ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಪಾನ್ ಓಪನ್ 2026 ಪ್ರಶಸ್ತಿ ಗೆದ್ದ ಪಿ.ವಿ. ಸಿಂಧು ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 19 JUL 2026 7:13PM by PIB Bengaluru

ಜಪಾನ್ ಓಪನ್ 2026 ಪ್ರಶಸ್ತಿಯನ್ನು ಗೆದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಈ ಐತಿಹಾಸಿಕ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಿ.ವಿ. ಸಿಂಧು ಅವರ ದೃಢ ಸಂಕಲ್ಪ ಮತ್ತು ಅಸಾಧಾರಣ ಕೌಶಲ್ಯಗಳು ಪಂದ್ಯಾವಳಿಯುದ್ದಕ್ಕೂ ಪೂರ್ಣಮಟ್ಟದಲ್ಲಿ ಪ್ರದರ್ಶನಗೊಂಡವು. ಅವರು ದೇಶಾದ್ಯಂತ ಅಸಂಖ್ಯಾತ ಯುವ ಕ್ರೀಡಾಪಟುಗಳನ್ನು ಆಡಲು ಮತ್ತು ಮಿಂಚಲು ಪ್ರೇರೇಪಿಸುತ್ತಾರೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಯವರು ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:

ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಐತಿಹಾಸಿಕ ಸಾಧನೆ!

ಜಪಾನ್ ಓಪನ್ 2026ರಲ್ಲಿ ವಿಜೇತರಾದ ಪಿ.ವಿ. ಸಿಂಧು ಅವರಿಗೆ ಅಭಿನಂದನೆಗಳು. ಅವರ ದೃಢ ಸಂಕಲ್ಪ ಮತ್ತು ಅಸಾಧಾರಣ ಕೌಶಲ್ಯಗಳು ಪಂದ್ಯಾವಳಿಯುದ್ದಕ್ಕೂ ಪೂರ್ಣಮಟ್ಟದಲ್ಲಿ ಪ್ರದರ್ಶನಗೊಂಡವು. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಅಂಶವು ಸಾಧನೆಯನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಇದು ದೇಶಾದ್ಯಂತದ ಅಸಂಖ್ಯಾತ ಯುವ ಕ್ರೀಡಾಪಟುಗಳಿಗೆ ಆಡಲು ಮತ್ತು ಮಿಂಚಲು ಸ್ಫೂರ್ತಿ ನೀಡುತ್ತದೆ.

@Pvsindhu1

 

*****


(ಪ್ರಕಟಣೆ ಐ.ಡಿ.: 2286477) ವಿಸಿಟರ್ ಕೌಂಟರ್ : 72