|
ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರ ನ್ಯೂಜಿಲೆಂಡ್ ಅಧಿಕೃತ ಭೇಟಿಯ ಫಲಿತಾಂಶದ ಪಟ್ಟಿ
प्रविष्टि तिथि:
11 JUL 2026 8:03AM by PIB Bengaluru
ದಾಖಲೆಗಳು
|
ಕ್ರ.ಸಂ
|
ವಿಷಯ
|
ಸಂಕ್ಷಿಪ್ತ ವಿವರಣೆ
|
|
1
|
ಭಾರತದ ರಕ್ಷಣಾ ಸಚಿವಾಲಯ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಗಳ ನಡುವಿನ ಸಾಗರ ಸಹಕಾರದ ಒಪ್ಪಂದ
|
ಸಂವಾದ, ಸಮನ್ವಯ, ಮಾಹಿತಿ ವಿನಿಮಯ ಮತ್ತು ಜಂಟಿ ಚಟುವಟಿಕೆಗಳ ಮೂಲಕ ಇಂಡೋ-ಪೆಸಿಫಿಕ್‌ನಲ್ಲಿ ವರ್ಧಿತ ಕಡಲ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಸ್ಥಾಪಿಸುತ್ತದೆ.
|
|
2
|
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈಡ್ರೋಗ್ರಫಿ ಮತ್ತು ನಾಟಿಕಲ್ ಕಾರ್ಟೋಗ್ರಫಿ ವಿಷಯಗಳಲ್ಲಿ ಸಹಕಾರದ ಕುರಿತು ಜಾರಿ ವ್ಯವಸ್ಥೆ
|
ನ್ಯಾವಿಗೇಷನಲ್ ಚಾರ್ಟ್‌ಗಳ ಜಂಟಿ ಉತ್ಪಾದನೆ, ಹೈಡ್ರೋಗ್ರಾಫಿಕ್ ಡೇಟಾ ಹಂಚಿಕೆ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯ ಮೂಲಕ ಹೈಡ್ರೋಗ್ರಾಫಿಕ್ ಸಹಕಾರವನ್ನು ಬಲಪಡಿಸುತ್ತದೆ.
|
|
3
|
ಭಾರತೀಯ ನೌಕಾಪಡೆ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸುವ ಕುರಿತು ವ್ಯವಸ್ಥೆ
|
ಅನುಮೋದಿತ ಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳ ಸಮಯದಲ್ಲಿ ಭಾರತೀಯ ನೌಕಾಪಡೆ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಸುಗಮಗೊಳಿಸುತ್ತದೆ.
|
|
4
|
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಭಯೋತ್ಪಾದನೆ ನಿಗ್ರಹದ ಕುರಿತು ಜಂಟಿ ಕಾರ್ಯಕಾರಿ ಗುಂಪು ಸ್ಥಾಪನೆ ಮಾಡುವುದು
|
ಸಹಕಾರವನ್ನು ಬಲಪಡಿಸಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಮತ್ತು ಭಯೋತ್ಪಾದನೆ ನಿಗ್ರಹ ಪ್ರಯತ್ನಗಳನ್ನು ಸಂಘಟಿಸಲು ಭಯೋತ್ಪಾದನಾ ನಿಗ್ರಹದ ಕುರಿತು ಜಂಟಿ ಕಾರ್ಯಕಾರಿ ಗುಂಪನ್ನು ಸ್ಥಾಪಿಸುತ್ತದೆ
|
|
5
|
ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ನ್ಯೂಜಿಲೆಂಡ್‌ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ (NEMA) ನಡುವಿನ ಸಹಕಾರದ ಜ್ಞಾಪನಾ ಪತ್ರ
|
ಭೂಕಂಪನ ಸ್ಥಿತಿಸ್ಥಾಪಕತ್ವ, ಸುನಾಮಿ ಸಿದ್ಧತೆ, ಕರಾವಳಿ ಅಪಾಯ ತಗ್ಗಿಸುವಿಕೆ, ಜ್ಞಾನ ವಿನಿಮಯ, ನೀತಿ ಸಂವಾದ ಮತ್ತು ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಸಹಯೋಗವನ್ನು ಉತ್ತೇಜಿಸುತ್ತದೆ.
