ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಅಧಿಕ ಸಾಮರ್ಥ್ಯದ ತೂಕದ ಸಾಧನಗಳ ಪರಿಶೀಲನೆಗಾಗಿ ಕಾನೂನು ಮಾಪನಶಾಸ್ತ್ರ ನಿಯಮಗಳನ್ನು ತಿದ್ದುಪಡಿ ಮಾಡಿದ ಗ್ರಾಹಕ ವ್ಯವಹಾರಗಳ ಇಲಾಖೆ


ತಿದ್ದುಪಡಿ ಪಾಲನೆ ಹೊರೆಯನ್ನು ತಗ್ಗಿಸುತ್ತದೆ, ಪರಿಶೀಲನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯವಹಾರ ಸುಲಭಗೊಳಿಸುತ್ತದೆ

ವೈಜ್ಞಾನಿಕ ಪರಿಶೀಲನಾ ವಿಧಾನವು ನಿಖರತೆಯನ್ನು ಕಾಯ್ದುಕೊಳ್ಳುವಾಗ ಪ್ರಮಾಣಿತ ತೂಕದ ಅವಶ್ಯಕತೆ ತಗ್ಗಿಸುತ್ತದೆ

प्रविष्टि तिथि: 06 JUL 2026 3:54PM by PIB Bengaluru

ವ್ಯವಹಾರ ಸುಲಭಗೊಳಿಸುವ (ಒಇಡಿಬಿ) ಉಪಕ್ರಮದ ಮಹತ್ವದ ಭಾಗವಾಗಿ, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ವೈಜ್ಞಾನಿಕ, ಪುನರಾವರ್ತನೀಯತೆ ಆಧಾರಿತ ಪರಿಶೀಲನಾ ವಿಧಾನವನ್ನು ಪರಿಚಯಿಸುವ ಮೂಲಕ ಅಧಿಕ ಸಾಮರ್ಥ್ಯದ ತೂಕದ ಸಾಧನಗಳ ಪರಿಶೀಲನೆಗಾಗಿ ನಿರ್ದಿಷ್ಟ ತೂಕಗಳ ಅಗತ್ಯವನ್ನು ಗಣನೀಯವಾಗಿ ತಗ್ಗಿಸಲು ಕಾನೂನು ಮಾಪನಶಾಸ್ತ್ರ (ಸಾಮಾನ್ಯ) ನಿಯಮ 2011ಗೆ ತಿದ್ದುಪಡಿ ಮಾಡಿದೆ.

ಹಿಂದಿನ ನಿಬಂಧನೆಗಳ ಪ್ರಕಾರ,  ಒಂದು ಟನ್ ಮತ್ತು ಅದಕ್ಕಿಂತ ಹೆಚ್ಚಿನ ಗರಿಷ್ಠ ಸಾಮರ್ಥ್ಯವನ್ನು ಹೊಂದಿರುವ ತೂಕದ ಸಾಧನಗಳನ್ನು ಪರಿಶೀಲಿಸುವಾಗ ಕನಿಷ್ಠ ಒಂದು ಟನ್ ಅಥವಾ ಉಪಕರಣದ ಗರಿಷ್ಠ ಸಾಮರ್ಥ್ಯದ ಶೇ.50ರಷ್ಟು ನಿರ್ದಿಷ್ಟ ತೂಕ, ಯಾವುದು ಹೆಚ್ಚೋ ಅದನ್ನು ಸ್ಥಿರ ಲೋಡ್‌ಗಳೊಂದಿಗೆ ಬದಲಾಯಿಸುವ ಮೊದಲು ಬಳಸಬೇಕಾಗಿತ್ತು. ಈ ಅವಶ್ಯಕತೆಯು ಹೆಚ್ಚಾಗಿ ಕೈಗಾರಿಕೆಗಳು ಮತ್ತು ತೂಕ ಸೇತುವೆ ನಿರ್ವಾಹಕರಿಗೆ ಗಮನಾರ್ಹವಾದ ಲಾಜಿಸ್ಟಿಕಲ್ ಸವಾಲುಗಳು, ಸಾರಿಗೆ ವೆಚ್ಚಗಳು ಮತ್ತು ಕಾರ್ಯಾಚರಣೆಯ ತೊಂದರೆಗಳಿಗೆ ಕಾರಣವಾಗುತ್ತಿತ್ತು.

