ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀಮತಿ ವಿಜಯ ಮೆಹ್ತಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 01 JUL 2026 11:41AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಮತಿ ವಿಜಯ ಮೆಹ್ತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀಮತಿ ವಿಜಯ ಮೆಹ್ತಾ ಅವರು ಆಧುನಿಕ ಮರಾಠಿ ರಂಗಭೂಮಿಯ ಪ್ರವರ್ತಕರಾಗಿದ್ದರು. ಅವರು ಸೃಜನಶೀಲತೆ ಮತ್ತು ಕಲಾತ್ಮಕ ಶ್ರೇಷ್ಠತೆಗೆ ಹೆಸರುವಾಸಿಯಾಗಿದ್ದರು. ಅವರ ಕಾರ್ಯವೈಖರಿಯು ಅವರ ಸಮಕಾಲೀನ ನಟರು, ನಿರ್ದೇಶಕರು ಮತ್ತು ರಂಗಭೂಮಿ ಕೃಷಿಕರಿಗೆ ಸ್ಫೂರ್ತಿ ನೀಡಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು Xನಲ್ಲಿ ಪೋಸ್ಟ್ ಮಾಡಿ:

ಶ್ರೀಮತಿ ವಿಜಯ ಮೆಹ್ತಾ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ಸಂಸ್ಕೃತಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅವರು ಯಾವಾಗಲೂ ಅತ್ಯುನ್ನತ ವ್ಯಕ್ತಿಯಾಗಿ ಸ್ಮರಣೀಯರು.

ಆಧುನಿಕ ಮರಾಠಿ ರಂಗಭೂಮಿಯ ಪ್ರವರ್ತಕರಾಗಿದ್ದ ಅವರು ತಮ್ಮ ಸೃಜನಶೀಲತೆ ಮತ್ತು ಕಲಾತ್ಮಕ ಶ್ರೇಷ್ಠತೆಗೆ ಪ್ರಸಿದ್ದರಾಗಿದ್ದರು. ಅವರ ಕಾರ್ಯವೈಖರಿಯು ಅವರ ಪೀಳಿಗೆಯ ನಟರು, ನಿರ್ದೇಶಕರು ಮತ್ತು ರಂಗಭೂಮಿ ಪ್ರೇಮಿಗಳಿಗೆ ಸ್ಫೂರ್ತಿ ನೀಡಿದೆ.

ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಅಭಿಮಾನಿಗಳು ಮತ್ತು ಇಡೀ ಕಲಾ ಲೋಕಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು, ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.


विजया मेहता जी यांच्या निधनाने अत्यंत दुःख झाले आहे. सांस्कृतिक आणि चित्रपट क्षेत्रातील एक उत्तुंग व्यक्तिमत्त्व म्हणून त्या सदैव स्मरणात राहतील.

​आधुनिक मराठी रंगभूमीच्या त्या प्रणेत्या होत्या, सर्जनशीलता आणि कलात्मक उत्कृष्टता यांच्याप्रती असलेल्या निष्ठेसाठी त्या ओळखल्या जात होत्या. त्यांच्या कार्याने अभिनेते, दिग्दर्शक आणि रंगभूमीप्रेमींच्या अनेक पिढ्यांना प्रेरित केले.

​या दुःखद प्रसंगी त्यांच्या कुटुंबीयांप्रती, चाहत्यांप्रती आणि संपूर्ण कलाक्षेत्राप्रती माझ्या मनःपूर्वक संवेदना व्यक्त करतो. ओम शांती.

 

*****

 


(रिलीज़ आईडी: 2279716) आगंतुक पटल : 19
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam