ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ದೆಹಲಿಯ ವಸಂತ್ ಕುಂಜ್ ನ ನೆಲ್ಸನ್ ಮಂಡೇಲಾ ಮಾರ್ಗವನ್ನು ದ್ವಾರಕಾ ಎಕ್ಸ್ ಪ್ರೆಸ್ ವೇಗೆ (ಎನ್ ಎಚ್  248 ಬಿಬಿ) ಸಂಪರ್ಕಿಸುವ, ಎನ್ ಎಚ್ (ಒ) ಯೋಜನೆಯಡಿ ಹೈಬ್ರಿಡ್ ಅನ್ಯೂಯಿಟಿ ಮಾದರಿಯಲ್ಲಿ (ಎಚ್ ಎ ಎಂ) ₹6,969.67 ಕೋಟಿ ವೆಚ್ಚದ, ಒಟ್ಟು 8.1 ಕಿ.ಮೀ ಉದ್ದದ ಎನ್ ಎಚ್-148ಎಇ ರಸ್ತೆಯ 6 ಪಥಗಳ ಸುರಂಗ ಮಾರ್ಗ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ

प्रविष्टि तिथि: 01 JUL 2026 3:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಎನ್ ಎಚ್ (ಒ) ಯೋಜನೆಯಡಿ ಹೈಬ್ರಿಡ್ ಅನ್ಯೂಯಿಟಿ ಮಾದರಿಯಲ್ಲಿ (ಎಚ್ ಎ ಎಂ) ದೆಹಲಿಯ ವಸಂತ್ ಕುಂಜ್ ನ ನೆಲ್ಸನ್ ಮಂಡೇಲಾ ಮಾರ್ಗವನ್ನು ದ್ವಾರಕಾ ಎಕ್ಸ್ ಪ್ರೆಸ್ ವೇಗೆ (ಎನ್ ಎಚ್  248 ಬಿಬಿ) ಸಂಪರ್ಕಿಸುವ ಎನ್ ಎಚ್-148ಎಇ  ರಸ್ತೆಯ 6 ಪಥಗಳ ಸುರಂಗ ಮಾರ್ಗದ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯ ಒಟ್ಟು ಉದ್ದ 8.1 ಕಿ.ಮೀ ಆಗಿದ್ದು, ಒಟ್ಟು ಬಂಡವಾಳ ವೆಚ್ಚ ₹6,969.67 ಕೋಟಿ ಆಗಿದೆ.  

