ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಭೇಟಿಯ ಫಲಿತಾಂಶಗಳ ಪಟ್ಟಿ

प्रविष्टि तिथि: 09 JUL 2026 12:35PM by PIB Bengaluru

ಕ್ರ. ಸಂ.

ಶೀರ್ಷಿಕೆ

ಸಂಕ್ಷಿಪ್ತ ವಿವರಣೆ

1

ರಕ್ಷಣೆ ಮತ್ತು ಭದ್ರತಾ ಸಹಕಾರದ ಜಂಟಿ ಘೋಷಣೆ (ಜೆ ಡಿ ಡಿ ಎಸ್ಸಿ)

ಭದ್ರತೆಯ ಮೇಲಿನ ಅಸ್ತಿತ್ವದಲ್ಲಿರುವ ಜಂಟಿ ಘೋಷಣೆಯನ್ನು (2009) ನವೀಕರಿಸುತ್ತದೆ. ಇದು ಪಡೆಗಳ ಪರಸ್ಪರ ಕಾರ್ಯಾಚರಣೆ, ಸಾಮರ್ಥ್ಯ ನಿರ್ಮಾಣ, ಕಡಲ ವಲಯ, ರಕ್ಷಣಾ ಕೈಗಾರಿಕಾ ಸಹಯೋಗ, ಸೈಬರ್ ಭದ್ರತೆ ಮತ್ತು ತಂತ್ರಜ್ಞಾನ, ಭಯೋತ್ಪಾದನೆ ನಿಗ್ರಹ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಮತ್ತು UNCLOS, ಆಸಿಯಾನ್, ಪಿಐಎಫ್, ಐ ಒ ಆರ್‌ ಎ ಗಳಲ್ಲಿ ಏಕೀಕೃತ ವಿಧಾನವನ್ನು ಸಹಕಾರದ ಕ್ಷೇತ್ರಗಳಾಗಿ ಗುರುತಿಸುತ್ತದೆ.

2

ಕಡಲ ಭದ್ರತಾ ಸಹಯೋಗದ ಮಾರ್ಗಸೂಚಿ (ಎಂ ಎಸ್ಸಿ ಆರ್)

ಮಾಹಿತಿ ಹಂಚಿಕೆ, ಸಾಮರ್ಥ್ಯ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಸಮನ್ವಯವನ್ನು ಉತ್ತೇಜಿಸುವ ಮೂಲಕ ಕಡಲ ಭದ್ರತಾ ಸಹಕಾರವನ್ನು ಹೆಚ್ಚಿಸುತ್ತದೆ.

3

ಇಂಧನ ಭದ್ರತೆಯ ಕುರಿತು ಭಾರತ-ಆಸ್ಟ್ರೇಲಿಯಾ ಜಂಟಿ ಹೇಳಿಕೆ

ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಇಂಧನ ಭದ್ರತೆಗೆ ಉಭಯ ದೇಶಗಳ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

4

ಭಾರತ-ಆಸ್ಟ್ರೇಲಿಯಾ ನಾಗರಿಕ ಪರಮಾಣು ಒಪ್ಪಂದದ ಆಡಳಿತಾತ್ಮಕ ವ್ಯವಸ್ಥೆಯ ಅಂತಿಮಗೊಳಿಸುವಿಕೆ

2014 ರಲ್ಲಿ ಸಹಿ ಮಾಡಲಾದ ಭಾರತ-ಆಸ್ಟ್ರೇಲಿಯಾ ನಾಗರಿಕ ಪರಮಾಣು ಒಪ್ಪಂದವನ್ನು ಕಾರ್ಯಗತಗೊಳಿಸುತ್ತದೆ ಮತ್ತು ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆಯನ್ನು ಸಕ್ರಿಯಗೊಳಿಸುತ್ತದೆ.

