ಪ್ರಧಾನ ಮಂತ್ರಿಯವರ ಕಛೇರಿ
ವಿನಯ ಮತ್ತು ನಿಸ್ವಾರ್ಥ ಸೇವೆಯ ಸದ್ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
07 JUL 2026 10:01AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಜವಾದ ಸಮೃದ್ಧಿಯ ಸೌಂದರ್ಯವು ವಿನಯ ಮತ್ತು ನಿಸ್ವಾರ್ಥ ಸೇವೆಯಲ್ಲಿ ಅಡಗಿದೆ ಎಂದು ಹೇಳಿದ್ದಾರೆ. ಯಶಸ್ಸು ಸಮಾಜದ ಕಲ್ಯಾಣ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮನೋಭಾವದಿಂದ ಮಾರ್ಗದರ್ಶಿತವಾದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರು ಈ ಕುರಿತು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡು ಅದರ ಅರ್ಥವನ್ನು ವಿವರಿಸಿದ್ದಾರೆ-
“भवन्ति नम्रास्तरवः फलोद्गमैर्नवाम्बुभि-र्दूर-विलम्बिनो घनाः। अनुद्धताः सत्पुरुषाः समृद्धिभिः स्वभाव एवैष परोपकारिणाम्॥”
ಹಣ್ಣುಗಳಿಂದ ತುಂಬಿದ ಮರಗಳು ಹಾಗೂ ಮಳೆಯಿಂದ ಭಾರವಾದ ಮೋಡಗಳು ಭೂಮಿಯ ಕಡೆಗೆ ಬಾಗುವಂತೆ, ಪರೋಪಕಾರಿ ಮತ್ತು ಸಜ್ಜನರು ಕೂಡ ಸಂಪತ್ತು ಹಾಗೂ ಕೀರ್ತಿಯನ್ನು ಗಳಿಸಿದ ಬಳಿಕವೂ ವಿನಯಶೀಲರಾಗಿಯೇ ಉಳಿಯುತ್ತಾರೆ. ಅಹಂಕಾರಕ್ಕೆ ಅವಕಾಶ ನೀಡದೆ, ತಮ್ಮ ಜೀವನವನ್ನು ಸಮಾಜದ ಉನ್ನತಿ ಮತ್ತು ಜನಸೇವೆಗೆ ಸಮರ್ಪಿಸುತ್ತಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“समृद्धि की शोभा विनम्रता और परोपकार में निहित है। सफलता वही सार्थक है, जिसमें लोककल्याण की भावना सर्वोपरि हो।
भवन्ति नम्रास्तरवः फलोद्गमैर्नवाम्बुभि-र्दूर-विलम्बिनो घनाः।
अनुद्धताः सत्पुरुषाः समृद्धिभिः स्वभाव एवैष परोपकारिणाम्॥”
*****
(ಪ್ರಕಟಣೆ ಐ.ಡಿ.: 2282360)
ವಿಸಿಟರ್ ಕೌಂಟರ್ : 44
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam