ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ವಿಬಿ-ಜಿ ರಾಮ್ ಜಿ ಕಾಯ್ದೆಯು ಜುಲೈ 1, 2026 ರಿಂದ ಜಾರಿಗೆ; "ಯಾವುದೇ ಅರ್ಹ ಗ್ರಾಮೀಣ ಕಾರ್ಮಿಕರು ಒಂದು ದಿನವೂ ಕೆಲಸವಿಲ್ಲದೆ ಉಳಿಯಬಾರದು": ಶ್ರೀ ಶಿವರಾಜ್ ಸಿಂಗ್ ಚೌಹಾಣ್


ಗ್ರಾಮೀಣ ಜೀವನೋಪಾಯವನ್ನು ಬಲಪಡಿಸಲು 125 ದಿನಗಳ ಖಾತರಿ ವೇತನ ಉದ್ಯೋಗ: ಶಿವರಾಜ್ ಸಿಂಗ್ ಚೌಹಾಣ್

ದೇಶಾದ್ಯಂತ ತಡೆರಹಿತ ಅನುಷ್ಠಾನಕ್ಕಾಗಿ ಸರ್ಕಾರದಿಂದ ಎಲ್ಲಾ ಸಿದ್ಧತೆಗಳು ಪೂರ್ಣ

ವಿಬಿ-ಜಿ ರಾಮ್ ಜಿ ಕಾಯ್ದೆಯ ದೇಶಾದ್ಯಂತ ತಡೆರಹಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹95,692.31 ಕೋಟಿ ಮಧ್ಯಂತರ ಹಂಚಿಕೆ

प्रविष्टि तिथि: 30 JUN 2026 5:45PM by PIB Bengaluru

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) - ವಿಬಿ-ಜಿ ರಾಮ್ ಜಿ ಕಾಯ್ದೆ, 2025 ಜುಲೈ 1, 2026 ರಿಂದ ಗ್ರಾಮೀಣ ಭಾರತದಾದ್ಯಂತ ಜಾರಿಗೆ ಬರಲಿದ್ದು, ಇದು ಗ್ರಾಮೀಣ ಉದ್ಯೋಗ, ಜೀವನೋಪಾಯದ ಭದ್ರತೆ ಮತ್ತು ಸುಸ್ಥಿರ ಗ್ರಾಮ ಅಭಿವೃದ್ಧಿಗಾಗಿ ಬಲವರ್ಧಿತ ಚೌಕಟ್ಟನ್ನು ಸೃಷ್ಟಿಸುತ್ತದೆ. ಈ ಕಾಯ್ದೆಯು ಪ್ರತಿಯೊಂದು ಅರ್ಹ ಗ್ರಾಮೀಣ ಕುಟುಂಬಕ್ಕೆ ಶಾಸನಬದ್ಧ ವೇತನ ಉದ್ಯೋಗದ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುತ್ತದೆ ಮತ್ತು ವಿಕಸಿತ ಭಾರತ @2047ರ ದೃಷ್ಟಿಕೋನವನ್ನು ವೇಗಗೊಳಿಸುವ ಜೊತೆಗೆ ದೀರ್ಘಕಾಲಿಕ ಗ್ರಾಮೀಣ ಆಸ್ತಿಗಳ ಸೃಷ್ಟಿಗೆ ಶ್ರಮಿಸುತ್ತದೆ.

ದೇಶಾದ್ಯಂತ ಕಾಯ್ದೆ ಜಾರಿಗೆ ಬರುವ ಮುನ್ನಾದಿನದಂದು ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಯಾವುದೇ ಅರ್ಹ ಗ್ರಾಮೀಣ ಕಾರ್ಮಿಕರು ಒಂದು ದಿನವೂ ಕೆಲಸವಿಲ್ಲದೆ ಉಳಿಯಬಾರದು ಎಂದು ಹೇಳಿದರು. ಹೊಸ ಚೌಕಟ್ಟಿಗೆ ಸುಗಮವಾಗಿ ಬದಲಾಗುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಕಟ ಸಮನ್ವಯ ಸಾಧಿಸಿ, ಎಲ್ಲಾ ಆಡಳಿತಾತ್ಮಕ, ಆರ್ಥಿಕ ಮತ್ತು ತಾಂತ್ರಿಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಅವರು ತಿಳಿಸಿದರು.

"ಯಾವುದೇ ಅರ್ಹ ಗ್ರಾಮೀಣ ಕಾರ್ಮಿಕರು ಒಂದು ದಿನವೂ ಕೆಲಸವಿಲ್ಲದೆ ಉಳಿಯದಂತೆ ನೋಡುವುದು ನಮ್ಮ ಆದ್ಯತೆಯಾಗಿದೆ. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಿ ವಿಬಿ-ಜಿ ರಾಮ್ ಜಿ ಕಾಯ್ದೆಯ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಸಾಕಷ್ಟು ಹಣಕಾಸಿನ ಸಂಪನ್ಮೂಲಗಳನ್ನು ಒದಗಿಸಲಾಗಿದೆ, ಅನುಷ್ಠಾನ ವ್ಯವಸ್ಥೆಗಳು ಸಂಪೂರ್ಣವಾಗಿ ಸಜ್ಜಾಗಿವೆ ಮತ್ತು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿವೆ. 125 ದಿನಗಳ ಹೆಚ್ಚುವರಿ ಖಾತರಿ ವೇತನ ಉದ್ಯೋಗವು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುತ್ತದೆ, ದೀರ್ಘಕಾಲಿಕ ಸಮುದಾಯ ಆಸ್ತಿಗಳನ್ನು ಸೃಷ್ಟಿಸುತ್ತದೆ ಮತ್ತು ವಿಕಸಿತ ಭಾರತದ ದೃಷ್ಟಿಕೋನವನ್ನು ವೇಗಗೊಳಿಸುತ್ತದೆ" ಎಂದು ಶ್ರೀ ಚೌಹಾಣ್ ಹೇಳಿದರು.

ದೇಶಾದ್ಯಂತದ ಅನುಷ್ಠಾನವನ್ನು ಸುಲಭಗೊಳಿಸಲು, ಅನುಷ್ಠಾನದ ಮೊದಲ ದಿನದಿಂದಲೇ ನಿರಂತರ ಕೆಲಸ, ಸಕಾಲಿಕ ವೇತನ ಪಾವತಿ ಮತ್ತು ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹95,692.31 ಕೋಟಿಗಳ ಮಧ್ಯಂತರ ಹಣವನ್ನು ಹಂಚಿಕೆ ಮಾಡಿದೆ. ಹೊಸ ಚೌಕಟ್ಟನ್ನು ಜಾರಿಗೊಳಿಸುವಲ್ಲಿ ಯಾವುದೇ ರಾಜ್ಯವು ಯಾವುದೇ ರೀತಿಯ ಅಡೆತಡೆಗಳನ್ನು ಎದುರಿಸಬಾರದು ಎಂಬ ಸರ್ಕಾರದ ಬದ್ಧತೆಯನ್ನು ಹಣ ಹಂಚಿಕೆಯು ಪ್ರತಿಬಿಂಬಿಸುತ್ತದೆ.

ಹೊಸ ಚೌಕಟ್ಟಿಗೆ ಸುಗಮವಾಗಿ ಬದಲಾಗುವುದನ್ನು ಸರ್ಕಾರವು ಖಚಿತಪಡಿಸಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿವೆ, ಹಾಗೆಯೇ ಪ್ರಸ್ತುತ ಚಾಲ್ತಿಯಲ್ಲಿರುವ ಇ-ಕೆವೈಸಿ ಪರಿಶೀಲನೆ ಮುಗಿದಿರುವ ಜಾಬ್ ಕಾರ್ಡ್‌ ಗಳು ಹೊಸ ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್‌ ಗಳನ್ನು ನೀಡುವವರೆಗೆ ಮಾನ್ಯವಾಗಿರುತ್ತವೆ; ಇದು ಉದ್ಯೋಗದ ನಿರಂತರ ಲಭ್ಯತೆ ಮತ್ತು ಸಕಾಲಿಕ ವೇತನ ಪಾವತಿಯನ್ನು ಖಚಿತಪಡಿಸುತ್ತದೆ.