5

ಸೈಬರ್, ನಿರ್ಣಾಯಕ ತಂತ್ರಜ್ಞಾನಗಳು, ಪೂರೈಕೆ ಸರಪಳಿಗಳಿಗಾಗಿ ಆಸ್ಟ್ರೇಲಿಯಾ-ಭಾರತ ಸಹಭಾಗಿತ್ವ (ಪಿಎಸಿಟಿಎಸ್)

ಸೈಬರ್ ಮತ್ತು ಸೈಬರ್ ಸಕ್ರಿಯಗೊಳಿಸಿದ ನಿರ್ಣಾಯಕ ತಂತ್ರಜ್ಞಾನ ಸಹಕಾರದ ಮೇಲಿನ 2020 ರ ಫ್ರೇಮ್‌ವರ್ಕ್ ವ್ಯವಸ್ಥೆಯನ್ನು ಆಧರಿಸಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಭದ್ರತೆಯನ್ನು ಬೆಂಬಲಿಸುವ, ನಿರ್ಣಾಯಕ ಪೂರೈಕೆ ಸರಪಳಿಗಳನ್ನು ಹೆಚ್ಚು ಸ್ಥಿತಿಸ್ಥಾಪಕಗೊಳಿಸಲು ಸಹಯೋಗವನ್ನು ಉತ್ತೇಜಿಸುವ ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಸೈಬರ್ ಭದ್ರತೆ ಮತ್ತು ಡಿಜಿಟಲ್ ಸ್ಥಿತಿಸ್ಥಾಪಕತೆಯಲ್ಲಿ ಸಹಯೋಗವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

6

ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮತ್ತು ಆಸ್ಟ್ರೇಲಿಯಾದ ಕಡಲ ಗಡಿ ಕಮಾಂಡ್ (ಎಂಬಿಸಿ) ನಡುವೆ ತಿಳುವಳಿಕಾ ಒಪ್ಪಂದ

ಐಸಿಜಿ ಮತ್ತು ಎಂಬಿಸಿ ನಡುವೆ ಕಡಲ ಕಾನೂನು ಜಾರಿ, ವಲಯ ಜಾಗೃತಿ ಮತ್ತು ಕಡಲ ಗಡಿ ರಕ್ಷಣೆಯ ಕ್ಷೇತ್ರದಲ್ಲಿ ಸಹಕಾರವನ್ನು ಸ್ಥಾಪಿಸುತ್ತದೆ.

7

2028-29 ಸಾಲಿಗೆ ಆಸ್ಟ್ರೇಲಿಯನ್ ಡಿಫೆನ್ಸ್ ಕಾಲೇಜ್ನಲ್ಲಿ ಭಾರತೀಯ ಮಿಲಿಟರಿ ಬೋಧಕರಿಗೆ ಆಸ್ಟ್ರೇಲಿಯಾದ ಆಹ್ವಾನ

2028-29 ರಲ್ಲಿ ಆಸ್ಟ್ರೇಲಿಯನ್ ಡಿಫೆನ್ಸ್ ಕಾಲೇಜ್‌ ನಲ್ಲಿ ಭಾರತೀಯ ಮಿಲಿಟರಿ ಬೋಧಕರ ನಿಯೋಜನೆಯನ್ನು ಪ್ರಕಟಿಸುತ್ತದೆ.

8

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (ಎಂ ಎಸ್ಡಿ ) ಮತ್ತು ಪಶ್ಚಿಮ ಆಸ್ಟ್ರೇಲಿಯಾ ಸರ್ಕಾರದ ತಾಂತ್ರಿಕ ಮತ್ತು ಉನ್ನತ ಶಿಕ್ಷಣ (ಟಿ ಎಫ್) ಸಂಸ್ಥೆ ನಡುವೆ ಗಣಿಗಾರಿಕೆ ಮತ್ತು ಗಣಿಗಾರಿಕೆ ಉಪಕರಣಗಳು, ತಂತ್ರಜ್ಞಾನ ಮತ್ತು ಸೇವೆಗಳಲ್ಲಿ (ಎಂಇಟಿಎಸ್) ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ತಿಳುವಳಿಕಾ ಒಪ್ಪಂದ

