದೆ. ರಸಗೊಬ್ಬರಗಳು ಮತ್ತು ಇಂಧನದಂತಹ ಅಗತ್ಯ ಅವಶ್ಯಕತೆಗಳಲ್ಲಿ, ವಿಶೇಷವಾಗಿ ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ಸುರಕ್ಷಿತ ಮತ್ತು ಸ್ವಾವಲಂಬಿಯಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಕಳೆದ ದಶಕದಲ್ಲಿ ಕೈಗೊಂಡ ದೀರ್ಘಕಾಲೀನ ಕ್ರಮಗಳನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಉಲ್ಲೇಖಿಸಿದರು.
ಲಖ್ ಪತಿ ದೀದಿ ಕಾರ್ಯಕ್ರಮ ವಿಸ್ತರಣೆಗೆ ಆದ್ಯತೆ
ಆಗಸ್ಟ್ 18 ರ ಸಭೆಯ ಪ್ರಮುಖ ಗಮನ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಲಖ್ ಪತಿ ದೀದಿ ಕಾರ್ಯಕ್ರಮದ ವಿಸ್ತರಣೆಗೆ ಆದ್ಯತೆ ನೀಡುವುದಾಗಿದೆ. ಮೂರು ಕೋಟಿ ಗ್ರಾಮೀಣ ಮಹಿಳೆಯರು ಈಗಾಗಲೇ ಲಖ್ ಪತಿ ದೀದಿಗಳಾಗಿದ್ದಾರೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಂಖ್ಯೆಯನ್ನು ಆರು ಕೋಟಿಗೆ ಕೊಂಡೊಯ್ಯುವ ಹೊಸ ಗುರಿ ಹೊಂದಿದ್ದಾರೆ. ಕಾರ್ಯಕ್ರಮವನ್ನು ವಿಸ್ತರಿಸಲು ಮತ್ತು ಈ ಗುರಿಯನ್ನು ಸಾಧಿಸಲು ಅನುಷ್ಠಾನ ನೀಲನಕ್ಷೆಯ ಬಗ್ಗೆ ಶ್ರೀ ಚೌಹಾಣ್ ಚರ್ಚಿಸಲಿದ್ದಾರೆ. ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರು ತಮ್ಮ ಜೀವನೋಪಾಯವನ್ನು ಬಲಪಡಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ನೆರವಿನ ಮೂಲಕ ಬೆಂಬಲ ನೀಡಲಾಗುತ್ತಿದೆ. ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯವು ಗ್ರಾಮೀಣ ಅಭಿವೃದ್ಧಿಯ ಸರ್ಕಾರದ ಕಾರ್ಯವಿಧಾನದ ಕೇಂದ್ರಬಿಂದುವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕರು ಮಹಿಳೆಯರ ಸಾಮರ್ಥ್ಯಗಳನ್ನು ಗುರುತಿಸಲು ಮತ್ತು ಗೌರವಿಸಲು ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅವರ ಹೆಚ್ಚಿನ ಭಾಗವಹಿಸುವಿಕೆಯನ್ನು ಬೆಂಬಲಿಸಲು ಕರೆ ನೀಡಿದ್ದಾರೆ.
ಮಹಿಳಾ ನೇತೃತ್ವದ ಉದ್ಯಮಗಳಿಗೆ ಮಾರುಕಟ್ಟೆ ಲಭ್ಯತೆಯನ್ನು ಬಲಪಡಿಸಲು, ಶೀ-ಮಾರ್ಟ್‌ಗಳಂತಹ ಉಪಕ್ರಮಗಳನ್ನು ಸಹ ಕೇಂದ್ರ ಬಜೆಟ್‌ನಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಉಪಕ್ರಮಗಳು ಮಹಿಳೆಯರು ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಮತ್ತು ಬಲವಾದ ಗ್ರಾಮೀಣ ಉದ್ಯಮಗಳನ್ನು ನಿರ್ಮಿಸಲು ಸಹಾಯ ಮಾಡುವ ಗುರಿ ಹೊಂದಿವೆ. ಶೀ-ಮಾರ್ಟ್‌ಗಳು ಮತ್ತು ಬ್ರ್ಯಾಂಡಿಂಗ್ ಉಪಕ್ರಮಗಳ ಮೂಲಕ, ಯೋಗ, ಆಯುರ್ವೇದ, ಕರಕುಶಲ ವಸ್ತುಗಳು ಮತ್ತು ಇತರ ಗ್ರಾಮೀಣ ಉದ್ಯಮಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ವ್ಯಾಪಕ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪ್ರಚಾರ ಮಾಡಲಾಗುತ್ತದೆ. ಮಹಿಳಾ ನೇತೃತ್ವದ ಗ್ರಾಮೀಣ ಅಭಿವೃದ್ಧಿಯ ಮುಂದಿನ ಹಂತದತ್ತ ಸರ್ಕಾರ ಕೆಲಸ ಮಾಡುತ್ತಿರುವಾಗ, ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಬಲವಾದ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವುದು ಪ್ರಮುಖ ಆದ್ಯತೆಯಾಗಿದೆ.
*****
(रिलीज़ आईडी: 2300479)
आगंतुक पटल : 10