ಕಾಯ್ದೆಯು ಗ್ರಾಮೀಣ ಪರಿವರ್ತನೆಯ ಕೇಂದ್ರಬಿಂದುವಾಗಿ ಗ್ರಾಮ ಪಂಚಾಯತ್‌ ಗಳನ್ನು ಇರಿಸುತ್ತದೆ. ಇದು ದೀರ್ಘಕಾಲಿಕ ಆಸ್ತಿ ಸೃಷ್ಟಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಜಲ ಸಂರಕ್ಷಣೆ, ಕೃಷಿ ಮತ್ತು ಪೂರಕ ಚಟುವಟಿಕೆಗಳು, ಗ್ರಾಮೀಣ ಮೂಲಸೌಕರ್ಯ, ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ, ಪ್ರಮುಖ ಗ್ರಾಮೀಣಾಭಿವೃದ್ಧಿ ಯೋಜನೆಗಳೊಂದಿಗಿನ ಸಂಯೋಜನೆ ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಹೊಸ ಚೌಕಟ್ಟಿನು ಸಹಭಾಗಿತ್ವದ ಯೋಜನೆ ಮತ್ತು ಪರಿಣಾಮಕಾರಿ ಅನುಷ್ಠಾನದ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ, ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವ ಮತ್ತು ಗ್ರಾಮೀಣ ಭಾರತದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ವಿಬಿ-ಜಿ ರಾಮ್ ಜಿ ಕಾಯ್ದೆಯ ಅನುಷ್ಠಾನವು ಭಾರತದ ಗ್ರಾಮೀಣ ಅಭಿವೃದ್ಧಿಯ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ವಿಕಸಿತ ಭಾರತ @2047 ರ ಅಡಿಪಾಯವಾಗಿ ಸ್ವಾವಲಂಬಿ, ಸ್ಥಿತಿಸ್ಥಾಪಕ ಮತ್ತು ಸಮೃದ್ಧ ಗ್ರಾಮೀಣ ಸಮುದಾಯಗಳನ್ನು ನಿರ್ಮಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನವು ವಿಬಿ-ಜಿ ರಾಮ್ ಜಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯಗಳ ಬದ್ಧತೆಯನ್ನು ಪುನರುಚ್ಚರಿಸಿದೆ.

ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನದಲ್ಲಿ, ಎಲ್ಲಾ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರು ಜುಲೈ 1 ರಿಂದ ಕಾಯ್ದೆಯನ್ನು ಕಾರ್ಯಗತಗೊಳಿಸಲು ರಾಜ್ಯಗಳು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಗೌರವಾನ್ವಿತ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮಾಹಿತಿ ನೀಡಲಾಯಿತು. 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಬಜೆಟ್‌ನಲ್ಲಿ ಸೂಕ್ತ ಅವಕಾಶಗಳನ್ನು ಕಲ್ಪಿಸಿದ್ದು, 24 ರಾಜ್ಯಗಳು ಈಗಾಗಲೇ 'ವಿಬಿ ಜಿ ರಾಮ್ ಜಿ ರಾಜ್ಯ ಯೋಜನೆಯನ್ನು' ಅಧಿಸೂಚಿಸಿವೆ.

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಕಾಯ್ದೆ, 2025ರ ರಾಷ್ಟ್ರೀಯ ಉದ್ಘಾಟನಾ ಸಮಾರಂಭವು ಜುಲೈ 2 ರಂದು ಆಂಧ್ರಪ್ರದೇಶದಲ್ಲಿ ನಡೆಯಲಿದೆ

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಕಾಯ್ದೆ, 2025ರ (ವಿಬಿ-ಜಿ ರಾಮ್ ಜಿ ಕಾಯ್ದೆ) ರಾಷ್ಟ್ರೀಯ ಉದ್ಘಾಟನಾ ಸಮಾರಂಭವು 2026ರ ಜುಲೈ 2 ರಂದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಓಬುಳವಾರಿಪಲ್ಲೆ ಮಂಡಲದ ಮುಕ್ಕವಾರಿಪಲ್ಲಿ ಗ್ರಾಮದಲ್ಲಿ ನಡೆಯಲಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮಿಷನ್‌ ಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಶ್ರೀ ಕೊಣಿದಲ ಪವನ್ ಕಲ್ಯಾಣ್, ಕೇಂದ್ರ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಮತ್ತು ಶ್ರೀ ಕಮಲೇಶ್ ಪಾಸ್ವಾನ್ ಅವರೊಂದಿಗೆ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಸಂದರ್ಭದಲ್ಲಿ, ಫಲಾನುಭವಿ ಕುಟುಂಬಗಳಿಗೆ ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್‌ ಗಳನ್ನು ವಿತರಿಸಲಾಗುವುದು, ವಿಬಿ-ಜಿ ರಾಮ್ ಜಿ ಮಿಷನ್‌ ಗೆ ಅಧಿಕೃತ ಚಾಲನೆ ನೀಡಲಾಗುವುದು, ಮಿಷನ್ ಕುರಿತ ಜಾಗೃತಿ ಚಿತ್ರವನ್ನು ಪ್ರದರ್ಶಿಸಲಾಗುವುದು ಮತ್ತು ಮಿಷನ್ ಕುರಿತಾದ ಸಂಪಾದಕೀಯ ಲೇಖನಗಳ ಸಂಕಲನವನ್ನು ಬಿಡುಗಡೆ ಮಾಡಲಾಗುವುದು.

******

 


(रिलीज़ आईडी: 2279552) आगंतुक पटल : 16
इस विज्ञप्ति को इन भाषाओं में पढ़ें: Urdu , Telugu , English , हिन्दी , Malayalam