ಗಣಿಗಾರಿಕೆ ಕಾರ್ಯಾಚರಣೆಗಳು, ಗಣಿ ಸುರಕ್ಷತೆ, ಖನಿಜ ಸಂಸ್ಕರಣೆ, ಗಣಿ ಯಂತ್ರೋಪಕರಣಗಳು ಇತ್ಯಾದಿಗಳ ಉಪ-ವಲಯಗಳಲ್ಲಿ ಶೈಕ್ಷಣಿಕ ಉತ್ಕೃಷ್ಟತೆಯ ಕೇಂದ್ರವನ್ನು ಅಭಿವೃದ್ಧಿಪಡಿಸಲು ಭುವನೇಶ್ವರದ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ (ಎನ್‌ ಎಸ್‌ ಟಿ ಐ) ಗಣಿಗಾರಿಕೆ ಉಪಕರಣಗಳು, ತಂತ್ರಜ್ಞಾನ ಮತ್ತು ಸೇವೆಗಳ ಉತ್ಕೃಷ್ಟತೆಯ ಕೇಂದ್ರವನ್ನು ಸ್ಥಾಪಿಸುತ್ತದೆ. ಇದು ರಾಷ್ಟ್ರೀಯ ಉತ್ಕೃಷ್ಟತೆಯ ಕೇಂದ್ರ ಮತ್ತು ಪಶ್ಚಿಮ ಆಸ್ಟ್ರೇಲಿಯಾದ ಟಿ ಎ ಎಫ್‌ ಇ ನಡುವೆ ವಿದ್ಯಾರ್ಥಿಗಳು/ತರಬೇತಿದಾರರ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ.

9

ಭಾರತದಲ್ಲಿ (ಬೆಂಗಳೂರು) ತನ್ನ ಕ್ಯಾಂಪಸ್ ಅನ್ನು ಸ್ಥಾಪಿಸಲು ಫ್ಲಿಂಡರ್ಸ್ ವಿಶ್ವವಿದ್ಯಾಲಯಕ್ಕೆ ಉದ್ದೇಶ ಪತ್ರವನ್ನು ಹಸ್ತಾಂತರಿಸುವುದು

ಬೆಂಗಳೂರಿನಲ್ಲಿ ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಗೆ ಅನುವು ಮಾಡಿಕೊಡುತ್ತದೆ.

10

ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (ಎನ್ಸಿ ವಿ ಟಿ) ಮತ್ತು ಆಸ್ಟ್ರೇಲಿಯನ್ ಸ್ಕಿಲ್ಸ್ ಕ್ವಾಲಿಟಿ ಅಥಾರಿಟಿ ( ಎಸ್ಕ್ಯೂ ) ನಡುವೆ ಉದ್ದೇಶ ಪತ್ರಕ್ಕೆ ಸಹಿ ಹಾಕುವುದು

ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿಯಲ್ಲಿ (ಟಿವಿಇಟಿ) ಗುಣಮಟ್ಟದ ಭರವಸೆಯ ಪ್ರಾಮುಖ್ಯತೆಯನ್ನು ಅಂಗೀಕರಿಸುತ್ತದೆ. ಇದು ವೃತ್ತಿಪರ ತರಬೇತಿ ವ್ಯವಸ್ಥೆಗಳಲ್ಲಿ ನಿಯಂತ್ರಕ ಚೌಕಟ್ಟುಗಳನ್ನು ಬಲಪಡಿಸುತ್ತದೆ, ಆದ್ಯತೆಯ ವಲಯಗಳಲ್ಲಿ ಉದ್ಯೋಗ ಮಾನದಂಡಗಳ ಸಹ-ಅಭಿವೃದ್ಧಿ ಮತ್ತು ಜೋಡಣೆ, ಮತ್ತು ಅಧಿಕಾರಿಗಳ ಸಾಮರ್ಥ್ಯ ವೃದ್ಧಿ, ಸಿಬ್ಬಂದಿ ವಿನಿಮಯ, ಜಂಟಿ ಕಾರ್ಯಾಗಾರಗಳು/ಸಂಶೋಧನಾ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ.

