ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಂಧ್ರಪ್ರದೇಶದ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣದ ತುಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 01 AUG 2026 4:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣದ ತುಣುಕು ನೋಟಗಳನ್ನು ಹಂಚಿಕೊಂಡಿದ್ದಾರೆ.

ಸರಣಿ ಪೋಸ್ಟ್‌ಗಳಲ್ಲಿ, ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ;

‘‘ಭೋಗಾಪುರಂನಲ್ಲಿಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ಆಂಧ್ರಪ್ರದೇಶದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ಅಭಿನಂದನೆಗಳು.

ಈ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿರುವುದು ನಮ್ಮ ಶ್ರೀಮಂತ ಇತಿಹಾಸದ ಸೂಧಿರ್ತಿದಾಯಕ ವ್ಯಕ್ತಿಗಳ ಕೊಡುಗೆಯನ್ನು ಗುರುತಿಸುವ ನಮ್ಮ ಒತ್ತಿಗೆ ಅನುಗುಣವಾಗಿದೆ.’’

‘‘ಕೇಂದ್ರ ಮತ್ತು ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರವು ರಾಜ್ಯದ ಪ್ರಗತಿಗಾಗಿ ಗಮನಾರ್ಹ ವೇಗದಲ್ಲಿಕೆಲಸ ಮಾಡುತ್ತಿದೆ. ನಾವು ನೀಲಿ ಆರ್ಥಿಕತೆ, ಬಂದರು ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ ಮತ್ತು ಹೆಚ್ಚಿನವುಗಳ ಮೇಲೆ ಗಮನ ಹರಿಸುತ್ತಿದ್ದೇವೆ.’’

‘‘ನನ್ನ ಸ್ನೇಹಿತ ಶ್ರೀ ಚಂದ್ರಬಾಬು ನಾಯ್ಡು ಅವರ ನಾಯಕತ್ವದಲ್ಲಿ, ಆಂಧ್ರಪ್ರದೇಶವು ಭವಿಷ್ಯದ ಬಗ್ಗೆ ಯೋಚಿಸುತ್ತಿದೆ ಮತ್ತು ಅದಕ್ಕಾಗಿ ಬಹಳ ಹುರುಪಿನಿಂದ ಕೆಲಸ ಮಾಡುತ್ತಿದೆ. ಸೆಮಿಕಂಡಕ್ಟರ್‌ಗಳು, ಐಟಿ ಮತ್ತು ನಾವೀನ್ಯತೆಯಂತಹ ಕ್ಷೇತ್ರಗಳಲ್ಲಿ ರಾಜ್ಯವು ಶ್ರಮಿಸುತ್ತಿದೆ. ಇದು ರಾಜ್ಯದ ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ.

 

@ncbn”

 

*****


(ಪ್ರಕಟಣೆ ಐ.ಡಿ.: 2293289) ವಿಸಿಟರ್ ಕೌಂಟರ್ : 70