ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ʻಅಂತಾರಾಷ್ಟ್ರೀಯ ಕ್ಲೌಡೆಡ್ ಚಿರತೆ ದಿನʼದಂದು, ವಿಶೇಷ ʻಸಂರಕ್ಷಣಾ ಕ್ರಿಯಾ ಯೋಜನೆʼಯ ಮೂಲಕ ಈ ಕಾಡುಬೆಕ್ಕಿನ ಸಂರಕ್ಷಣೆಯನ್ನು ಬಲಪಡಿಸಿದ ಭಾರತ


ಈ ಕ್ರಿಯಾ ಯೋಜನೆಯು ಈಶಾನ್ಯ ಭಾರತದಾದ್ಯಂತ ಆವಾಸಸ್ಥಾನ ರಕ್ಷಣೆ, ವೈಜ್ಞಾನಿಕ ಮೇಲ್ವಿಚಾರಣೆ, ಭೂದೃಶ್ಯ ಸಂಪರ್ಕ ಮತ್ತು ಸಮುದಾಯದ ಭಾಗವಹಿಸುವಿಕೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ

प्रविष्टि तिथि: 04 AUG 2026 12:41PM by PIB Bengaluru

ʻಅಂತಾರಾಷ್ಟ್ರೀಯ ಕ್ಲೌಡೆಡ್ ಚಿರತೆ ದಿನʼದ ಸಂದರ್ಭದಲ್ಲಿ, ಹೊಸದಾಗಿ ಪ್ರಾರಂಭಿಸಲಾದ ʻಕ್ಲೌಡೆಡ್ ಚಿರತೆ ಸಂರಕ್ಷಣಾ ಕ್ರಿಯಾ ಯೋಜನೆʼ (ಸಿಎಪಿ) ಮೂಲಕ ಏಷ್ಯಾದ ಅಪರೂಪದ ಕಾಡುಬೆಕ್ಕು ಪ್ರಭೇದವನ್ನು ಸಂರಕ್ಷಿಸುವ ತನ್ನ ಬದ್ಧತೆಯನ್ನು ಭಾರತವು ಪುನರುಚ್ಚರಿಸಿದೆ. ಭಾರತ ಸರ್ಕಾರ-ಜಿಇಎಫ್-ಯುಎನ್‌ಡಿಪಿ ಉಪಕ್ರಮದ ಅಡಿಯಲ್ಲಿ ಸಿದ್ಧಪಡಿಸಲಾದ ಕ್ರಿಯಾ ಯೋಜನೆ ʻಸಿಎಪಿʼಯನ್ನು ಕೊಯಮತ್ತೂರಿನಲ್ಲಿ ಜುಲೈ 2026ರ ಎರಡನೇ ವಾರದಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್‌ಸಿಎನ್‌ಬಿಡಬ್ಲ್ಯುಎಲ್) ಸ್ಥಾಯಿ ಸಮಿತಿಯ 91ನೇ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಕ್ರಿಯಾ ಯೋಜನೆಯು ಆವಾಸಸ್ಥಾನಗಳನ್ನು ಭದ್ರಪಡಿಸಲು, ಅರಣ್ಯ ಸಂಪರ್ಕವನ್ನು ಪುನಃಸ್ಥಾಪಿಸಲು, ವೈಜ್ಞಾನಿಕ ಮೇಲ್ವಿಚಾರಣೆಯನ್ನು ಬಲಪಡಿಸಲು ಮತ್ತು ಪ್ರಭೇದಗಳ ಸಂರಕ್ಷಣೆಗಾಗಿ ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸಲು ಸಮಗ್ರ ನೀತಿ ಚೌಕಟ್ಟನ್ನು ಒದಗಿಸುತ್ತದೆ.

