ಗೃಹ ವ್ಯವಹಾರಗಳ ಸಚಿವಾಲಯ
ಭಾರತ ಸರ್ಕಾರದಿಂದ ಇನ್ನೂ 11 ಅಂತಾರಾಷ್ಟ್ರೀಯ ಬಂದರುಗಳ ಅಧಿಸೂಚನೆ, ಇ-ವೀಸಾ ಹೊಂದಿರುವವರಿಗೆ ಭಾರತ ಪ್ರವೇಶಕ್ಕೆ ಅವಕಾಶ
ಇ-ವೀಸಾ ಹೊಂದಿರುವವರ ಪ್ರವೇಶಕ್ಕಾಗಿ ಒಟ್ಟು ಅಂತಾರಾಷ್ಟ್ರೀಯ ಬಂದರುಗಳ ಸಂಖ್ಯೆ ಈಗ 88ಕ್ಕೆ ಏರಿದೆ
11 ಅಂತಾರಾಷ್ಟ್ರೀಯ ಬಂದರುಗಳ ಸೇರ್ಪಡೆಯು ಎಲೆಕ್ಟ್ರಾನಿಕ್ ವೀಸಾದ ಆಕರ್ಷಣೆ ಮತ್ತು ಉಪಯುಕ್ತತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಭಾರತವು ಸುಮಾರು ಶೇ.95 ಇ-ವೀಸಾ ಅರ್ಜಿಗಳನ್ನು 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿಒದಗಿಸುತ್ತದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ನಾಯಕತ್ವದಲ್ಲಿ, ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿವೀಸಾ ನಿಯಮವನ್ನು ಉದಾರೀಕರಿಸಲು, ಸುವ್ಯವಸ್ಥಿತಗೊಳಿಸಲು ಮತ್ತು ಸರಳಗೊಳಿಸಲು ಹಲವಾರು ಮಹತ್ವದ ಉಪಕ್ರಮಗಳನ್ನು ಕೈಗೊಂಡಿದೆ
ಪ್ರಕಟಣಾ ದಿನಾಂಕ:
10 AUG 2026 5:43PM by PIB Bengaluru
ಭಾರತ ಸರ್ಕಾರವು ಇನ್ನೂ 11 ಅಂತಾರಾಷ್ಟ್ರೀಯ ಬಂದರುಗಳನ್ನು ಅಧಿಸೂಚಿಸಿದೆ, ಇದು ಇ-ವೀಸಾ ಹೊಂದಿರುವ ವಿದೇಶಿಯರಿಗೆ ಭಾರತವನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಹೊಸದಾಗಿ ಸೇರ್ಪಡೆಯಾಗಿರುವ 11 ಅಂತಾರಾಷ್ಟ್ರೀಯ ಬಂದರುಗಳಲ್ಲಿ09 ಭೂ ಬಂದರುಗಳು ಮತ್ತು 02 ವಿಮಾನ ನಿಲ್ದಾಣಗಳು ಸೇರಿವೆ. 11 ಅಂತಾರಾಷ್ಟ್ರೀಯ ಬಂದರುಗಳ ಸೇರ್ಪಡೆಯು ಎಲೆಕ್ಟ್ರಾನಿಕ್ ವೀಸಾದ ಬಳಕೆ ಮತ್ತು ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ವಿಶೇಷವೆಂದರೆ, ಭಾರತವು ಸುಮಾರು ಶೇ.95ರಷ್ಟು ಇ-ವೀಸಾ ಅರ್ಜಿಗಳನ್ನು 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿಒದಗಿಸುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ನಾಯಕತ್ವದಲ್ಲಿ, ಕಾನೂನುಬದ್ಧ ವಿದೇಶಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮತ್ತು ಏಕಕಾಲದಲ್ಲಿಆಂತರಿಕ ಭದ್ರತೆಯನ್ನು ಹೆಚ್ಚಿಸಲು ತಾಂತ್ರಿಕ ಮೂಲಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ವೀಸಾ ಆಡಳಿತವನ್ನು ಉದಾರಗೊಳಿಸಲು, ಸುವ್ಯವಸ್ಥಿತಗೊಳಿಸಲು ಮತ್ತು ಸರಳೀಕರಿಸಲು ಭಾರತ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಹಲವಾರು ಮಹತ್ವದ ಉಪಕ್ರಮಗಳನ್ನು ಕೈಗೊಂಡಿದೆ.