11

ಭಾರತೀಯ ಕಲಾಕೃತಿಗಳ ವಾಪಸಾತಿ

3 ಭಾರತೀಯ ಪುರಾತನ ವಸ್ತುಗಳನ್ನು ಮರಳಿ ತರುತ್ತದೆ:

ಎ. ಶಿವನ ವಾಹನವಾದ ಪವಿತ್ರ ನಂದಿ [ವಿವರಣೆ: ತಮಿಳುನಾಡು, ಭಾರತ, 11 ರಿಂದ 12 ನೇ ಶತಮಾನದ ಗ್ರಾನೈಟ್]

ಬಿ. ಮಂಗಳಕರ ಕಾಳಿ [ಭದ್ರಕಾಳಿ] ಯೊಂದಿಗಿನ ತ್ರಿಶೂಲ [ವಿವರಣೆ: ತಮಿಳುನಾಡು, ಭಾರತ, 11 ನೇ ಶತಮಾನದ ಕಂಚು]

ಸಿ. ಆರು ತಲೆಯ ಸ್ಕಂದ (ಕಾರ್ತಿಕೇಯ) [ವಿವರಣೆ: ತಮಿಳುನಾಡು, ಭಾರತ, 12 ನೇ ಶತಮಾನದ ಬಸಾಲ್ಟ್]

12

ಮೇಲ್ಛಾವಣಿ ಸೌರ ತರಬೇತಿ ಅಕಾಡೆಮಿಯ ಕಾರ್ಯಾರಂಭ

ಹವಾಮಾನ ಬದಲಾವಣೆ, ಪರಿಸರ ಮತ್ತು ನೀರಿನ ಇಲಾಖೆ (DCEEW), ಭಾರತದ ಹಸಿರು ಉದ್ಯೋಗಗಳ ವಲಯ ಕೌಶಲ್ಯ ಮಂಡಳಿ (SSCGJ) ಮತ್ತು ರಿನ್ಯೂ (ReNEW) ಸಹಯೋಗದೊಂದಿಗೆ ಗಾಂಧಿನಗರದ ಪಂಡಿತ್ ದೀನ್ ದಯಾಳ್ ಇಂಧನ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ ಮತ್ತು ಕಾರ್ಯಾರಂಭ ಮಾಡಿದೆ. 2000 ಮಹಿಳೆಯರು ಮತ್ತು ಯುವಕರನ್ನು ಸೌರ ತಂತ್ರಜ್ಞರು/ಅನುಸ್ಥಾಪಕರು/ಸಹಾಯಕರಾಗಿ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಜನವರಿ 2024 ರಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರಿಂದ ಪ್ರಾರಂಭಿಸಲಾದ ಪಿಎಂ ಸೂರ್ಯ ಘರ್ ಯೋಜನೆಯನ್ನು ಮತ್ತು ಭಾರತದ ಹಸಿರು ಇಂಧನ ಪ್ರಯಾಣವನ್ನು ಬೆಂಬಲಿಸುತ್ತದೆ.

13

ಆಸ್ಟ್ರೇಲಿಯಾ-ಕೆನಡಾ-ಭಾರತ ತಂತ್ರಜ್ಞಾನ ಮತ್ತು ನಾವೀನ್ಯತೆ (ಎಸಿಐಟಿಐ) ಸಹಭಾಗಿತ್ವದ ಅಡಿಯಲ್ಲಿ ತಿಳುವಳಿಕಾ ಒಪ್ಪಂದ

ಆಸ್ಟ್ರೇಲಿಯಾ-ಕೆನಡಾ-ಭಾರತ ತಂತ್ರಜ್ಞಾನ ಮತ್ತು ನಾವೀನ್ಯತೆ (ಎಸಿಐಟಿಐ) ಸಹಭಾಗಿತ್ವದ ಅಡಿಯಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳಲ್ಲಿ ತ್ರಿಪಕ್ಷೀಯ ಸಹಕಾರವನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ.

14

ಜಿಯೋಸೈನ್ಸ್ ಆಸ್ಟ್ರೇಲಿಯಾ (ಜಿಎ) ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿ ಎಸ್) ನಡುವೆ ತಿಳುವಳಿಕಾ ಒಪ್ಪಂದ

2015 ರಲ್ಲಿ ಸಹಿ ಮಾಡಲಾದ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರದ ತಿಳುವಳಿಕಾ ಒಪ್ಪಂದವನ್ನು ಆಧರಿಸಿದೆ. ಸುಧಾರಿತ ಪರಿಶೋಧನಾ ವಿಧಾನಗಳ ಅಳವಡಿಕೆ, ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯಾಭಿವೃದ್ಧಿ, ಮತ್ತು ತಾಂತ್ರಿಕ ಉನ್ನತೀಕರಣ ಮತ್ತು ಜಿ ಎಸ್‌ ಐ ಮೂಲಸೌಕರ್ಯಗಳ ಆಧುನೀಕರಣವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ.

