ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಕೃತಿಯ ಮೇಲಿನ ಗೌರವ ಮತ್ತು ಪರಿಸರ ಉತ್ತರದಾಯಿತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 30 JUL 2026 10:26AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರಕೃತಿ, ಪರಿಸರ ಮತ್ತು ಇಡೀ ಸೃಷ್ಟಿಯ ಮೇಲಿನ ಗೌರವವು ನಮ್ಮ ಅಸ್ತಿತ್ವದ ಮೂಲದಲ್ಲಿದೆ ಎಂದು ಹೇಳಿದ್ದಾರೆ. ಆರೋಗ್ಯಕರ, ಸಮೃದ್ಧ ಮತ್ತು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಲು ನಾವು ಪ್ರಕೃತಿಯಡೆಗೆ ಕೃತಜ್ಞತೆ ಮತ್ತು ನಿಸ್ವಾರ್ಥ ಸೇವೆಯ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಎಂದು ಅವರು ಎಲ್ಲರಿಗೂ ಕರೆ ನೀಡಿದರು.

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು-

“शं नो द्यावापृथिवी पूर्वहूतौ शमन्तरिक्षं दृशये नो अस्तु।

शं न ओषधीर्वनिनो भवन्तु शं नो रजसस्पतिरस्तु जिष्णुः॥”

ಸುಭಾಷಿತವು ಸೃಷ್ಟಿಯ ಆರಂಭದಿಂದಲೂ ಪೂಜಿಸಲ್ಪಡುತ್ತಿರುವ ದ್ಯುಲೋಕ ಮತ್ತು ಭೂಮಿಯು ನಮಗೆ ಸದಾ ಶುಭಕರವಾಗಿರಲಿ ಎಂದು ಆಶಿಸುತ್ತದೆ. ಭೂಮಿ ಮತ್ತು ಸೂರ್ಯನ ನಡುವಿನ ಮಧ್ಯಂತರ ಸ್ಥಳವು ನಮ್ಮ ಜೀವನಕ್ಕೆ ಪ್ರಯೋಜನಕಾರಿ ಮತ್ತು ಜ್ಞಾನೋದಯವನ್ನು ನೀಡಲಿ. ಎಲ್ಲಾ ಔಷಧೀಯ ಗಿಡಮೂಲಿಕೆಗಳು ಮತ್ತು ಅರಣ್ಯ ಸಸ್ಯಗಳು ನಮಗೆ ಆರೋಗ್ಯ, ಪೋಷಣೆ ಮತ್ತು ಸಂತೋಷವನ್ನು ಒದಗಿಸಲಿ. ಎಲ್ಲಾ ಲೋಕಗಳ ಸರ್ವವ್ಯಾಪಿ ಮತ್ತು ವಿಜಯಶಾಲಿ ಭಗವಂತ ನಮಗೆ ಕಲ್ಯಾಣ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ.

ಪ್ರಧಾನಮಂತ್ರಿ ಅವರು X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;

“प्रकृति, पर्यावरण और समस्त सृष्टि का सम्मान हमारे अस्तित्व के मूल में है। आइए, हम इनके प्रति पूरी कृतज्ञता और सेवाभाव के साथ एक स्वस्थ, समृद्ध और सशक्त राष्ट्र के निर्माण में सहभागी बनें।

शं नो द्यावापृथिवी पूर्वहूतौ शमन्तरिक्षं दृशये नो अस्तु।

शं न ओषधीर्वनिनो भवन्तु शं नो रजसस्पतिरस्तु जिष्णुः॥”

 

*****


(रिलीज़ आईडी: 2291568) आगंतुक पटल : 9
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Gujarati , Tamil , Telugu , Malayalam