ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನ್ಯೂಜಿಲೆಂಡ್‌ನಲ್ಲಿ ವ್ಯಾಣಿಜ್ಯ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

प्रविष्टि तिथि: 11 JUL 2026 8:16AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಜಿಲೆಂಡ್‌ನ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರೊಂದಿಗೆ ಇಂದು ಆಯ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒಗಳು) ಮತ್ತು ವಾಣಿಜ್ಯ ನಾಯಕರ ಗುಂಪಿನೊಂದಿಗೆ ಸಂವಾದ ನಡೆಸಿದರು.

ಭಾರತ ಮತ್ತು ನ್ಯೂಜಿಲೆಂಡ್ ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮಗಳಿಗೆ ಗೌರವ, ವೈವಿಧ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಾಮಾನ್ಯ ಬದ್ಧತೆಯ ಗುರಿಯನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿದರು, ಇದು ಮಹತ್ವಾಕಾಂಕ್ಷೆಯ ಮತ್ತು ಭವಿಷ್ಯದ ಆರ್ಥಿಕ ಪಾಲುದಾರಿಕೆಗೆ ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ. ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳಿಗೆ ಆಳ ಮತ್ತು ಸ್ಫೂರ್ತಿಯನ್ನು ತುಂಬುವುದು ಮತ್ತು ಮಾರುಕಟ್ಟೆ ಲಭ್ಯತೆ, ಹೂಡಿಕೆ, ಸೇವೆಗಳು, ತಂತ್ರಜ್ಞಾನ ಮತ್ತು ಪ್ರತಿಭೆಗಳ ಸಂಚಾರಕ್ಕೆ ಹೊಸ ಅವಕಾಶಗಳನ್ನು ತೆರೆಯುವ ಒಂದು ಮಹತ್ವಾಕಾಂಕ್ಷೆಯ ಹೆಗ್ಗುರುತಾಗಿದೆ ಎಂದು ಅವರು ವಿವರಿಸಿದರು.

ಭಾರತದ ಸುಸ್ಥಿರ ಉನ್ನತ ಬೆಳವಣಿಗೆ ಯುವ ಮತ್ತು ಕೌಶಲ್ಯಪೂರ್ಣ ದುಡಿಯುವ ಪಡೆ, ವಿಸ್ತರಿಸುತ್ತಿರುವ ಮಧ್ಯಮ ವರ್ಗ, ಡಿಜಿಟಲ್ ಕ್ರಾಂತಿ, ಮುಂದಿನ ಪೀಳಿಗೆಯ ಮೂಲಸೌಕರ್ಯ ಉತ್ತೇಜನ ಮತ್ತು ನಿರಂತರ ಆರ್ಥಿಕ ಸುಧಾರಣೆಗಳೊಂದಿಗೆ ಸೇರಿಕೊಂಡು ನ್ಯೂಜಿಲೆಂಡ್‌ನಲ್ಲಿನ ಕಂಪನಿಗಳಿಗೆ ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯತೆಗೆ ಗಮನಾರ್ಹ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಒತ್ತಿ ಹೇಳಿದರು. ರಾಜಕೀಯ ಸ್ಥಿರತೆ ಮತ್ತು ನಿರಂತರ ಬೆಳವಣಿಗೆಯ ಹಾದಿಯು ಭಾರತವನ್ನು ಜಾಗತಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುವ ಸ್ಥಾನದಲ್ಲಿ ಇರಿಸಿದೆ ಎಂದು ಅವರು ಉಲ್ಲೇಖಿಸಿದರು. ಮೂಲಸೌಕರ್ಯ ಅಭಿವೃದ್ಧಿ, ನಾಗರಿಕ ವಿಮಾನಯಾನ, ಲಾಜಿಸ್ಟಿಕ್ಸ್, ಶುದ್ಧ ಇಂಧನ, ಅರ್ಬನ್ ಮೊಬಿಲಿಟಿ, ನೀರು ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮತ್ತು ಡಿಜಿಟಲ್ ಆರ್ಥಿಕ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಲು ಅವರು ನ್ಯೂಜಿಲೆಂಡ್ ಹೂಡಿಕೆದಾರರು ಮತ್ತು ವ್ಯಾಪಾರ ಸಂಸ್ಥೆಗಳನ್ನು ಆಹ್ವಾನಿಸಿದರು. ಭಾರತದ ಸಕ್ರೀಯ ಸ್ಟಾರ್ಟ್-ಅಪ್ ಪೂರಕ ವ್ಯವಸ್ಥೆಯ ಬಗ್ಗೆ ಮಾತನಾಡಿದ ಅವರು, ನಾವೀನ್ಯತೆ, ಫಿನ್‌ಟೆಕ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಖಾಸಗಿ ವಲಯಗಳ ನಡುವೆ ಹೆಚ್ಚಿನ ಒಳಗೊಳ್ಳುವಿಕೆಗೆ ಕರೆ ನೀಡಿದರು. ಡೈರಿ ವಿಜ್ಞಾನ, ತೋಟಗಾರಿಕೆ ಮತ್ತು ಅರಣ್ಯದಲ್ಲಿ ನ್ಯೂಜಿಲೆಂಡ್‌ನ ಸಾಮರ್ಥ್ಯಗಳು ಮತ್ತು ಭಾರತದ ಗ್ರಾಹಕ ಮಾರುಕಟ್ಟೆ, ಆಹಾರ ಪಾರ್ಕ್ ಗಳು ಮತ್ತು ಕೃಷಿ-ತಂತ್ರಜ್ಞಾನ ಪ್ರತಿಭೆಗಳು ಜಾಗತಿಕ ಆಹಾರ ಮೌಲ್ಯ ಸರಪಳಿಗಳನ್ನು ರಚಿಸಲು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಅವರು ಉಲ್ಲೇಖಿಸಿದರು.

2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 7 ಬಿಲಿಯನ್ NZD (ಸುಮಾರು INR 35,000 ಕೋಟಿ) ಗೆ ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಲು ಸಹಾಯ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯವಹಾರಗಳನ್ನು ಪ್ರೋತ್ಸಾಹಿಸಿದರು. ಭಾರತ-ನ್ಯೂಜಿಲೆಂಡ್ ಆರ್ಥಿಕ ಪಾಲುದಾರಿಕೆಯು ಸಮಗ್ರ ಮತ್ತು ಸುಸ್ಥಿರ ವ್ಯಾಪಾರಕ್ಕೆ ಮಾದರಿಯಾಗಬಹುದು ಮತ್ತು ನಾವೀನ್ಯತೆ ಮತ್ತು ಸಮೃದ್ಧಿಗೆ ವೇದಿಕೆಯಾಗಬಹುದು ಎಂದು ಅವರು ಒತ್ತಿ ಹೇಳಿದರು.

 

*****


(रिलीज़ आईडी: 2283752) आगंतुक पटल : 14
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Bengali , Bengali-TR , Assamese , Manipuri , Gujarati , Tamil , Telugu , Malayalam