ಪ್ರಧಾನ ಮಂತ್ರಿಯವರ ಕಛೇರಿ
2026ರ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ +110 ಕೆ.ಜಿ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಲವ್ ಪ್ರೀತ್ ಸಿಂಗ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
प्रविष्टि तिथि:
31 JUL 2026 2:32PM by PIB Bengaluru
ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟ 2026ರ ಪುರುಷರ +110 ಕೆ.ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಲವ್ ಪ್ರೀತ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಲವ್ ಪ್ರೀತ್ ಸಿಂಗ್ ಅವರು ತಮ್ಮ ಅತ್ಯುತ್ತಮ ಪ್ರಯತ್ನದಿಂದ ಸ್ನ್ಯಾಚ್ ಸ್ಪರ್ಧೆಯಲ್ಲಿ ಹೊಸ ಕಾಮನ್ ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.
ಶ್ರೀ ನರೇಂದ್ರ ಮೋದಿ ಅವರು, ಅವರ ಸಮರ್ಪಣೆ ಮತ್ತು ದೃಢನಿಶ್ಚಯವನ್ನು ಶ್ಲಾಘಿಸಿದರು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
"ಪುರುಷರ +110 ಕೆ.ಜಿ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಲವ್ ಪ್ರೀತ್ ಸಿಂಗ್ ಅವರ ಅಸಾಧಾರಣ ಪ್ರದರ್ಶನ. ಸ್ನ್ಯಾಚ್ ನಲ್ಲಿ ಅವರ ಅತ್ಯುತ್ತಮ ಪ್ರಯತ್ನವು ಹೊಸ ಕಾಮನ್ ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ನಿರ್ಮಿಸಿದೆ. ಅವರ ಸಮರ್ಪಣೆ ಮತ್ತು ದೃಢನಿಶ್ಚಯವು ನಿಜವಾಗಿಯೂ ಶ್ಲಾಘನೀಯವಾಗಿದೆ. ಮುಂದಿನ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು.
#CWG2026"
*****
(रिलीज़ आईडी: 2292384)
आगंतुक पटल : 12
इस विज्ञप्ति को इन भाषाओं में पढ़ें:
Telugu
,
Marathi
,
Malayalam
,
Assamese
,
English
,
Urdu
,
हिन्दी
,
Bengali
,
Manipuri
,
Punjabi
,
Gujarati
,
Tamil