ಸಂಸ್ಕೃತಿ ಸಚಿವಾಲಯ
ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ಇಂದು ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಸಮರ್ಪಿತವಾದ 'ಹರ್ ಘರ್ ತಿರಂಗಾ ಬೈಕ್ ರ್‍ಯಾಲಿ 2026' ಕ್ಕೆ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಚಾಲನೆ
ದಿಲ್ಲಿಯಲ್ಲಿ ದೇಶಭಕ್ತಿಯ ಬೈಕ್ ರ್‍ಯಾಲಿಯಲ್ಲಿ ಕೇಂದ್ರ ಸಚಿವರು ಮತ್ತು ಸಂಸತ್ ಸದಸ್ಯರು ಭಾಗಿ
प्रविष्टि तिथि:
12 AUG 2026 2:38PM by PIB Bengaluru
ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಸಮರ್ಪಿತವಾದ ಹರ್ ಘರ್ ತಿರಂಗ 2026ರ ಭಾಗವಾಗಿ ಇಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ಭವ್ಯವಾದ ತಿರಂಗ ಬೈಕ್ ರ್‍ಯಾಲಿ 2026ಕ್ಕೆ ಹಸಿರು ನಿಶಾನೆ ತೋರಲಾಯಿತು. ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ; ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್; ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಹಾಯಕ ಸಚಿವರಾದ (ಸ್ವತಂತ್ರ ನಿರ್ವಹಣೆ) ಮತ್ತು ಪ್ರಧಾನಮಂತ್ರಿ ಕಚೇರಿಯಲ್ಲಿ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್; ಕೇಂದ್ರ ಪಂಚಾಯತಿ ರಾಜ್ ಮತ್ತು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಹಾಗು ಡೈರಿ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್; ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಹಾಯಕ ಸಚಿವರಾದ ಶ್ರೀಮತಿ ನಿಮುಬೆನ್ ಬಂಭಾನಿಯಾ; ಕೇಂದ್ರ ಸಂಸ್ಕೃತಿ ಖಾತೆ ಸಹಾಯಕ ಸಚಿವರಾದ ಮತ್ತು ಕೇಂದ್ರ ಅಂಕಿಅಂಶ, ಕಾರ್ಯಕ್ರಮ ಅನುಷ್ಠಾನ ಮತ್ತು ಯೋಜನಾ ಖಾತೆ ಸಹಾಯಕ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ರಾವ್ ಇಂದರ್ಜಿತ್ ಸಿಂಗ್; ರೈಲ್ವೆ ಖಾತೆ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ; ಮತ್ತು ಕೇಂದ್ರ ಗೃಹ ವ್ಯವಹಾರ ಖಾತೆ ಸಹಾಯಕ ಸಚಿವರಾದ ಶ್ರೀ ಬಂಡಿ ಸಂಜಯ್ ಕುಮಾರ್ ಮತ್ತು ಶ್ರೀ ನಿತ್ಯಾನಂದ ರೈ ಮತ್ತು ಹಲವಾರು ಸಂಸತ್ ಸದಸ್ಯರ ಉಪಸ್ಥಿತಿಯಲ್ಲಿ ರ್‍ಯಾಲಿಗೆ ಹಸಿರು ನಿಶಾನೆ ತೋರಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್, ವಂದೇ ಮಾತರಂನ 150 ವರ್ಷಗಳನ್ನು ಸ್ಮರಿಸುವ ಐತಿಹಾಸಿಕ ಸಂದರ್ಭದಲ್ಲಿ ತಮ್ಮ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಿದರು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಮಾತೃಭೂಮಿಯನ್ನು ಮುಕ್ತಗೊಳಿಸುವ ಹೋರಾಟದ ಸಮಯದಲ್ಲಿ ಈ ಎರಡು ಅಮರ ಪದಗಳು ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ದೇಶಭಕ್ತಿಯ ಉರಿಯುತ್ತಿರುವ ಚೈತನ್ಯವನ್ನು ಜಾಗೃತಗೊಳಿಸಿವೆ ಎಂದು ಅವರು ಹೇಳಿದರು. ಬೇರೆ ಯವುದೇ ಅಭಿವ್ಯಕ್ತಿಯು ರಾಷ್ಟ್ರದ ಜಾಗೃತಿಯನ್ನು ಅಂತಹ ಶಕ್ತಿ ಮತ್ತು ಅನುರಣನವನ್ನು ಒಳಗೊಂಡಂತೆ ಸೆರೆಹಿಡಿದಿಲ್ಲ ಎಂದು ಅವರು ಗಮನಿಸಿದರು. ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಈ ಅಮರ ಪದಗಳನ್ನು ಬರೆದಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾ, ಅವು ರಾಷ್ಟ್ರದ ಆತ್ಮಕ್ಕೆ ಧ್ವನಿ ನೀಡಿವೆ ಎಂದು ಹೇಳಿದರು.

ಜನರು ಒಂದು ಕಾಲದಲ್ಲಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಮೆರವಣಿಗೆ ನಡೆಸುತ್ತಿದ್ದರು, ಭಾರತವು ಈಗ 2047ರ ವೇಳೆಗೆ ವಿಕಸಿತ ಭಾರತಕ್ಕಾಗಿ ಪ್ರಧಾನ ಮಂತ್ರಿಗಳು ನಿಗದಿಪಡಿಸಿದ ಧ್ಯೇಯದತ್ತ ಆತ್ಮವಿಶ್ವಾಸದಿಂದ ಪುನರುಜ್ಜೀವಿತ ಭಾರತವು ಸಾಗುತ್ತಿದೆ ಎಂದು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು. ಹರ್ ಘರ್ ತಿರಂಗ ಅಭಿಯಾನವನ್ನು ಆಯಾ ಕ್ಷೇತ್ರಗಳು, ರಾಜ್ಯಗಳು, ಬೀದಿಗಳು ಮತ್ತು ಮನೆಗಳಲ್ಲಿ ಸಕ್ರಿಯವಾಗಿ ಪ್ರಚಾರ ಮಾಡುವ ಮೂಲಕ ಪ್ರತಿಯೊಬ್ಬರೂ ಈ ಮನೋಭಾವವನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಅವರು ಆಗ್ರಹಿಸಿದರು. ಚಕ್ರಗಳು ತಿರುಗಲು ಪ್ರಾರಂಭಿಸಿದಾಗ, ಪ್ರಯಾಣವು ರ್‍ಯಾಲಿಯೊಂದಿಗೆ ಕೊನೆಗೊಳ್ಳಬಾರದು ಮತ್ತು ವಂದೇ ಮಾತರಂನ ಉತ್ಸಾಹವು ಆಚರಣೆಯನ್ನು ಮೀರಿ ಜೀವಂತವಾಗಿರಬೇಕು ಎಂದು ಒತ್ತಿ ಹೇಳುವ ಮೂಲಕ ಅವರು ತಮ್ಮ ಭಾಷಣವನ್ನು ಅವರು ಸಮಾರೋಪಗೊಳಿಸಿದರು..
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಈ ಸಭೆಯು ಕೇವಲ ಬೈಕ್ ರ್‍ಯಾಲಿಗಾಗಿ ಅಲ್ಲ, ಬದಲಾಗಿ ಭಾರತದ ಸ್ವಾತಂತ್ರ್ಯದ ಸಂಕೇತ ಮತ್ತು ರಾಷ್ಟ್ರವನ್ನು ಒಂದೇ ದಾರದಲ್ಲಿ ಬಂಧಿಸುವ ಲಾಂಛನವಾದ ತಿರಂಗಕ್ಕೆ ಗೌರವ ಮತ್ತು ಬೆಂಬಲದ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು. ಸುಮಾರು ಐದು ವರ್ಷಗಳ ಹಿಂದೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ರಾಷ್ಟ್ರದ ಮುಂದೆ ಇಟ್ಟಿದ್ದರು ಎಂದು ನೆನಪಿಸಿಕೊಂಡರು. ಸ್ವಾತಂತ್ರ್ಯದ ಅಮೃತ ಕಾಲ ಪ್ರಾರಂಭವಾಗುವ ಮೊದಲೇ, ಪ್ರಧಾನಮಂತ್ರಿ ದೇಶಾದ್ಯಂತ ಇಂತಹ ತಿರಂಗ ಯಾತ್ರೆಗಳನ್ನು ಕಲ್ಪಿಸಿಕೊಂಡಿದ್ದರು ಎಂದು ಅವರು ಹೇಳಿದರು.

ಈ ರ್‍ಯಾಲಿಯಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್, ಅಸ್ಸಾಂ ರೈಫಲ್ಸ್ ಸೇರಿದಂತೆ 350ಕ್ಕೂ ಹೆಚ್ಚು ಸಿಎಪಿಎಫ್ ಬೈಕರ್‌ಗಳು ಉತ್ಸಾಹದಿಂದ ಭಾಗವಹಿಸಿದ್ದರು. 50 ಕ್ಕೂ ಹೆಚ್ಚು ವಿಶೇಷ ಬೈಕರ್ ಗುಂಪುಗಳು ಮತ್ತು ಮಹಿಳಾ ಬೈಕರ್‌ಗಳು ಸಹ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಗೀತೆ ವಂದೇ ಮಾತರಂನ ಉತ್ಸಾಹಕ್ಕೆ ಮೀಸಲಾಗಿರುವ ಹರ್ ಘರ್ ತಿರಂಗ 2026 ಅಭಿಯಾನದ ಭಾಗವಾಗಿ, ಆಗಸ್ಟ್ 9 ರಿಂದ 17 ರವರೆಗೆ ನಾಗರಿಕರು ತಮ್ಮ ಮನೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಮತ್ತು ದೇಶಭಕ್ತಿ ಹಾಗು ರಾಷ್ಟ್ರೀಯ ಏಕತೆಯ ಈ ರಾಷ್ಟ್ರವ್ಯಾಪಿ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತಿದೆ.
*****
(रिलीज़ आईडी: 2298341)
आगंतुक पटल : 19