ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆಂಡಿ ಬರ್ನಹ್ಯಾಮ್ ಅವರನ್ನು ಅಭಿನಂದಿಸಿದ್ದಾರೆ

प्रविष्टि तिथि: 21 JUL 2026 8:09AM by PIB Bengaluru

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಆಂಡಿ ಬರ್ನ್‌ಹ್ಯಾಮ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಶ್ರೀ ಮೋದಿ ಅವರು, ಭಾರತ ಮತ್ತು ಯುಕೆ ಪರಸ್ಪರ ಸಹ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೊಂದಿದ್ದು, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ರಕ್ಷಣಾ ಮತ್ತು ಸಾಮಾಜಿಕ ಸಂಬಂಧಗಳೊಂದಿಗೆ ವ್ಯಾಪಕ ಸಹಯೋಗವನ್ನು ಹೊಂದಿರುವುದಾಗಿ ಹೇಳಿದರು. ಈ ತಿಂಗಳಲ್ಲಿ CETA ಜಾರಿಗೆ ಬರುತ್ತಿರುವುದರಿಂದ, ಉಭಯ ದೇಶಗಳ ನಡುವಿನ ಪಾಲುದಾರಿಕೆಯು ಮತ್ತಷ್ಟು ಹೆಚ್ಚು ಬಲಗೊಳ್ಳಲಿದೆ ಎಂದು ಪ್ರಧಾನಮಂತ್ರಿ ಅವರು ಸೂಚಿಸಿದ್ದಾರೆ.

ಭಾರತ-ಯುಕೆ ಸಮಗ್ರ ತಂತ್ರಜ್ಞಾನಿಕ ಸಹಭಾಗಿತ್ವವನ್ನು ಮತ್ತಷ್ಟು ಗಾಢಗೊಳಿಸಲು ಮತ್ತು ತಮ್ಮ ಸಾಮೂಹಿಕ ದೃಷ್ಟಿಕೋನ 2035 ನ್ನು ಮುನ್ನಡೆಸಲು ನಿಕಟವಾಗಿ ಕೆಲಸ ಮಾಡುವ ನಿರೀಕ್ಷೆ ಹೊಂದಿದ್ದಾರೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಅವರು Xನಲ್ಲಿ;

“ಯುನೈಟೆಡ್ ಕಿಂಗ್‌ಡಮ್‍ನ ಪ್ರಧಾನಮಂತ್ರಿ ಸ್ಥಾನವನ್ನು ಸ್ವೀಕರಿಸಿದ್ದಕ್ಕೆ ಶ್ರೀ ಆಂಡಿ ಬರ್ನಹ್ಯಾಮ್‌ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಭಾರತ ಮತ್ತು ಯುಕೆ ಸಾಮೂಹಿಕ ಪ್ರಜಾಪ್ರಭುತ್ವ ಮೌಲ್ಯಗಳಿಂದ ಬೆಸೆದುಕೊಂದಿದ್ದು, ವಾಣಿಜ್ಯ, ವ್ಯಾಪಾರ, ತಂತ್ರಜ್ಞಾನ, ರಕ್ಷಣಾ ಮತ್ತು ಜನತೆಯ ನಡುವೆ ಸಂಬಂಧಗಳಲ್ಲಿ ವ್ಯಾಪಕ ಸಹಕಾರವನ್ನು ಹೊಂದಿವೆ. ಈ ತಿಂಗಳು CETA (ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ) ಜಾರಿಯಾಗುತ್ತಿರುವುದರಿಂದ, ನಮ್ಮ ದ್ವಿಪಕ್ಷೀಯ ಒಕ್ಕೂಟ ಮತ್ತಷ್ಟು ಬಲಿಷ್ಠವಾಗಿ ವೃದ್ಧಿಯಾಗಲಿದೆ.

ಭಾರತ-ಯುಕೆ ಸಮಗ್ರ ತಂತ್ರಕರ್ತೃ ಸಹಭಾಗಿತ್ವವನ್ನು ಮತ್ತಷ್ಟು ಗಾಢಗೊಳಿಸಿ ನಮ್ಮ ಸಾಮೂಹಿಕ ದೃಷ್ಟಿಕೋನ 2035ನ್ನು ಮುನ್ನಡೆಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ನಿರೀಕ್ಷಿಸುತ್ತೇನೆ.

@andyburnham"

 

*****


(रिलीज़ आईडी: 2287003) आगंतुक पटल : 9
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Bengali-TR , Assamese , Punjabi , Gujarati , Odia , Tamil , Malayalam