ವಾರ್ತಾ ಮತ್ತು ಪ್ರಸಾರ ಸಚಿವಾಲಯ
ʻಐಟಿ ನಿಯಮಗಳು-2021ʼರ ಪ್ರಕಾರ ಮದ್ಯ ಮತ್ತು ತಂಬಾಕು ಕಂಟೆಂಟ್‌ನ ವರ್ಗೀಕರಣ ಕಡ್ಡಾಯವಾಗಿದೆ; 3-ಹಂತದ ಕಾರ್ಯವಿಧಾನವು ನೀತಿ ಸಂಹಿತೆಯ ದೂರುಗಳನ್ನು ಪರಿಹರಿಸುತ್ತದೆ
ಪ್ರಕಟಣಾ ದಿನಾಂಕ:
07 AUG 2026 3:24PM by PIB Bengaluru
ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಬಿತ್ತರಿಸುವ ಪ್ರಕಾಶಕರು ಹಾಗೂ ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್ (ಒಟಿಟಿ ವೇದಿಕೆ) ಪ್ರಕಾಶಕರಿಗೆ ಸಾಂಸ್ಥಿಕ ಕಾರ್ಯವಿಧಾನವನ್ನು ಜಾರಿಗೆ ತರುವ ಸಲುವಾಗಿ ಸರ್ಕಾರವು ʻಐಟಿ ಕಾಯ್ದೆ-2000ರ ಅಡಿಯಲ್ಲಿ ʻಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ, ನೈತಿಕ ಸಂಹಿತೆ) ನಿಯಮಗಳು-2021ʼ ಅನುಷ್ಠಾನಗೊಳಿಸಿ 25.02.2021ರಂದು ಅಧಿಸೂಚನೆ ಹೊರಡಿಸಿದೆ.
ನಿಯಮಗಳ ಭಾಗ-III ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್ (ಒಟಿಟಿ ವೇದಿಕೆ) ಪ್ರಕಾಶಕರಿಗೆ ನೀತಿ ಸಂಹಿತೆಯನ್ನು ಒದಗಿಸುತ್ತದೆ.
ನೀತಿ ಸಂಹಿತೆಯು, ಇತರ ವಿಷಯಗಳ ಜೊತೆಗೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕಾನೂನಿನಿಂದ ನಿಷೇಧಿಸಲಾದ ಯಾವುದೇ ವಿಷಯವನ್ನು ಪ್ರಸಾರ ಮಾಡದಿರಲು, ಸೂಕ್ತ ಎಚ್ಚರಿಕೆ ಮತ್ತು ವಿವೇಚನೆಯನ್ನು ಚಲಾಯಿಸಲು ಮತ್ತು ನಿಯಮಗಳ ಶೆಡ್ಯೂಲ್‌ನಲ್ಲಿ ವಿವರಿಸಿದಂತೆ ಈ ಕೆಳಗಿನ ಆಧಾರದ ಮೇಲೆ ಕಂಟೆಂಟ್ ವರ್ಗೀಕರಣವನ್ನು ಕೈಗೊಳ್ಳಲು ಸೂಚಿಸುತ್ತದೆ: i) ಥೀಮ್‌ಗಳು ಮತ್ತು ಸಂದೇಶಗಳು; ii) ಹಿಂಸೆ; iii) ನಗ್ನತೆ; iv) ಲೈಂಗಿಕತೆ; v) ಭಾಷೆ; vi) ಡ್ರಗ್ ಮತ್ತು ಮಾದಕ ದ್ರವ್ಯಗಳ ನಿಂದನೆ; ಮತ್ತು (vii) ಭಯಾನಕತೆ.
ಐಟಿ ನಿಯಮಗಳು-2021ರ ಶೆಡ್ಯೂಲ್‌ನ ಭಾಗ II, 'ಸೈಕೋಟ್ರೋಪಿಕ್ ವಸ್ತುಗಳು, ಮದ್ಯ, ಧೂಮಪಾನ ಮತ್ತು ತಂಬಾಕು ಹಾಗೂ ಅನುಕರಿಸಬಹುದಾದ ನಡವಳಿಕೆ'ಗಳನ್ನು ಒಳಗೊಂಡಿರುವ ಕಂಟೆಂಟ್ ಸೇರಿದಂತೆ, ವಿಷಯದ ವರ್ಗೀಕರಣಕ್ಕಾಗಿ ಮಾರ್ಗಸೂಚಿಗಳನ್ನು ಸೂಚಿಸುತ್ತದೆ.
ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ಮೂರು-ಹಂತದ ಕುಂದುಕೊರತೆ ನಿವಾರಣಾ ಕಾರ್ಯವಿಧಾನದ ನಿಬಂಧನೆಗಳ ಅಡಿಯಲ್ಲಿ ಪರಿಹರಿಸಲಾಗುತ್ತದೆ. ಸಚಿವಾಲಯವು ಸ್ವೀಕರಿಸಿದ ದೂರುಗಳನ್ನು ಐಟಿ ನಿಯಮಗಳು-2021ರ ಪ್ರಕಾರ ಪರಿಹಾರಕ್ಕಾಗಿ ಸಂಬಂಧಪಟ್ಟ ʻಒಟಿಟಿʼ ವೇದಿಕೆಗಳಿಗೆ ರವಾನಿಸಲಾಗುತ್ತದೆ.
ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳಿಗೆ ಸಂಬಂಧಿಸಿದ ಕಂಟೆಂಟ್ ಪ್ರಸಾರ ಮಾಡುವ ಕುರಿತು ಸರ್ಕಾರವು ʻಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್ (ಒಟಿಟಿ ವೇದಿಕೆ) ಪ್ರಕಾಶಕರಿಗೆ 26.11.2024 ರಂದು ಮಾರ್ಗಸೂಚಿಯನ್ನು ಹೊರಡಿಸಿದೆ.
ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ರಾಜ್ಯಸಭೆಯಲ್ಲಿ ಶ್ರೀ ಹ್ಯಾರಿಸ್ ಬೀರನ್ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರವಾಗಿ ಈ ಮಾಹಿತಿಯನ್ನು ನೀಡಿದರು.
*****
(ಪ್ರಕಟಣೆ ಐ.ಡಿ.: 2296076)
ವಿಸಿಟರ್ ಕೌಂಟರ್ : 53