ಪ್ರಧಾನ ಮಂತ್ರಿಯವರ ಕಛೇರಿ
ಅಮೆರಿಕ ಉಪಾಧ್ಯಕ್ಷರಿಂದ ದೂರವಾಣಿ ಕರೆ ಸ್ವೀಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
ಭಾರತ-ಯು.ಎಸ್. ಕಾರ್ಯತಂತ್ರದ ಪಾಲುದಾರಿಕೆಯಲ್ಲಿನ ಪ್ರಗತಿಯನ್ನು ಪ್ರಧಾನಮಂತ್ರಿ ಮತ್ತು ಯು.ಎಸ್. ಉಪಾಧ್ಯಕ್ಷರಾದ ಶ್ರೀ ವ್ಯಾನ್ಸ್ ಅವರು ಪರಿಶೀಲಿಸಿದರು
ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಪ್ರಧಾನಮಂತ್ರಿ ಮತ್ತು ಉಪಾಧ್ಯಕ್ಷರಾದ ವ್ಯಾನ್ಸ್ ಅವರು ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು
ಮಗನ ಜನನಕ್ಕಾಗಿ ಉಪಾಧ್ಯಕ್ಷರಾದ ಶ್ರೀ ವ್ಯಾನ್ಸ್ ಮತ್ತು ಶ್ರೀಮತಿ ಉಷಾ ವ್ಯಾನ್ಸ್ ಅವರಿಗೆ ಪ್ರಧಾನಮಂತ್ರಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು
ಪ್ರಕಟಣಾ ದಿನಾಂಕ:
08 AUG 2026 11:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕ ಉಪಾಧ್ಯಕ್ಷರಾದ ಶ್ರೀ ಜೆ.ಡಿ. ವ್ಯಾನ್ಸ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.
ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಲ್ಲಿನ ಪ್ರಗತಿಯನ್ನು ಪ್ರಧಾನಮಂತ್ರಿ ಮತ್ತು ಉಪಾಧ್ಯಕ್ಷರಾದ ಶ್ರೀ ವ್ಯಾನ್ಸ್ ಅವರು ಪರಿಶೀಲಿಸಿದರು. ಅವರುಗಳು ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆಗಳಲ್ಲಿ ನಿರಂತರ ವೇಗತೆಯನ್ನು ಗಮನಿಸಿದರು ಮತ್ತು ವ್ಯಾಪಾರ, ರಕ್ಷಣೆ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಇಂಧನ ಭದ್ರತೆ ಮತ್ತು ನಿರ್ಣಾಯಕ ಖನಿಜಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಅವರುಗಳು ಪುನರುಚ್ಚರಿಸಿದರು.
ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಅವರುಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಮಗನ ಜನನಕ್ಕೆ ಉಪಾಧ್ಯಕ್ಷರಾದ ಶ್ರೀ ವ್ಯಾನ್ಸ್ ಮತ್ತು ಶ್ರೀಮತಿ ಉಷಾ ವ್ಯಾನ್ಸ್ ಅವರಗಳನ್ನು ಪ್ರಧಾನಮಂತ್ರಿ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದರು ಮತ್ತು ಕುಟುಂಬಕ್ಕೆ ಶುಭಾಶಯಗಳನ್ನು ತಿಳಿಸಿದರು.
*****
(ಪ್ರಕಟಣೆ ಐ.ಡಿ.: 2296977)
ವಿಸಿಟರ್ ಕೌಂಟರ್ : 52
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Odia
,
Telugu
,
Malayalam