ಆದರೆ ಪರಿಷ್ಕೃತ ನಿಬಂಧನೆಗಳಡಿಯಲ್ಲಿ ಆ ಅವಶ್ಯಕತೆಯನ್ನುತೆಗೆದುಹಾಕಲಾಗಿದೆ. ಪುನರಾವರ್ತನೀಯ ಪರೀಕ್ಷೆಯ ಯಶಸ್ವಿ ನಡವಳಿಕೆಯ ಆಧಾರದ ಮೇಲೆ ಸ್ಥಿರ ಲೋಡ್‌ಗಳೊಂದಿಗೆ ಪರ್ಯಾಯ ಮಾಡುವ ಮೊದಲು ಅಗತ್ಯವಿರುವ ನಿರ್ದಿಷ್ಟ ತೂಕಗಳ ಕಡ್ಡಾಯ ಪ್ರಮಾಣವನ್ನು ಗರಿಷ್ಠ ಸಾಮರ್ಥ್ಯದ ಶೇ.50 ರಿಂದ ಗರಿಷ್ಠ ಸಾಮರ್ಥ್ಯದ ಐದನೇ ಒಂದು ಭಾಗಕ್ಕೆ (ಶೇಕಡ 20) ಮಾತ್ರ ಕಡಿಮೆ ಮಾಡಲಾಗಿದೆ. ಆದರೆ ಪರಿಶೀಲನೆ ನಿಖರತೆ ಮತ್ತು ವಿಶ್ವಾಸಾರ್ಹತೆಯ ನಿಗದಿತ ಮಾನದಂಡಗಳನ್ನು ಕಾಯ್ದುಕೊಳ್ಳಲಾಗಿದೆ.

ಸುಧಾರಣೆಗಳಿಂದಾಗುವ ಪ್ರಮುಖ ಲಾಭಗಳು

  • ಕೈಗಾರಿಕೆಗಳು, ಗೋದಾಮುಗಳು, ಲಾಜಿಸ್ಟಿಕ್ಸ್ ನಿರ್ವಾಹಕರು ಮತ್ತು ತೂಕದ ಸೇತುವೆ (ವೇ ಬಿಡ್ಜ್ ) ಮಾಲೀಕರಿಗೆ ನಿಯಮಗಳ ಪಾಲನೆ ಹೊರೆಯಲ್ಲಿ ಗಮನಾರ್ಹ ಕಡಿತ.
  • ಹೆಚ್ಚಿನ ಪ್ರಮಾಣದ ಪ್ರಮಾಣಿತ ತೂಕಗಳ ಚಲನೆಗೆ ಸಂಬಂಧಿಸಿದ ಕಡಿಮೆ ಸಾರಿಗೆ ಮತ್ತು ನಿರ್ವಹಣಾ ವೆಚ್ಚಗಳು.
  • ಹೆಚ್ಚಿನ ಸಾಮರ್ಥ್ಯದ ತೂಕದ ಉಪಕರಣಗಳ ವೇಗದ ಪರಿಶೀಲನೆ, ಕಾರ್ಯಾಚರಣೆಯ ನಿಷ್ಕ್ರಿಯ ಸಮಯವನ್ನು ಕಡಿಮೆ ಮಾಡುವುದು.
  • ನಿಖರತೆ ಅಥವಾ ಗ್ರಾಹಕರ ರಕ್ಷಣೆಗೆ ಧಕ್ಕೆಯಾಗದಂತೆ ಕಾನೂನು ಮಾಪನಶಾಸ್ತ್ರ ಪರಿಶೀಲನಾ ಚಟುವಟಿಕೆಗಳ ಸುಧಾರಿತ ದಕ್ಷತೆ.
  • ಸರಳೀಕೃತ, ವೈಜ್ಞಾನಿಕ ಆಧಾರಿತ ನಿಯಂತ್ರಣ ಅವಶ್ಯಕತೆಗಳ ಮೂಲಕ ವ್ಯವಹಾರವನ್ನು ಸುಲಭಗೊಳಿಸುವುದನ್ನು ಉತ್ತೇಜಿಸುವುದು.
  • ಸರ್ಕಾರಿ ಅಧಿಕಾರಿಗಳಿಂದ ಪರಿಶೀಲನಾ ಸಂಪನ್ಮೂಲಗಳ ಉತ್ತಮ ಬಳಕೆ