ಈ ಯೋಜನೆಯು ಪಶ್ಚಿಮ ಮತ್ತು ದಕ್ಷಿಣ ದೆಹಲಿಯ ನಡುವೆ ವೇಗದ ಸಂಪರ್ಕವನ್ನು ಕಲ್ಪಿಸಲಿದ್ದು, ಯುಇಆರ್  2/ ದ್ವಾರಕಾ ಎಕ್ಸ್ ಪ್ರೆಸ್ ವೇಯನ್ನು ದಕ್ಷಿಣ ದೆಹಲಿಯ ವಸಂತ್ ಕುಂಜ್ ಗೆ ಸಂಪರ್ಕಿಸಲಿದೆ. ಇದು ಗುರುಗ್ರಾಮ, ದ್ವಾರಕಾ, ಐಜಿಐ ವಿಮಾನ ನಿಲ್ದಾಣ ಮತ್ತು ಪಶ್ಚಿಮ ದೆಹಲಿಯಿಂದ ದಕ್ಷಿಣ ದೆಹಲಿಯ ಕಡೆಗೆ ಸಂಚರಿಸುವ ವಾಹನಗಳಿಗೆ   ಮತ್ತಷ್ಟು ಪ್ರಯೋಜನವನ್ನು ನೀಡಲಿದೆ. ಭೂಗತ ಅವಳಿ ಕೊಳವೆ   ಸುರಂಗ ಮಾರ್ಗವು ಭೂಭಾಗದ ಮೇಲಿನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುತ್ತದೆ ಮತ್ತು ದಕ್ಷಿಣ ರಿಡ್ಜ್ ಅರಣ್ಯವನ್ನು (ಸುರಂಗದ 1.98 ಕಿ.ಮೀ ಭಾಗವು ಈ ರಿಡ್ಜ್ ನ ಕೆಳಗೆ ಹಾದುಹೋಗುತ್ತದೆ) ಸಂರಕ್ಷಿಸುತ್ತದೆ. ಎನ್ ಎಚ್ ಎ ಐ ಪ್ರಾಧಿಕಾರವು ಏಮ್ಸ್ ಮತ್ತು ಮಹಿಪಾಲ್ ಪುರ ನಡುವೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಸಹ ಪ್ರಸ್ತಾಪಿಸಿದೆ. ಈ ಕೊಂಡಿಯು ಸುರಂಗವನ್ನು ಬಾರಾಪುಲ್ಲಾ ಎಲಿವೇಟೆಡ್ ರಸ್ತೆಗೆ ಸಂಪರ್ಕಿಸುತ್ತದೆ, ಆ ಮೂಲಕ ಪಶ್ಚಿಮ ದೆಹಲಿ ಮತ್ತು ದಕ್ಷಿಣ ದೆಹಲಿಯನ್ನು ಪೂರ್ವ ದೆಹಲಿ, ಗಾಜಿಯಾಬಾದ್ ಮತ್ತು ನೋಯ್ಡಾ   ಜೊತೆಗೆ ಸಂಪರ್ಕಿಸುತ್ತದೆ.

ಪ್ರಸ್ತಾವಿತ ಸುರಂಗವು ರಂಗ್ ಪುರಿ (ದಕ್ಷಿಣ ದೆಹಲಿ) ರಿಡ್ಜ್ ಮೂಲಕ ಹಾದುಹೋಗಲಿದ್ದು, ಇದನ್ನು ಅವಳಿ-ಕೊಳವೆ ಸುರಂಗವಾಗಿ (ಟಿಬಿಎಂ ಯಂತ್ರದ ಮೂಲಕ ನಿರ್ಮಿಸಲು) ವಿನ್ಯಾಸಗೊಳಿಸಲಾಗಿದೆ. ಇದು ಶಿವಮೂರ್ತಿ ಇಂಟರ್ ಚೇಂಜ್ ನಿಂದ ಪ್ರಾರಂಭವಾಗಿ ನೆಲ್ಸನ್ ಮಂಡೇಲಾ ಮಾರ್ಗ ಮತ್ತು ಮಹಿಪಾಲ್ ಪುರ ಛತ್ತರ್ ಪುರ ರಸ್ತೆಯ ಜಂಕ್ಷನ್ ಗಿಂತ ಮುಂಚಿತವಾಗಿ  ಕೊನೆಗೊಳ್ಳುತ್ತದೆ.

ಈ ಜಂಕ್ಷನ್ ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು, ನೆಲ್ಸನ್ ಮಂಡೇಲಾ ಮಾರ್ಗದ ಉದ್ದಕ್ಕೂ 1.8 ಕಿ.ಮೀ ಉದ್ದದ ಎಲಿವೇಟೆಡ್ ರಸ್ತೆಯನ್ನು ಸಹ ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಇರುವ ಫ್ಲೈಓವರ್ ಜೊತೆಗೆ ಛತ್ತರ್ ಪುರದಿಂದ ಮಹಿಪಾಲ್ ಪುರದ ಕಡೆಗೆ ಹೆಚ್ಚುವರಿ ಫ್ಲೈಓವರ್ ಅನ್ನು ಸಹ ಪ್ರಸ್ತಾಪಿಸಲಾಗಿದೆ. ಛತ್ತರ್ ಪುರದ ಕಡೆಗೆ ಬಲ ತಿರುವು ಪಡೆಯುವ ವಾಹನಗಳ ಸುಲಭ ಸಂಚಾರಕ್ಕಾಗಿ ಎಲಿವೇಟೆಡ್ ಯು-ಟರ್ನ್  ಅನ್ನು ನಿರ್ಮಿಸಲು ಸಹ ಪ್ರಸ್ತಾಪಿಸಲಾಗಿದೆ.

ಮುಖ್ಯ ರಸ್ತೆಯ (ಕ್ಯಾರೇಜ್ ವೇ) ಉದ್ದ 6.3 ಕಿ.ಮೀ ಆಗಿದೆ. ಪ್ರಸ್ತಾವಿತ ಫ್ಲೈಓವರ್ ಮತ್ತು ಮಹಿಪಾಲ್ಪುರ ಛತ್ತರ್ಪುರ ರಸ್ತೆಯ ಎಲಿವೇಟೆಡ್ ಯು-ಟರ್ನ್ ಅನ್ನು ಒಳಗೊಂಡಂತೆ, ಯೋಜನೆಯ ಒಟ್ಟು ಉದ್ದವು 8.100 ಕಿ.ಮೀ ಆಗಿರುತ್ತದೆ. ಇದರಲ್ಲಿ 3.140 ಕಿ.ಮೀ ಸುರಂಗ, 0.980 ಕಿ.ಮೀ ಸುರಂಗ ತಲುಪುವ ರಾಂಪ್  , 0.554 ಕಿ.ಮೀ ಆರ್ಇ ವಾಲ್   ಸಹಿತ ತಲುಪುವ ರಸ್ತೆ, 2.556 ಕಿ.ಮೀ ಎಲಿವೇಟೆಡ್ ಭಾಗ ಮತ್ತು 0.870 ಕಿ.ಮೀ ಅಟ್-ಗ್ರೇಡ್ ರಸ್ತೆ ಸೇರಿದೆ.

ರಾಷ್ಟ್ರೀಯ ಹೆದ್ದಾರಿಯ ಪ್ರತಿ ಲೇನ್-ಕಿಲೋಮೀಟರ್ ಅಭಿವೃದ್ಧಿಯು ದಿನಕ್ಕೆ ಸರಾಸರಿ 264 ಮಾನವ ದಿನಗಳ ನೇರ ಉದ್ಯೋಗವನ್ನು ಮತ್ತು ದಿನಕ್ಕೆ ಸರಾಸರಿ 55 ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಈ ಯೋಜನೆಯು ಸುಮಾರು 7.54 ಲಕ್ಷ ಮಾನವ ದಿನಗಳ ನೇರ ಉದ್ಯೋಗವನ್ನು ಮತ್ತು 9.80 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸಲಿದೆ. ಪ್ರಸ್ತಾವಿತ ಹೈ-ಸ್ಪೀಡ್ ಕಾರಿಡಾರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿನ ಹೆಚ್ಚಳದಿಂದಾಗಿ ಈ ಯೋಜನೆಯು ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸಹ  ಸೃಷ್ಟಿಸಲಿದೆ.

ಶಿವಮೂರ್ತಿ ಇಂಟರ್‌ ಚೇಂಜ್/ದ್ವಾರಕಾ ಎಕ್ಷ್‌ ಪ್ರೆಸ್‌ ವೇ ಮತ್ತು ನೆಲ್ಸನ್ ಮಂಡೇಲಾ ಮಾರ್ಗ/ವಸಂತ್ ಕುಂಜ್ ನಡುವಿನ ಪ್ರಸ್ತಾವಿತ ಸುರಂಗ ಮಾರ್ಗದ ಜೋಡಣೆ ನಕ್ಷೆ

 

*****


(रिलीज़ आईडी: 2279843) आगंतुक पटल : 21
इस विज्ञप्ति को इन भाषाओं में पढ़ें: Bengali , Bengali-TR , English , Urdu , हिन्दी , Marathi , Manipuri , Assamese , Punjabi , Gujarati , Odia , Tamil , Telugu , Malayalam