ಇತ್ತೀಚಿನ ಸೇರ್ಪಡೆಯೊಂದಿಗೆ, 37 ವಿಮಾನ ನಿಲ್ದಾಣಗಳು, 38 ಬಂದರುಗಳು ಮತ್ತು 13 ಬಂದರುಗಳು ಸೇರಿದಂತೆ ಇ-ವೀಸಾ ಹೊಂದಿರುವ ವಿದೇಶಿಯರಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಒಟ್ಟು ಅಂತಾರಾಷ್ಟ್ರೀಯ ಬಂದರುಗಳ ಸಂಖ್ಯೆ 88ಕ್ಕೆ ಏರಿದೆ.
ಇಲ್ಲಿಯವರೆಗೆ ಭಾರತದಲ್ಲಿಇ-ವೀಸಾ ಹೊಂದಿರುವ ವಿದೇಶಿಯರಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಅಂತಾರಾಷ್ಟ್ರೀಯ ಬಂದರುಗಳ ಪಟ್ಟಿ-
|
ಕ್ರಮ ಸಂಖ್ಯೆ
|
ವಿಮಾನ ನಿಲ್ದಾಣಗಳು
|
ಬಂದರುಗಳು
|
ಭೂಬಂದರುಗಳು
|
|
1.
|
ಅಹಮದಾಬಾದ್
|
ಅಗಟ್ಟಿ
|
ರಾಕ್ಸಾಲ್
|
|
2.
|
ಅಮೃತಸರ
|
ಅಲಾಂಗ್
|
ರುಪೈಡಿಹಾ
|
|
3.
|
ಬಾಗ್ಡೊಗ್ರಾ
|
ಬೇಡಿ ಬಂದರ್
|
ದರ್ರಂಗಾ
|
|
4.
|
ಭೋಗಾಪುರಂ
|
ಭಾವನಗರ
|
ಜೋಗ್ಬಾನಿ
|
|
5.
|
ಬೆಂಗಳೂರು
|
ಕ್ಯಾಲಿಕಟ್
|
ಅಗರ್ತಲಾ (ಹೊಸದಾಗಿ ಸೇರಿಸಲಾಗಿದೆ)
|
|
6.
|
ಭುವನೇಶ್ವರ
|
ಚೆನ್ನೈ
|
ದರ್ರಂಗಾ (ಹೊಸದಾಗಿ ಸೇರಿಸಲಾಗಿದೆ)
|
|
7.
|
ಕ್ಯಾಲಿಕಟ್
|
ಕೊಚ್ಚಿನ್
|
ಗೆಡೆ (ಹೊಸದಾಗಿ ಸೇರಿಸಲಾಗಿದೆ)
|
|
8.
|
ಚಂಡೀಗಢ
|
ಕಡಲೂರು
|
ಘೋಜಾದಂಗ (ಹೊಸದಾಗಿ ಸೇರಿಸಲಾಗಿದೆ)
|
|
9.
|
ಚೆನ್ನೈ
|
ದಹೇಜ್
|
ಹರಿದಾಸ್ ಪುರ (ಹೊಸದಾಗಿ ಸೇರ್ಪಡೆ)
|
|
10.
|
ಕೊಚ್ಚಿನ್
|
ಧಮ್ರಾ
|
ಜೈಗಾಂವ್ (ಹೊಸದಾಗಿ ಸೇರಿಸಲಾಗಿದೆ)
|
|
11.
