ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನರು ಹರ್ ಘರ್ ತಿರಂಗಾ ಆಂದೋಲನದಲ್ಲಿ ಭಾಗಿಯಾಗುವಂತೆ ಪ್ರಧಾನಮಂತ್ರಿ ಕರೆ

ಪ್ರಕಟಣಾ ದಿನಾಂಕ: 09 AUG 2026 7:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಆಂದೋಲನದಲ್ಲಿ ಜನರು ಉತ್ಸಾಹದಿಂದ ಭಾಗಿಯಾಗುವಂತೆ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ಸಾಮೂಹಿಕ ಸಂಕಲ್ಪಕ್ಕೆ ಹೊಸ ಚೈತನ್ಯ ತುಂಬುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ. ತ್ರಿವರ್ಣ ಧ್ವಜವು ಭಾರತದ ಹೆಮ್ಮೆಯ ಸಂಕೇತವಾಗಿದೆ ಹಾಗೂ ಪ್ರತಿಯೊಬ್ಬ ನಾಗರಿಕರೂ ರಾಷ್ಟ್ರಕ್ಕಾಗಿ ತಮ್ಮ ಅತ್ಯುತ್ತಮವಾದದ್ದನ್ನು ನೀಡುವುದಕ್ಕೆ ಶ್ರಮಿಸಲು ಸದಾ ಸ್ಫೂರ್ತಿಯ ಸೆಲೆಯಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. 

ದೇಶವು ರಾಷ್ಟ್ರೀಯ ಗೀತೆಯ 150 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಈ ವರ್ಷದ ಹರ್ ಘರ್ ತಿರಂಗಾ ಅಭಿಯಾನವು ವಂದೇ ಮಾತರಂಗೆ ಸಮರ್ಪಿತವಾಗಿದೆ ಎಂದು ಶ್ರೀ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. 

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ನಮ್ಮ ತ್ರಿವರ್ಣ ಧ್ವಜವು ನಮ್ಮ ಹೆಮ್ಮೆ ಮತ್ತು ರಾಷ್ಟ್ರಕ್ಕಾಗಿ ಸದಾ ನಮ್ಮ ಅತ್ಯುತ್ತಮವಾದದ್ದನ್ನು ನೀಡಲು ಸ್ಫೂರ್ತಿಯ ಸ್ಥಿರ ಮೂಲವಾಗಿದೆ.

#HarGharTiranga ಆಂದೋಲನದಲ್ಲಿ ಉತ್ಸಾಹದಿಂದ ಭಾಗವಹಿಸೋಣ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ನವಚೈತನ್ಯ ತುಂಬೋಣ.  ವಂದೇ ಮಾತರಂನ 150 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ಈ ವರ್ಷದ ಪ್ರಯತ್ನಗಳು ವಂದೇ ಮಾತರಂಗೆ ಸಮರ್ಪಿತವಾಗಿರುವುದಕ್ಕೆ ಸಂತೋಷವಾಗಿದೆ.

https://harghartiranga.com

 

*****


(ಪ್ರಕಟಣೆ ಐ.ಡಿ.: 2296922) ವಿಸಿಟರ್ ಕೌಂಟರ್ : 89