15

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ ಎಸ್ ಆರ್‌) ಮತ್ತು ಐಪಿ ಆಸ್ಟ್ರೇಲಿಯಾ ನಡುವೆ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಲೈಬ್ರರಿ ಪ್ರವೇಶ ಒಪ್ಪಂದ

ಐಪಿ ಆಸ್ಟ್ರೇಲಿಯಾಕ್ಕೆ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಲೈಬ್ರರಿ (ಟಿಕೆಡಿಎಲ್) ಡೇಟಾಬೇಸ್‌‌ ನ ಪ್ರವೇಶವನ್ನು ಒದಗಿಸುತ್ತದೆ.

16

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ ಎಸ್ ಆರ್‌) ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯದ ನಡುವೆ ತಿಳುವಳಿಕಾ ಒಪ್ಪಂದ

ಔಷಧದ ಗುರಿ ಗುರುತಿಸುವಿಕೆ, ತರಬೇತಿ ಕಾರ್ಯಕ್ರಮಗಳು ಮತ್ತು ಬೋಧಕರ ವಿನಿಮಯ ಕಾರ್ಯಕ್ರಮಗಳ ಕಡೆಗೆ ಸಹಯೋಗದ ಸಂಶೋಧನಾ ಕಾರ್ಯಕ್ರಮಗಳು ಸೇರಿದಂತೆ ಭವಿಷ್ಯದ ಸಹಯೋಗಕ್ಕಾಗಿ ಎರಡೂ ಸಂಸ್ಥೆಗಳ ನಡುವೆ ಸಂಪರ್ಕಗಳನ್ನು ಸ್ಥಾಪಿಸುತ್ತದೆ.

17

ಕೋಲ್ಕತ್ತಾದ ಸತ್ಯಜಿತ್ ರೇ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ (ಎಸ್ಆರ್ಎಫ್ಟಿ ) ಮತ್ತು ಆಸ್ಟ್ರೇಲಿಯಾದ ಸೌತ್ ಬ್ರಿಸ್ಬೇನ್ ಗ್ರಿಫಿತ್ ಫಿಲ್ಮ್ ಸ್ಕೂಲ್ ನಡುವೆ ತಿಳುವಳಿಕಾ ಒಪ್ಪಂದ

ಜಂಟಿ ಶೈಕ್ಷಣಿಕ ಚಟುವಟಿಕೆಗಳು ಮತ್ತು ಕಾರ್ಯಾಗಾರಗಳು, ಸಿನಿಮಾ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳ ಅಭಿವೃದ್ಧಿ, ಮತ್ತು ಅಲ್ಪಾವಧಿಯ ಕಾರ್ಯಾಗಾರಗಳು ಅಥವಾ ಬೇಸಿಗೆ ಶಾಲೆಗಳಲ್ಲಿ ಸಹಯೋಗ ಸೇರಿದಂತೆ ಸಹಕಾರಕ್ಕಾಗಿ ಹೊಂದಾಣಿಕೆಯ ಮತ್ತು ಮುಕ್ತವಾದ ಚೌಕಟ್ಟನ್ನು ಸ್ಥಾಪಿಸುತ್ತದೆ.

18

ವಿಕ್ಟೋರಿಯಾ ವಿಶ್ವವಿದ್ಯಾಲಯಕ್ಕೆ ಅನುಮೋದನೆ ಪತ್ರವನ್ನು ಹಸ್ತಾಂತರಿಸುವುದು

ಗುರುಗ್ರಾಮದಲ್ಲಿ ತನ್ನ ಕ್ಯಾಂಪಸ್ ಅನ್ನು ಸ್ಥಾಪಿಸಲು ಮತ್ತು ನಡೆಸಲು ವಿಕ್ಟೋರಿಯಾ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡುತ್ತದೆ.

 

 

*****


(रिलीज़ आईडी: 2282800) आगंतुक पटल : 27
इस विज्ञप्ति को इन भाषाओं में पढ़ें: Urdu , English , हिन्दी , Marathi , Manipuri , Bengali , Bengali-TR , Assamese , Punjabi , Gujarati , Tamil , Telugu , Malayalam