ಈಶಾನ್ಯ ಭಾರತದಾದ್ಯಂತ ಕ್ಲೌಡೆಡ್‌ ಚಿರತೆಯ ದೀರ್ಘಕಾಲೀನ ಸಂರಕ್ಷಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ʻಸಿಎಪಿʼ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕಾರ್ಯವಿಧಾನವು ಭೂದೃಶ್ಯ ಮಟ್ಟದ ಸಂರಕ್ಷಣೆ, ವೈಜ್ಞಾನಿಕ ಮೌಲ್ಯಮಾಪನ, ಸಮುದಾಯದ ಭಾಗವಹಿಸುವಿಕೆ ಮತ್ತು ಪ್ರಭೇದಗಳು ಹಾಗೂ ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ತಂತ್ರಜ್ಞಾನ-ಚಾಲಿತ ಮಧ್ಯಸ್ಥಿಕೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಅರಣ್ಯ ಆವಾಸಸ್ಥಾನಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಭೂದೃಶ್ಯ-ಮಟ್ಟದ ಆವಾಸಸ್ಥಾನ ಪುನಃಸ್ಥಾಪನೆ ಮತ್ತು ಕಾರಿಡಾರ್ ಸಂರಕ್ಷಣೆಯೊಂದಿಗೆ ಈಶಾನ್ಯ ಭಾರತದಾದ್ಯಂತ 14 ಆದ್ಯತೆಯ ಸಂರಕ್ಷಣಾ ಪ್ರದೇಶಗಳನ್ನು ಗುರುತಿಸುವುದು ಕ್ರಿಯಾ ಯೋಜನೆಯ ಪ್ರಮುಖ ಅಂಶವಾಗಿದೆ.  ʻವನ್ಯಜೀವಿ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿ ಯೋಜನೆʼಯ(ಐಡಿಡಬ್ಲ್ಯುಎಚ್) ಭಾಗವಾಗಿರುವ ʻಪ್ರಭೇದಗಳ ಪುನಸ್ಥಾಪನೆ ಕಾರ್ಯಕ್ರಮʼದ ಅಡಿಯಲ್ಲಿ ಈ ಪ್ರಭೇದಗಳನ್ನು ಸೇರಿಸುವ ಮೂಲಕ ಕ್ಲೌಡೆಡ್‌ ಚಿರತೆ ಸಂರಕ್ಷಣೆಗಾಗಿ ಸಾಂಸ್ಥಿಕ ಚೌಕಟ್ಟನ್ನು ಸರ್ಕಾರ ಬಲಪಡಿಸಿದೆ.

ಕ್ಯಾಮೆರಾ ನಿಗಾ(ಕ್ಯಾಮೆರಾ ಟ್ರ್ಯಾಪ್‌), ನಿವಾಸ ಸಮೀಕ್ಷೆಗಳು, ತಳಿಶಾಸ್ತ್ರ ಮತ್ತು ಪರಿಸರ ಡಿಎನ್‌ಎ (ಇಡಿಎನ್‌ಎ) ಮೂಲಕ ಪ್ರಮಾಣೀಕೃತ ವೈಜ್ಞಾನಿಕ ಮೇಲ್ವಿಚಾರಣೆಯನ್ನು ʻಸಿಎಪಿʼ ಒದಗಿಸುತ್ತದೆ. ಇದು ಪ್ರಭೇದಗಳು ಮತ್ತು ಅದರ ಆವಾಸಸ್ಥಾನದ ಅವಶ್ಯಕತೆಗಳ ಬಗ್ಗೆ ಸುಧಾರಿತ ತಿಳುವಳಿಕೆಯನ್ನು ಸಕ್ರಿಯಗೊಳಿಸುತ್ತದೆ. ಕಳ್ಳಬೇಟೆ ವಿರೋಧಿ ಕ್ರಮಗಳು ಮತ್ತು ವನ್ಯಜೀವಿ ಅಪರಾಧ ತಡೆಗಟ್ಟುವಿಕೆಯನ್ನು  ಬಲಪಡಿಸಲು ಇದು ಒತ್ತು ನೀಡುತ್ತದೆ. ಮುಂಚೂಣಿ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ ಮತ್ತೊಂದು ಪ್ರಮುಖ ಅಂಶವಾಗಿದೆ. ಕ್ಷೇತ್ರ ಮಟ್ಟದ ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸಲು ʻM-STrIPESʼ ಸ್ಮಾರ್ಟ್ ಅಪ್ಲಿಕೇಶನ್ ಬಳಕೆಯೂ ಇದರಲ್ಲಿ ಸೇರಿದೆ.

ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳ ನಿರ್ಣಾಯಕ ಪಾತ್ರವನ್ನು ಗುರುತಿಸಿ, ʻಕ್ರಿಯಾ ಯೋಜನೆ;ಯು ಸಮುದಾಯ ಆಧಾರಿತ ಸಂರಕ್ಷಣೆ ಮತ್ತು ಸುಸ್ಥಿರ ಜೀವನೋಪಾಯದ ಬೆಂಬಲವನ್ನು ಉತ್ತೇಜಿಸುತ್ತದೆ.  ಇದು  ನೆರೆಯ ರೇಂಜ್‌ ರಾಷ್ಟ್ರಗಳೊಂದಿಗೆ ಅದರ ವ್ಯಾಪ್ತಿಯಾದ್ಯಂತ ಪ್ರಭೇದಗಳ ಸಂಘಟಿತ ಸಂರಕ್ಷಣೆಗಾಗಿ ಗಡಿಯಾಚೆಗಿನ ಸಹಕಾರವನ್ನು ಪ್ರೋತ್ಸಾಹಿಸುತ್ತದೆ. ʻಸಿಎಪಿʼಯು ಸಂರಕ್ಷಣಾ ಯೋಜನೆಯಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹೊಂದಾಣಿಕೆಯ ನಿರ್ವಹಣೆಯನ್ನು ಮತ್ತಷ್ಟು ಸಂಯೋಜಿಸುತ್ತದೆ, ಆ ಮೂಲಕ ಕ್ಲೌಡೆಡ್‌ ಚಿರತೆಯ ಆವಾಸಸ್ಥಾನಗಳು ಮತ್ತು ಪ್ರದೇಶಗಳ ದೀರ್ಘಕಾಲೀನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ.

ಕ್ಲೌಡೆಡ್‌ ಚಿರತೆಯ ಸಂರಕ್ಷಣೆಯು ಈಶಾನ್ಯ ಭಾರತದ ಅರಣ್ಯಗಳು ಮತ್ತು ನೈಸರ್ಗಿಕ ಪರಂಪರೆಯ ಸಂರಕ್ಷಣೆಯೊಂದಿಗೆ ಅಂತರ್ಗತವಾಗಿ ಸಂಬಂಧ ಹೊಂದಿದೆ. ಸಂರಕ್ಷಣಾ ಕ್ರಿಯಾ ಯೋಜನೆಯ ಮೂಲಕ, ಭಾರತವು ಆವಾಸಸ್ಥಾನ ರಕ್ಷಣೆ, ವೈಜ್ಞಾನಿಕ ಮೇಲ್ವಿಚಾರಣೆ, ಆವಾಸಸ್ಥಾನ ಪುನಃಸ್ಥಾಪನೆ, ತಂತ್ರಜ್ಞಾನ, ಸಮುದಾಯದ ಭಾಗವಹಿಸುವಿಕೆ ಮತ್ತು ಈ ಗಮನಾರ್ಹ ಕಾಡು ಬೆಕ್ಕಿನ ಭವಿಷ್ಯವನ್ನು ಭದ್ರಪಡಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಒಳಗೊಂಡಿರುವ ಸಂಘಟಿತ ವಿಧಾನವನ್ನು ಮುನ್ನಡೆಸುತ್ತಿದೆ.

(ಸಂರಕ್ಷಣಾ ಕ್ರಿಯಾ ಯೋಜನೆ ದಾಖಲೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ)

 

*****


(रिलीज़ आईडी: 2294227) आगंतुक पटल : 19
इस विज्ञप्ति को इन भाषाओं में पढ़ें: Bengali , Urdu , English , हिन्दी , Bengali-TR , Gujarati , Tamil , Malayalam