|
|
6
|
ಭಾರತದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ನ್ಯೂಜಿಲೆಂಡ್‌ನ ಪ್ರಾಥಮಿಕ ಕೈಗಾರಿಕೆಗಳ ಸಚಿವಾಲಯದ ನಡುವೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ಸಹಕಾರದ ಜ್ಞಾಪನಾ ಪತ್ರ
|
ತಾಂತ್ರಿಕ ಸಹಯೋಗ, ಜ್ಞಾನ ವಿನಿಮಯ ಮತ್ತು ಉತ್ತಮ ಅಭ್ಯಾಸಗಳ ಮೂಲಕ ಪಶುಸಂಗೋಪನೆ ಮತ್ತು ಹೈನುಗಾರಿಕೆಯಲ್ಲಿ ವರ್ಧಿತ ಸಹಕಾರಕ್ಕಾಗಿ ಚೌಕಟ್ಟನ್ನು ರಚಿಸುತ್ತದೆ.
|
|
7
|
ಭಾರತದ ಪ್ರವಾಸೋದ್ಯಮ ಸಚಿವಾಲಯ ಮತ್ತು ನ್ಯೂಜಿಲೆಂಡ್‌ನ ವ್ಯವಹಾರ, ನಾವೀನ್ಯತೆ ಮತ್ತು ಉದ್ಯೋಗ ಸಚಿವಾಲಯದ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವ್ಯವಸ್ಥೆಗಾಗಿ ಜ್ಞಾಪನಾ ಪತ್ರ
|
ಆರ್ಥಿಕ ಸಂಬಂಧಗಳನ್ನು ಬಲಪಡಿಸಲು, ಪ್ರವಾಸಿಗರ ಭೇಟಿಯನ್ನು ಹೆಚ್ಚಿಸಲು ಮತ್ತು ಪ್ರತಿ ದೇಶದ ಸಂಸ್ಕೃತಿಯ ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸಲು ಪ್ರವಾಸೋದ್ಯಮದಲ್ಲಿ ಸಹಕಾರವನ್ನು ಉತ್ತೇಜಿಸುತ್ತದೆ
|
|
8
|
ಕ್ರೀಡೆಗಾಗಿ ಭಾರತ-ನ್ಯೂಜಿಲೆಂಡ್ ಜಂಟಿ ಕ್ರಿಯಾ ಯೋಜನೆ
|
ಉನ್ನತ-ಕಾರ್ಯಕ್ಷಮತೆಯ ಕ್ರೀಡೆ, ಕ್ರೀಡಾ ವಿಜ್ಞಾನ, ಕ್ರೀಡಾ ಔಷಧ ಮತ್ತು ಕ್ರೀಡಾಪಟುಗಳ ಅಭಿವೃದ್ಧಿ ಸೇರಿದಂತೆ ಕ್ರೀಡೆಗಳಲ್ಲಿ ಸಹಯೋಗಕ್ಕಾಗಿ ಒಂದು ಚೌಕಟ್ಟನ್ನು ಒದಗಿಸುತ್ತದೆ.
|
|
9
|
ಗುಜರಾತ್‌ನ ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ (NMHC) ಅಭಿವೃದ್ಧಿಗಾಗಿ NMHC ಮತ್ತು ನ್ಯೂಜಿಲೆಂಡ್ ಸಾಗರ ವಸ್ತುಸಂಗ್ರಹಾಲಯದ ನಡುವೆ ಒಪ್ಪಂದ
|
ಸಹಯೋಗ ಮತ್ತು ಪರಸ್ಪರ ಒಪ್ಪಿಗೆಯ ಯೋಜನೆಗಳ ಮೂಲಕ ಲೋಥಾಲ್‌ನಲ್ಲಿ NMHC ಅನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಒದಗಿಸುತ್ತದೆ.
|
|
10
|
ಭಾರತದ ಸಂಸ್ಕೃತಿ ಸಚಿವಾಲಯ ಮತ್ತು ನ್ಯೂಜಿಲೆಂಡ್‌ನ ಸಂಸ್ಕೃತಿ ಮತ್ತು ಪರಂಪರೆ ಸಚಿವಾಲಯದ ನಡುವೆ ಸಾಂಸ್ಕೃತಿಕ ಸಹಕಾರಕ್ಕಾಗಿ ಒಪ್ಪಂದ
|
ಪರಸ್ಪರ ತಿಳಿವಳಿಕೆ ಮತ್ತು ಜನರ ನಡುವಿನ ಸಂಬಂಧಗಳನ್ನು ಬಲಪಡಿಸಲು ಕಲೆ, ಪರಂಪರೆ ಮತ್ತು ಸಾಂಸ್ಕೃತಿಕ ಉಪಕ್ರಮಗಳಲ್ಲಿ ವಿನಿಮಯದ ಮೂಲಕ ಸಾಂಸ್ಕೃತಿಕ ಸಹಕಾರವನ್ನು ಉತ್ತೇಜಿಸುತ್ತದೆ.