|
ಕೊಯಮತ್ತೂರು
|
ಹಲ್ದಿಯಾ
|
ದೌಕಿ (ಹೊಸದಾಗಿ ಸೇರಿಸಲಾಗಿದೆ)
|
|
12.
|
ದೆಹಲಿ
|
ಹಜೀರಾ
|
ಮೊರೆಹ್ (ಹೊಸದಾಗಿ ಸೇರಿಸಲಾಗಿದೆ)
|
|
13.
|
ಗಯಾ
|
ಕಾಕಿನಾಡ
|
ಅಟ್ಟಾರಿ (ರಸ್ತೆ) (ಹೊಸದಾಗಿ ಸೇರಿಸಲಾಗಿದೆ)
|
|
14.
|
ಗೋವಾ
|
(ಡಬೊಲಿಮ್)
|
ಎನ್ನೋರ್- ಕಾಮರಾಜರ್
|
|
15.
|
ಗೋವಾ (ಮೋಪ)
|
ಕಾಂಡ್ಲಾ
|
|
|
16.
|
ಗುವಾಹಟಿ
|
ಕಾರೈಕಲ್
|
|
|
17.
|
ಹೈದರಾಬಾದ್
|
ಕಟ್ಟುಪಲ್ಲಿ
|
|
|
18.
|
ಇಂದೋರ್
|
ಕೋಲ್ಕತ್ತಾ
|
|
|
19.
|
ಜೈಪುರ
|
ಕೊಲ್ಲಂ
|
|
|
20.
|
ಕಣ್ಣೂರು
|
ಕೃಷ್ಣಪಟ್ಟಣಂ
|
|
|
21.
|
ಕೋಲ್ಕತ್ತಾ
|
ಮಾಂಡ್ವಿ
|
|
|
22.
|
ಲಕ್ನೋ
|
ಮೊರ್ಮುಗಾವೊ
|
|
|
23.
|
ಮಧುರೈ
|
ಮುಂಬೈ
|
|
|
24.
|
ಮಂಗಳೂರು
|
ಮುಂಡ್ರಾ
|
|
|
25.
|
ಮುಂಬೈ
|
ನಾಗಪಟ್ಟಣಂ
|
|
|
26.
|
ನಾಗ್ಪುರ
|
ನ್ಯೂ ಮಂಗಳೂರು
|
|
|
27.
|
ನವೀ ಮುಂಬಯಿ
|
ನ್ಹಾವಾ ಶೇವಾ
|
|
|
28.
|
ಪೋರ್ಟ್ ಬ್ಲೇರ್
|
ಪರದೀಪ್
|
|
|
29.
|
ಪುಣೆ
|
ಪಿಪಾವಾವ್
|
|
|
30.
|
ಸೂರತ್
|
ಪೋರ್‌ಬಂದರ್
|
|
|
31.
|
ತಿರುವನಂತಪುರಂ
|
ಪೋರ್ಟ್ ಬ್ಲೇರ್
|
|
|
32.
|
ತಿರುಚ್ಚಿ
|
ಸಿಕ್ಕಾ
|
|
|
33.
|
ವಾರಣಾಸಿ
|
ಟ್ಯೂನಾ ಟೆಕ್ರಾ
|
|
|
34.
|
ವಿಜಯವಾಡ
|
ಟ್ಯುಟಿಕೋರಿನ್
|
|
|
35.
|
ವಿಶಾಖಪಟ್ಟಣಂ
|
ವಲ್ಲಾರ್ಪದಂ
|
|
|
36.
|
ಭೋಪಾಲ್ (ಹೊಸದಾಗಿ ಸೇರಿಸಲಾಗಿದೆ)
|
ವಿಶಾಖಪಟ್ಟಣಂ
|
|
|
37.
