ಪ್ರಧಾನ ಮಂತ್ರಿಯವರ ಕಛೇರಿ
ಕ್ರೀಡಾ ಕಾರ್ಯಕ್ರಮಕ್ಕಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ
प्रविष्टि तिथि:
10 JUL 2026 8:21AM by PIB Bengaluru
ಭಾರತ-ಆಸ್ಟ್ರೇಲಿಯಾ ನಡುವಿನ ಕ್ರೀಡಾ ಸಂಬಂಧಗಳನ್ನು ಆಚರಿಸುವ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಮತ್ತು ವಿಕ್ಟೋರಿಯಾದ ಪ್ರೀಮಿಯರ್ ಗೌರವಾನ್ವಿತ ಜೆಸಿಂತಾ ಅಲನ್ ಅವರೊಂದಿಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದರು. ಶ್ರೀ ಸ್ಟೀವ್ ವಾ ಮತ್ತು ಶ್ರೀಮತಿ ಲಿಸಾ ಸ್ಥಾಲೇಕರ್ ಸೇರಿದಂತೆ ಹಲವು ಆಸ್ಟ್ರೇಲಿಯಾದ ಕ್ರೀಡಾ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಆಧಾರಸ್ತಂಭಗಳಾಗಿ ಕ್ರೀಡೆ, ಸಾಂಸ್ಕೃತಿಕ ವಿನಿಮಯ ಮತ್ತು ಜನರ ನಡುವಿನ ಸಂಬಂಧ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಈ ಭೇಟಿ ಬಲವಾಗಿ ಪ್ರತಿಪಾದಿಸಿತು.
ಈ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಪ್ರಧಾನಮಂತ್ರಿಗಳು ಜಂಟಿಯಾಗಿ ಭಾರತ-ಆಸ್ಟ್ರೇಲಿಯಾ ಕ್ರೀಡಾ ಸಹಯೋಗ ನೀಲನಕ್ಷೆಯನ್ನು ಬಿಡುಗಡೆ ಮಾಡಿದರು. ಇದು ಕ್ರೀಡಾ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಕ್ರೀಡಾ ಉದ್ಯಮ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸುತ್ತದೆ. ಅಲ್ಲದೆ, ಭಾರತ-ಆಸ್ಟ್ರೇಲಿಯಾ ಯುವ ಕ್ರೀಡಾ ಉತ್ಸವವನ್ನು ಆಯೋಜಿಸುವ ಗುರಿ ಹೊಂದಿದೆ. ಕ್ರೀಡಾ ವಲಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಹಯೋಗ ವೃದ್ಧಿಯಾಗುತ್ತಿರುವುದನ್ನು ಇಬ್ಬರು ನಾಯಕರು ಸ್ವಾಗತಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಜನರನ್ನು ಒಗ್ಗೂಡಿಸುವಲ್ಲಿ ಕ್ರೀಡೆಯ ವಿಶಿಷ್ಟ ಪಾತ್ರವನ್ನು ಪ್ರಮುಖವಾಗಿ ಉಲ್ಲೇಖಿಸಿದರು ಮತ್ತು ನೀಲನಕ್ಷೆಯು ಎರಡೂ ದೇಶಗಳು ತಮ್ಮ ಕ್ರೀಡಾ ಪಾಲುದಾರಿಕೆಯನ್ನು ವೈವಿಧ್ಯಗೊಳಿಸಲು ಅನುವು ಮಾಡಿಕೊಡುತ್ತದೆ ಎಂದರು. ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾವನ್ನು ಅವರು ಅಭಿನಂದಿಸಿದರು. ಭಾರತ ಮತ್ತು ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಮಹತ್ವದ ದಶಕವನ್ನು ಒಟ್ಟಿಗೆ ಪ್ರವೇಶಿಸುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉಲ್ಲೇಖಿಸಿದರು. ಭಾರತವು 2030ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಮತ್ತು ಆಸ್ಟ್ರೇಲಿಯಾ 2032ರಲ್ಲಿ ಬ್ರಿಸ್ಬೇನ್ ಒಲಿಂಪಿಕ್ಸ್ ಅನ್ನು ಆಯೋಜಿಸುತ್ತಿದೆ. ಈ ಬೆಳವಣಿಗೆಗಳು ಕ್ರೀಡೆ ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿ ನಿಕಟ ದ್ವಿಪಕ್ಷೀಯ ಸಹಕಾರಕ್ಕಾಗಿ ಸ್ಬಭಾವಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಭೇಟಿಯ ಸಮಯದಲ್ಲಿ ಉಭಯ ನಾಯಕರು ಕಬ್ಬಡಿ, ಆಸ್ಟ್ರೇಲಿಯನ್ ಫುಟ್‌ಬಾಲ್ ಮತ್ತು ಕ್ರಿಕೆಟ್ ಪ್ರದರ್ಶನ ಆಟಗಳಲ್ಲಿ ಭಾಗವಹಿಸುವ ಯುವ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು.
ಈ ಭೇಟಿಯು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಕ್ರಿಯ ಕ್ರೀಡಾ ಮತ್ತು ಜನರ ನಡುವಿನ ಸಂಪರ್ಕ ವೃದ್ಧಿಗೆ ಸಾಕ್ಷಿಯಾಯಿತು.
*****
(रिलीज़ आईडी: 2283223)
आगंतुक पटल : 8