|
ಘೋಷಣೆಗಳು:
|
ಕ್ರ. ಸಂ.
|
ವಿಷಯ
|
ಸಂಕ್ಷಿಪ್ತ ವಿವರಣೆ
|
|
1
|
2030ಕ್ಕೆ ಭಾರತ-ನ್ಯೂಜಿಲೆಂಡ್ ಕಾರ್ಯತಂತ್ರದ ಪಾಲುದಾರಿಕೆ ಮತ್ತು ನೀಲನಕ್ಷೆ
|
ಭಾರತ ಮತ್ತು ನ್ಯೂಜಿಲೆಂಡ್ ತಮ್ಮ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಎತ್ತರಿಸಿವೆ. ವ್ಯಾಪಾರ, ರಕ್ಷಣೆ, ಸಾಗರ ಭದ್ರತೆ, ಪ್ರವಾಸೋದ್ಯಮ, ಸಂಸ್ಕೃತಿ, ಕ್ರೀಡೆ, ಕೃಷಿ ತಂತ್ರಜ್ಞಾನ, ಜನರ ನಡುವಿನ ಸಂಬಂಧಗಳು, ಜೊತೆಗೆ ಇಂಡೋ-ಪೆಸಿಫಿಕ್ ಆದ್ಯತೆಗಳು ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ಸಮನ್ವಯವನ್ನು ಬಲಪಡಿಸುತ್ತಿವೆ. 2030 ರ ನೀಲನಕ್ಷೆಯು ಮುಂದಿನ ನಾಲ್ಕು ವರ್ಷಗಳ ಕಾಲ ಸಂಬಂಧಿತ ಸಚಿವಾಲಯಗಳು ಮತ್ತು ಪಾಲುದಾರರಲ್ಲಿ ಭಾರತ-ನ್ಯೂಜಿಲೆಂಡ್ ಕಾರ್ಯತಂತ್ರದ ಪಾಲುದಾರಿಕೆಯ ರಚನಾತ್ಮಕ ಜಾರಿಗೆ ಮಾರ್ಗದರ್ಶನ ನೀಡಲು ಒಂದು ಕಾರ್ಯತಂತ್ರದ ನೀಲನಕ್ಷೆಯನ್ನು ಒದಗಿಸುತ್ತದೆ.
|
|
2
|
2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು NZ$7 ಬಿಲಿಯನ್ ಅಥವಾ ₹35,000 ಕೋಟಿಗೆ ದ್ವಿಗುಣಗೊಳಿಸುವುದು
|
ಮುಕ್ತ ವ್ಯಾಪಾರ ಒಪ್ಪಂದದ ಸಂದರ್ಭದಲ್ಲಿ, ಆರ್ಥಿಕ ಸಂಬಂಧಗಳನ್ನು ವೃದ್ಧಿಸಲು ಮತ್ತು ಮಾರುಕಟ್ಟೆ ಲಭ್ಯತೆಯನ್ನು ವಿಸ್ತರಿಸಲು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು NZ$7 ಬಿಲಿಯನ್ (₹35,000 ಕೋಟಿ) ಗೆ ದ್ವಿಗುಣಗೊಳಿಸುವ ಗುರಿಯನ್ನುಉಭಯ ದೇಶಗಳು ಹೊಂದಿವೆ.
|
|
3
|
ಸಾಗರ ಭದ್ರತಾ ಸಂವಾದವನ್ನು ಸ್ಥಾಪಿಸುವುದು
|
ಸಹಕಾರ, ಸಮನ್ವಯ ಮತ್ತು ಮಾಹಿತಿ ವಿನಿಮಯವನ್ನು ಬಲಪಡಿಸಲು ಭಾರತ ಮತ್ತು ನ್ಯೂಜಿಲೆಂಡ್ ಸಾಗರ ಭದ್ರತಾ ಸಂವಾದವನ್ನು ಸ್ಥಾಪಿಸಲು ಒಪ್ಪಿಕೊಂಡಿವೆ.
