ಸಂವಹನ ಸಚಿವಾಲಯ
azadi ka amrit mahotsav

ಇನ್ನೋವೇಟ್‌ ಇಂಡಿಯಾ ಮೈಗೌ ಪ್ಲಾಟ್‌ಫಾರ್ಮ್‌ನಲ್ಲಿಮ್ಯಾಸ್ಕಾಟ್‌ ವಿನ್ಯಾಸ ಸ್ಪರ್ಧೆಯನ್ನು ಪ್ರಾರಂಭಿಸಿದ ಅಂಚೆ ಇಲಾಖೆ


ನಂಬಿಕೆ, ಸೇವೆ ಮತ್ತು ಡಿಜಿಟಲ್‌ ನಾವೀನ್ಯತೆಯ ಮೌಲ್ಯಗಳನ್ನು ಪ್ರತಿಬಿಂಬಿಸಲು ಭಾರತೀಯ ಅಂಚೆಯ ಅಧಿಕೃತ ಲಾಂಛನವನ್ನು ವಿನ್ಯಾಸಗೊಳಿಸಲು ನಾಗರಿಕರಿಗೆ ಆಹ್ವಾನ ; ಗೆಲ್ಲಬಹುದಾದ ಒಟ್ಟು ಬಹುಮಾನಮೊತ್ತ ಮೊತ್ತ 2 ಲಕ್ಷ  ರೂ.

प्रविष्टि तिथि: 18 JUL 2026 12:33PM by PIB Bengaluru

ಸಂವಹನ ಸಚಿವಾಲಯದ ಅಂಚೆ ಇಲಾಖೆಯು ಇನ್ನೋವೇಟ್‌ ಇಂಡಿಯಾ ಮೈಗೌ ಪ್ಲಾಟ್‌ಫಾರ್ಮ್‌ನಲ್ಲಿಇಂಡಿಯಾ ಪೋಸ್ಟ್‌ ಮ್ಯಾಸ್ಕಟ್‌ ವಿನ್ಯಾಸ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಇದು ಇಂಡಿಯಾ ಪೋಸ್ಟ್‌ನ ಅಧಿಕೃತ ಮ್ಯಾಸ್ಕಾಟ್‌ಅನ್ನು ವಿನ್ಯಾಸಗೊಳಿಸಲು ದೇಶಾದ್ಯಂತದ ನಾಗರಿಕರನ್ನು ಆಹ್ವಾನಿಸಿದೆ. ಈ ಉಪಕ್ರಮವು ಸಂಸ್ಥೆಯ ಪ್ರಮುಖ ಮೌಲ್ಯಗಳಾದ ನಂಬಿಕೆ, ವಿಶ್ವಾಸಾರ್ಹತೆ, ಒಳಗೊಳ್ಳುವಿಕೆ, ಸೇವೆ ಮತ್ತು ಡಿಜಿಟಲ್‌ ನಾವೀನ್ಯತೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ಬ್ರಾಂಡ್‌ ಅಂಬಾಸಿಡರ್‌ಅನ್ನು ರಚಿಸುವ ಗುರಿಯನ್ನು ಹೊಂದಿದೆ.

ಸ್ಪರ್ಧೆಯು ಎಲ್ಲಾಭಾರತೀಯ ನಾಗರಿಕರಿಗೆ ಮುಕ್ತವಾಗಿದೆ. ಭಾಗವಹಿಸುವವರು ಮೈಗೌ ಪ್ಲಾಟ್‌ಫಾರ್ಮ್‌ ಮೂಲಕ ಒಂದು ಮೂಲ ಮ್ಯಾಸ್ಕಾಟ್‌ ವಿನ್ಯಾಸ, ಸೂಕ್ತವಾದ ಮ್ಯಾಸ್ಕಾಟ್‌ ಹೆಸರು ಮತ್ತು ಸಂಕ್ಷಿಪ್ತ ಪರಿಕಲ್ಪನೆಯ ಟಿಪ್ಪಣಿಯನ್ನು ಸಲ್ಲಿಸಬೇಕಾಗುತ್ತದೆ. ಸ್ಪರ್ಧೆಯು 2026 ರ ಜುಲೈ 15 ರಿಂದ ಆಗಸ್ಟ್‌ 15 ರವರೆಗೆ ತೆರೆದಿರುತ್ತದೆ.

ಸೃಜನಶೀಲ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಇಲಾಖೆಯು ಅಗ್ರ ಮೂರು ಮ್ಯಾಸ್ಕಾಟ್‌ ವಿನ್ಯಾಸಗಳಿಗೆ 75,000 ರೂ., 50,000 ರೂ. ಮತ್ತು 25,000 ರೂ. ನಗದು ಬಹುಮಾನಗಳನ್ನು ಘೋಷಿಸಿದೆ. ಅಗ್ರ ಮೂರು ಮ್ಯಾಸ್ಕಾಟ್‌ ಹೆಸರುಗಳಿಗೆ 25,000 ರೂ.,15,000 ರೂ. ಮತ್ತು 10,000 ರೂ.ಪ್ರತ್ಯೇಕ ನಗದು ಬಹುಮಾನಗಳನ್ನು ಸಹ ನೀಡಲಾಗುವುದು. ಜತೆಗೆ ಎಲ್ಲಾವಿಜೇತರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ಮ್ಯಾಸ್ಕಾಟ್‌ ವಿನ್ಯಾಸ ಮತ್ತು ಮ್ಯಾಸ್ಕಾಟ್‌ ನಾಮಕರಣದ ಬಹುಮಾನಗಳು ಸ್ವತಂತ್ರ ಮತ್ತು ಪರಸ್ಪರ ಪ್ರತ್ಯೇಕವಾಗಿವೆ.

ಆಯ್ಕೆಯಾದ ಮ್ಯಾಸ್ಕಾಟ್‌ ಭಾರತೀಯ ಅಂಚೆಯ ಅಧಿಕೃತ ಬ್ರಾಂಡ್‌ ಅಂಬಾಸಿಡರ್‌ ಆಗಲಿದೆ ಮತ್ತು ಪ್ರಚಾರ ಅಭಿಯಾನಗಳು, ಅಂಚೆ ಚೀಟಿಗಳ ಉತ್ಪನ್ನಗಳು, ಸಾರ್ವಜನಿಕ ಜಾಗೃತಿ ಉಪಕ್ರಮಗಳು, ಪ್ರದರ್ಶನಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಇತರ ಅಧಿಕೃತ ಸಂವಹನಗಳಲ್ಲಿಕಾಣಿಸಿಕೊಳ್ಳುತ್ತದೆ.

ಭಾರತೀಯ ಅಂಚೆಯ ಭವಿಷ್ಯದ ದೃಶ್ಯ ಗುರುತನ್ನು ರೂಪಿಸಲು ದೇಶಾದ್ಯಂತದ ವಿದ್ಯಾರ್ಥಿಗಳು, ವಿನ್ಯಾಸಕರು, ಕಲಾವಿದರು ಮತ್ತು ಸೃಜನಶೀಲ ವೃತ್ತಿಪರರು ಭಾಗವಹಿಸಲು ಮತ್ತು ಕೊಡುಗೆ ನೀಡುವಂತೆ ಇಲಾಖೆ ಒತ್ತಾಯಿಸಿದೆ.

ಸ್ಪರ್ಧೆಯ ಮಾರ್ಗಸೂಚಿಗಳು, ನಿಯಮಗಳು ಮತ್ತು ಷರತ್ತುಗಳು ಸೇರಿದಂತೆ ಸಂಪೂರ್ಣ ವಿವರಗಳಿಗಾಗಿ ಮತ್ತು ನಮೂದುಗಳನ್ನು ಸಲ್ಲಿಸಲು, ಭಾಗವಹಿಸುವವರು ಭೇಟಿ ನೀಡಬಹುದು:
https://innovateindia.mygov.in/mascot-design-contest-for-india-post/

ಲಿಂಕ್‌ಗಾಗಿ 

QR ಕೋಡ್

ಸ್ಕ್ಯಾನ್ ಮಾಡಿ

 

*****


(रिलीज़ आईडी: 2286447) आगंतुक पटल : 8
इस विज्ञप्ति को इन भाषाओं में पढ़ें: Telugu , English , Malayalam , Urdu , Marathi , हिन्दी , Bengali , Bengali-TR , Gujarati , Tamil