|
ತಿರುಪತಿ (ಹೊಸದಾಗಿ ಸೇರಿಸಲಾಗಿದೆ)
|
ವಿಝಿಂಜಂ - ಕೋವಲಂ
|
|
|
38.
|
|
ವಿಝಿಂಜಂ
|
|
|
ಒಟ್ಟು
|
37
|
38
|
13
|
ಇ-ವೀಸಾ
ಭಾರತೀಯ ವೀಸಾ ಆಡಳಿತವನ್ನು ಉದಾರೀಕರಿಸಲು ಮತ್ತು ಸರಳೀಕರಿಸಲು ತೆಗೆದುಕೊಂಡ ಒಂದು ಮಹತ್ವದ ಹೆಜ್ಜೆಯೆಂದರೆ ವಿಶೇಷವಾಗಿ ಪ್ರವಾಸಿ ವೀಸಾ ಆಡಳಿತ, ಇ-ವೀಸಾ ಸೌಲಭ್ಯವನ್ನು ಪರಿಚಯಿಸುವುದಾಗಿದೆ. ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್ (ಇಟಿಎ) ನೊಂದಿಗೆ ಇ-ವೀಸಾ ಸೌಲಭ್ಯವನ್ನು 43 ದೇಶಗಳ ಪ್ರಜೆಗಳಿಗೆ 2014 ರಲ್ಲಿಪರಿಚಯಿಸಲಾಯಿತು. ಈ ಸೌಲಭ್ಯವು ಪ್ರಸ್ತುತ 172 ದೇಶಗಳ ಪ್ರಜೆಗಳಿಗೆ ಲಭ್ಯವಿದೆ.
ಇ-ವೀಸಾ ಪ್ರಸ್ತುತ ಈ ಕೆಳಗಿನ 17 ಉಪ ವಿಭಾಗಗಳಲ್ಲಿಲಭ್ಯವಿದೆ:
|
ಕ್ರಮ ಸಂಖ್ಯೆ
|
ವರ್ಗ
|
|
1.
|
ಪ್ರವಾಸಿ
|
|
2.
|
ಪರ್ವತಾರೋಹಣ
|
|
3.
|
ಬಿ -1
ಬಿ -2
ಬಿ- 3 (ಬಿಸಿನೆಸ್ ವೀಸಾ)
ಬಿ -4
ಬಿ -5
ಬಿ -6
|
|
4.
|
|
5.
|
|
6.
|
|
7.
|
|
8.
|
|
9.
|
ಎಂ-1
ಎಂ-2 (ಮೆಡಿಕಲ್ ವೀಸಾ)
ಎಂ-3
ಎಂ-4
|
|
10.
|
|
11.
|
|
12.
|
|
13.
|
ಎಸ್ -1 (ವಿದ್ಯಾರ್ಥಿ ವೀಸಾ)
ಎಸ್-2
|
|
14.
|
|
15.
|
ಟ್ರಾನ್ಸಿಟ್
|
|
16.
|
ಎಕ್ಸ್-1 (ಇತರ)
|
|
17.
|
ಗ್ರೂಪ್ ವಿಸಿಟರ್ ವೀಸಾ (ಕ್ರೂಸ್)
|
ಭಾರತವು ಈಗ ಸರಿಸುಮಾರು ಶೇ. 78ರಷ್ಟು ವೀಸಾಗಳನ್ನು ಎಲೆಕ್ಟ್ರಾನಿಕ್ ವೀಸಾಗಳಾಗಿ ನೀಡುತ್ತದೆ ಎಂಬುದನ್ನು ಉಲ್ಲೇಖಿಸುವುದು ಸೂಕ್ತವಾಗಿದೆ.
*****
(ಪ್ರಕಟಣೆ ಐ.ಡಿ.: 2297359)
ವಿಸಿಟರ್ ಕೌಂಟರ್ : 89
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
Odia
,
English
,
Urdu
,
हिन्दी
,
Marathi
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam