ಪ್ರಧಾನ ಮಂತ್ರಿಯವರ ಕಛೇರಿ
ಬೆಳ್ಳಿ ಪದಕ ಗೆದ್ದ ಭಾರತೀಯ ಲಿಫ್ಟರ್ ರಿಷಿಕಾಂತ ಸಿಂಗ್ ಚಾನಂಬಮ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
26 JUL 2026 8:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಭಾರತೀಯ ಲಿಫ್ಟರ್ ರಿಷಿಕಾಂತ ಸಿಂಗ್ ಚಾನಂಬಮ್ ಬೆಳ್ಳಿ ಪದಕ ಗೆದ್ದು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಕ್ಕಾಗಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅವರ ದೃಢಸಂಕಲ್ಪ ಮತ್ತು ಅತ್ಯುತ್ತಮ ಪ್ರದರ್ಶನ ರಾಷ್ಟ್ರಕ್ಕೆ ಅಪಾರ ಸಂತೋಷ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇನ್ನೂ ಹೆಚ್ಚಿನ ಎತ್ತರ ಏರುವುದನ್ನು ಮುಂದುವರಿಸಲಿ ಮತ್ತು ಅನೇಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿ ಎಂದು ಶ್ರೀ ನರೇಂದ್ರ ಮೋದಿ ಹಾರೈಸಿದ್ದಾರೆ ಮತ್ತು ರಿಷಿಕಾಂತ ಸಿಂಗ್ ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ.
“ಭಾರತೀಯ ಲಿಫ್ಟರ್ ರಿಷಿಕಾಂತ ಸಿಂಗ್ ಚಾನಂಬಮ್ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಮತ್ತು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಕ್ಕಾಗಿ ತುಂಬಾ ಹೆಮ್ಮೆಯಾಗುತ್ತಿದೆ. ಅವರ ದೃಢಸಂಕಲ್ಪ ಮತ್ತು ಅತ್ಯುತ್ತಮ ಪ್ರದರ್ಶನವು ರಾಷ್ಟ್ರಕ್ಕೆ ಅಪಾರ ಸಂತೋಷವನ್ನು ತಂದಿದೆ. ಅವರು ಇನ್ನೂ ಹೆಚ್ಚಿನ ಎತ್ತರವನ್ನು ಏರುವುದನ್ನು ಮುಂದುವರಿಸಲಿ ಮತ್ತು ಅನೇಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು!’’
#CWG2026"
*****
(ಪ್ರಕಟಣೆ ಐ.ಡಿ.: 2289788)
ವಿಸಿಟರ್ ಕೌಂಟರ್ : 36
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam