ಪ್ರಧಾನ ಮಂತ್ರಿಯವರ ಕಛೇರಿ
ಪುರುಷರ 55 ಕೆ.ಜಿ ಬಾಕ್ಸಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಜದುಮಣಿ ಸಿಂಗ್ ಮಂಡೆಂಗ್ಬಾಮ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ
प्रविष्टि तिथि:
02 AUG 2026 12:52AM by PIB Bengaluru
ಗ್ಲಾಸ್ಗೊದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟ 2026 ರ ಪುರುಷರ 55 ಕೆ.ಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಜದುಮಣಿ ಸಿಂಗ್ ಮಂಡೆಂಗ್ಬಾಮ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಜದುಮಣಿ ಸಿಂಗ್ ಮಂಡೆಂಗ್ಬಾಮ್ ಅವರ ಯಶಸ್ಸು ಅವರ ಧೈರ್ಯ, ಶಿಸ್ತು ಮತ್ತು ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಅವರ ಮುಂದಿನ ಪ್ರಯತ್ನಗಳಿಗೆ ಶ್ರೀ ನರೇಂದ್ರ ಮೋದಿ ಅವರು ಶುಭ ಹಾರೈಸಿದರು.
ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ;
"ಗ್ಲಾಸ್ಗೊದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ 55 ಕೆ.ಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಜದುಮಣಿ ಸಿಂಗ್ ಮಂಡೆಂಗ್ಬಾಮ್ ಅವರಿಗೆ ಅಭಿನಂದನೆಗಳು. ಅವರ ಯಶಸ್ಸಿಗೆ ಅವರ ಧೈರ್ಯ, ಶಿಸ್ತು ಮತ್ತು ಪರಿಶ್ರಮ ಕಾರಣವಾಗಿದೆ. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು.
#CWG2026"
*****
(रिलीज़ आईडी: 2293351)
आगंतुक पटल : 3