ತಿದ್ದುಪಡಿಗೆ ವೈಜ್ಞಾನಿಕ ಆಧಾರ

ಈ ಸುಧಾರಣೆಯು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಮಾಪನಶಾಸ್ತ್ರದ ತತ್ವಗಳನ್ನು ಆಧರಿಸಿದ್ದು, ಅದರಲ್ಲಿ ಪುನರಾವರ್ತನೀಯತೆ ಪರೀಕ್ಷೆಯು ತೂಕದ ಉಪಕರಣದ ನಿಖರತೆ ಮತ್ತು ಸ್ಥಿರತೆಯನ್ನು ಸ್ಥಾಪಿಸುತ್ತದೆ, ಇದರಿಂದಾಗಿ ಪ್ರಮಾಣಿತ ತೂಕಗಳ ಕಡಿಮೆ ಪ್ರಮಾಣದೊಂದಿಗೆ ವಿಶ್ವಾಸಾರ್ಹ ಪರಿಶೀಲನೆಯನ್ನು ಸಕ್ರಿಯಗೊಳಿಸುತ್ತದೆ.

ಸಾಕ್ಷ್ಯ ಆಧಾರಿತ ಸುಧಾರಣೆಗಳ ಮೂಲಕ ಕಾನೂನು ಮಾಪನಶಾಸ್ತ್ರ ಬಲವರ್ಧನೆ

ಈ ತಿದ್ದುಪಡಿಯು ಸುಗಮ ವ್ಯಾಪಾರಕ್ಕಾಗಿ ಗ್ರಾಹಕ ರಕ್ಷಣೆಯೊಂದಿಗೆ ಸಮತೋಲನಗೊಳಿಸುವ ಪುರಾವೆ ಆಧಾರಿತ ನಿಯಂತ್ರಕ ಸುಧಾರಣೆಗಳ ಮೂಲಕ ಕಾನೂನು ಮಾಪನಶಾಸ್ತ್ರ ಚೌಕಟ್ಟನ್ನು ಆಧುನೀಕರಿಸುವ ಇಲಾಖೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ನಿಯಮಗಳ ಪಾಲನೆ ಸರಳೀಕರಿಸಲು, ನಿಯಂತ್ರಕ ಹೊರೆಯನ್ನು ತಗ್ಗಿಸಲು, ಪರಿಶೀಲನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕಾನೂನು ಮಾಪನಶಾಸ್ತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ಇಲಾಖೆಯು ಹಲವು  ಸುಧಾರಣೆಗಳನ್ನು ಕೈಗೊಳ್ಳುತ್ತಿದೆ. ವಾಣಿಜ್ಯ ವಹಿವಾಟುಗಳಲ್ಲಿ ನಿಖರತೆ, ನ್ಯಾಯಸಮ್ಮತತೆ ಮತ್ತು ವಿಶ್ವಾಸವನ್ನು ಖಾತ್ರಿಪಡಿಸಿಕೊಳ್ಳುವ ಜೊತೆಗೆ ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಉದ್ಯಮ ಸ್ನೇಹಿ ನಿಯಂತ್ರಣ ವಾತಾವರಣವನ್ನು ಸೃಷ್ಟಿಸುವತ್ತ ಈ ಇತ್ತೀಚಿನ ತಿದ್ದುಪಡಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

 

*****


(रिलीज़ आईडी: 2281701) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Tamil