ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ಅಡಿಯಲ್ಲಿ ಒಟಿಟಿ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಕಾನೂನುಬದ್ಧ ಹೊಣೆಗಾರಿಕೆಗಳನ್ನು ಸರ್ಕಾರ ಪುನರುಚ್ಚರಿಸಿದೆ
प्रविष्टि तिथि:
24 JUL 2026 4:19PM by PIB Bengaluru
ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ಅನ್ನು ಅಧಿಸೂಚಿಸಿದೆ. ಈ ನಿಯಮಗಳ ಭಾಗ-III ಆನ್‌ಲೈನ್ ಕಂಟೆಂಟ್ ಪ್ರಕಾಶಕರಿಗೆ ಮತ್ತು ಪ್ರಸಾರ ಮಾಡುವವರಿಗೆ (ಒಟಿಟಿ ವೇದಿಕೆಗಳು) ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿದ್ದು, ಇತರ ವಿಷಯಗಳ ಜೊತೆಗೆ ಪ್ರಸ್ತುತ ಜಾರಿಯಲ್ಲಿರುವ ಕಾನೂನಿನಿಂದ ನಿಷೇಧಿಸಲ್ಪಟ್ಟ ಯಾವುದೇ ವಿಷಯವನ್ನು ಪ್ರಸಾರ ಮಾಡದಂತೆ ಪ್ರಕಾಶಕರಿಗೆ/ ಪ್ರಸಾರ ಮಾಡುವವರಿಗೆ ಸೂಚಿಸುತ್ತದೆ.
ಮಧ್ಯವರ್ತಿ ವೇದಿಕೆಗಳಲ್ಲಿ ಬಳಕೆದಾರರು ರಚಿಸುವ ವಿಷಯಗಳಿಗೆ, ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ಭಾಗ-II ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಸೇರಿದಂತೆ ಇತರ ಮಧ್ಯವರ್ತಿಗಳ ಮೇಲೆ ನಿರ್ದಿಷ್ಟ ನಿರ್ದಿಷ್ಟವಾದ ಜಾಗರೂಕತೆಯ ಹೊಣೆಗಾರಿಕೆಗಳನ್ನು ವಿಧಿಸುತ್ತದೆ. ಕಾನೂನುಬಾಹಿರವಾಗಿರುವಂತಹ ಯಾವುದೇ ಮಾಹಿತಿಯನ್ನು ಪ್ರದರ್ಶಿಸದಂತೆ, ಅಪ್ಲೋಡ್ ಮಾಡದಂತೆ, ಹೋಸ್ಟ್ ಮಾಡದಂತೆ, ಸಂಗ್ರಹಿಸದಂತೆ, ರವಾನಿಸದಂತೆ ಅಥವಾ ಪ್ರಕಟಿಸದಂತೆ ಅವರು ಸ್ವತಃ ಮತ್ತು ತಮ್ಮ ಕಂಪ್ಯೂಟರ್ ಸಂಪನ್ಮೂಲಗಳ ಬಳಕೆದಾರರ ಮೂಲಕ ಸಮಂಜಸವಾದ ಪ್ರಯತ್ನಗಳನ್ನು ಮಾಡಬೇಕು.
ರಾಜ್ಯ ಸಭೆಯಲ್ಲಿ ಶ್ರೀ ರಾಜೀವ್ ಕುಮಾರ್ ಅವರು ಕೇಳಿದ ಚುಕ್ಕೆ ಹಾಕಿಲ್ಲದ ಪ್ರಶ್ನೆಗೆ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
*****
(रिलीज़ आईडी: 2288933)
आगंतुक पटल : 13