ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಸರಕು ಸಂಗ್ರಹಣೆಯನ್ನು ತಡೆಯಲು, ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು, ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ಪಾರದರ್ಶಕ ಹಾಗೂ ದಕ್ಷ ಸಕ್ಕರೆ ಪೂರೈಕೆ ಸರಪಳಿಯನ್ನು ಖಚಿತಪಡಿಸಲು ಸರ್ಕಾರವು ಸಕ್ಕರೆ ವ್ಯಾಪಾರಿಗಳ ಮೇಲೆ ದಾಸ್ತಾನು ಮಿತಿಯನ್ನು ವಿಧಿಸುತ್ತದೆ

प्रविष्टि तिथि: 28 JUL 2026 4:51PM by PIB Bengaluru

ಭಾರತ ಸರ್ಕಾರವು ಆಗಸ್ಟ್ 1, 2026 ರಿಂದ ಜಾರಿಗೆ ಬರುವಂತೆ ದೇಶಾದ್ಯಂತ ಸಕ್ಕರೆ ವಿತರಕರ ಮೇಲೆ ದಾಸ್ತಾನು ಮಿತಿಗಳನ್ನು ವಿಧಿಸಲು ನಿರ್ಧರಿಸಿದೆ. ಈ ಆದೇಶವು ನವೆಂಬರ್ 30, 2026 ರವರೆಗೆ ಜಾರಿಯಲ್ಲಿರುತ್ತದೆ.

ಅಮಿತ ಸಕ್ಕರೆ ಸಂಗ್ರಹಣೆಯನ್ನು ನಿಗ್ರಹಿಸಲು, ಊಹಾತ್ಮಕ ವ್ಯಾಪಾರವನ್ನು ನಿರುತ್ಸಾಹಗೊಳಿಸಲು ಮತ್ತು ಸಮಂಜಸ ಬೆಲೆಯಲ್ಲಿ ಸಕ್ಕರೆಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸರ್ಕಾರವು ಸಕ್ಕರೆ ವಿತರಕರಿಗೆ ಸಂಗ್ರಹಣೆ ಹಾಗೂ ದಾಸ್ತಾನು ಮಿತಿಗಳನ್ನು ವಿಧಿಸಲು ನಿರ್ಧರಿಸಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಕ್ರಮಬದ್ಧವಾದ ಪೂರೈಕೆಗಳನ್ನು ಕಾಯ್ದುಕೊಳ್ಳುವುದು, ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ನಿಜವಾದ ವ್ಯಾಪಾರ ಮತ್ತು ವಿತರಣಾ ಚಟುವಟಿಕೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಮಿಲ್ ಗಳಿಂದ ಹೊರಬರುವ ಸಕ್ಕರೆಯ ಬೆಲೆಗಳಲ್ಲಿನ ಇತ್ತೀಚಿನ ಹೆಚ್ಚಳವು ಚಾಲ್ತಿಯಲ್ಲಿರುವ ಬೇಡಿಕೆ-ಪೂರೈಕೆ ಮೂಲಭೂತ ಅಂಶಗಳಿಂದ ಬೆಂಬಲಿತವಾಗಿಲ್ಲ ಎಂದು ಕೇಂದ್ರ ಸರ್ಕಾರ ಗಮನಿಸಿದೆ. ಕೆಲವು ವ್ಯಾಪಾರಿಗಳು, ವಿತರಕರು ಮತ್ತು ಮಾರುಕಟ್ಟೆ ಮಧ್ಯವರ್ತಿಗಳಿಂದ ಸಕ್ಕರೆಯ ನಿಜವಾದ ಭೌತಿಕ ಸಾಗಣೆ ಇಲ್ಲದೆ ಊಹಾತ್ಮಕ ವಹಿವಾಟುಗಳು ಮತ್ತು ಕಾಗದದ ವ್ಯಾಪಾರದೊಂದಿಗೆ ಸಂಗ್ರಹಣೆಯು ಮಾರುಕಟ್ಟೆಯಲ್ಲಿ ಕೊರತೆಯ ಕೃತಕ ಗ್ರಹಿಕೆಯನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ಗಮನಕ್ಕೆ ಬಂದಿದೆ. ಇಂತಹ ಕೃತ್ರಿಮ ಅಭ್ಯಾಸಗಳು ತಪ್ಪಿಸಬಹುದಾದ ಬೆಲೆ ಏರಿಳಿತಗಳಿಗೆ ಕಾರಣವಾಗಿವೆ ಮತ್ತು ಮಿಲ್ ಗಳಿಂದ ಹೊರಬರುವ ಸಕ್ಕರೆಯ ಬೆಲೆಗಳಲ್ಲಿ ಮತ್ತು ಮಾರುಕಟ್ಟೆಯ ಚಿಲ್ಲರೆ ಸಕ್ಕರೆ ಬೆಲೆಗಳಲ್ಲಿ ಈ ಮೂಲಕ ತೀವ್ರ ಏರಿಕೆ/ಹೆಚ್ಚಳಕ್ಕೆ ಕಾರಣವಾಗಿವೆ. ದೇಶೀಯ ಬಳಕೆಯ ಅವಶ್ಯಕತೆಗಳನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಗ್ರಾಹಕರಿಗೆ ಭರವಸೆ ನೀಡುತ್ತದೆ.

ಎಲ್ಲಾ ಸಕ್ಕರೆ ವಿತರಕರು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆನ್ಲೈನ್ ಪೋರ್ಟಲ್ https://foodstock.dfpd.gov.in/ ಮೂಲಕ ವಾರಕ್ಕೊಮ್ಮೆ ತಮ್ಮ ಸಕ್ಕರೆ ದಾಸ್ತಾನುಗಳ ಮಾಹಿತಿಯನ್ನು ಘೋಷಿಸಬೇಕಾಗುತ್ತದೆ ಮತ್ತು ತಮ್ಮ ದಾಸ್ತಾನು ಸ್ಥಿತಿಯನ್ನು ಪರಿಷ್ಕರಿಸಿ ನವೀಕರಿಸಬೇಕಾಗುತ್ತದೆ. ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಸಕ್ಕರೆ ಮಾರುಕಟ್ಟೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಸಮಂಜಸ ಬೆಲೆಯಲ್ಲಿ ಗ್ರಾಹಕರಿಗೆ ಸಕ್ಕರೆಯ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

 

*****


(रिलीज़ आईडी: 2290854) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Tamil , Telugu