|
|
4
|
ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (IPOI) ಅಡಿಯಲ್ಲಿ ನ್ಯೂಜಿಲೆಂಡ್ ಸಾಗರ ಭದ್ರತೆಯನ್ನು ಆದ್ಯತೆಯ ಆಧಾರಸ್ತಂಭವಾಗಿ ನಾಮನಿರ್ದೇಶನ ಮಾಡಿದೆ
|
ಐಪಿಒಐನ ಏಳು ಸ್ತಂಭಗಳ ಅಡಿಯಲ್ಲಿ, ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ (ಐಯುಯು) ಮೀನುಗಾರಿಕೆಯನ್ನು ಎದುರಿಸುವತ್ತ ಗಮನಹರಿಸಿದ ನಿರ್ದಿಷ್ಟ ಸಹಕಾರ ಚಟುವಟಿಕೆಗಳನ್ನು ಕೈಗೊಳ್ಳಲು ನ್ಯೂಜಿಲೆಂಡ್ ಸಾಗರ ಭದ್ರತಾ ಸ್ತಂಭವನ್ನು ಸೇರಿಕೊಂಡಿದೆ
|
|
5
|
ನ್ಯೂಜಿಲೆಂಡ್ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಸೇರುತ್ತಿದೆ
|
ನ್ಯೂಜಿಲೆಂಡ್ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವುದರಿಂದ ಶುದ್ಧ ಇಂಧನ ಪರಿವರ್ತನೆಗಾಗಿ ಸುಸ್ಥಿರ ಜೈವಿಕ ಇಂಧನಗಳ ಅಭಿವೃದ್ಧಿ ಮತ್ತು ಅಳವಡಿಕೆಯನ್ನು ವೇಗಗೊಳಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುತ್ತದೆ
|
|
6
|
ನಾಗಾಲ್ಯಾಂಡ್ ಮತ್ತು ಉತ್ತರಾಖಂಡದಲ್ಲಿ ಕೀವಿಹಣ್ಣಿಗಾಗಿ 2 ಶ್ರೇಷ್ಠತಾ ಕೇಂದ್ರಗಳ ಕೀವಿಹಣ್ಣಿನ ಕ್ರಿಯಾ ಯೋಜನೆ ಮತ್ತು ಸ್ಥಾಪನೆ
|
ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಕೃಷಿ ಉತ್ಪಾದಕತಾ ಪಾಲುದಾರಿಕೆಯಡಿಯಲ್ಲಿ, ನಾಗಾಲ್ಯಾಂಡ್ ಮತ್ತು ಉತ್ತರಾಖಂಡದಲ್ಲಿ ಎರಡು ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಯೊಂದಿಗೆ ಕೀವಿಹಣ್ಣಿನ ಕ್ರಿಯಾ ಯೋಜನೆಯನ್ನು ಆರಂಭಿಸಲಾಗುತ್ತಿದೆ, ಇದು ಉತ್ಪಾದಕತೆಯನ್ನು ಹೆಚ್ಚಿಸಲು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಕೃಷಿ ನಾವೀನ್ಯತೆಯಲ್ಲಿ ಸಹಯೋಗದ ನೆರವಿನಿಂದ ಕೂಡಿರುತ್ತದೆ.
|
|
7
|
ಗೋವಾದ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR) ಮತ್ತು ನ್ಯೂಜಿಲ್ಯಾಂಡ್ ಕ್ಯಾಂಟರ್ಬರಿ ವಿಶ್ವವಿದ್ಯಾಲಯ ನಡುವೆ ಎಂಒಯು
|
ಅಂಟಾರ್ಕ್ಟಿಕ್ ಸಂಶೋಧನೆಯಲ್ಲಿ ಸಹಯೋಗಕ್ಕಾಗಿ ಚೌಕಟ್ಟನ್ನು ಸ್ಥಾಪಿಸುತ್ತದೆ. ಜಂಟಿ ಸಂಶೋಧನೆ, ಶೈಕ್ಷಣಿಕ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಇತರ ಪರಸ್ಪರ ಪ್ರಯೋಜನಕಾರಿ ವೈಜ್ಞಾನಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಇದು ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ
|
|
8
|
ಕುಂಡ್ಲಿಯ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆ (NIFTEM-K) ಮತ್ತು ನ್ಯೂಜಿಲೆಂಡ್‌ನ ಮ್ಯಾಸ್ಸಿ ವಿಶ್ವವಿದ್ಯಾಲಯದ ನಡುವೆ ಎಂಒಯು
|
. ಸಂಶೋಧನೆ, ಶೈಕ್ಷಣಿಕ ವಿನಿಮಯ, ವಿದ್ಯಾರ್ಥಿಗಳ ಸಂಚಾರ ಮತ್ತು ಇತರ ಪರಸ್ಪರ ಒಪ್ಪಿದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹಕಾರಕ್ಕಾಗಿ ಚೌಕಟ್ಟನ್ನು ಸ್ಥಾಪಿಸುತ್ತದೆ
|
*****
(रिलीज़ आईडी: 2283758)
|