ರಾಜ್ಯಸಭಾ ಕಾರ್ಯಾಲಯ
ರಾಜ್ಯ ಸಭೆಗೆ ಹೊಸದಾಗಿ ಆಯ್ಕೆಯಾದ/ಮರು ಆಯ್ಕೆಯಾದ ಸದಸ್ಯರಿಗೆ ರಾಜ್ಯಸಭಾ ಕೊಠಡಿಯಲ್ಲಿಂದು ಪ್ರಮಾಣವಚನ ಬೋಧಿಸಿದ ರಾಜ್ಯ ಸಭಾಧ್ಯಕ್ಷರಾದ ಶ್ರೀ ಸಿ.ಪಿ. ರಾಧಾಕೃಷ್ಣನ್
प्रविष्टि तिथि:
29 JUN 2026 1:45PM by PIB Bengaluru
ರಾಜ್ಯ ಸಭಾಧ್ಯಕ್ಷರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ರಾಜ್ಯ ಸಭಾ ಕೊಠಡಿಯಲ್ಲಿಂದು ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ/ಮರು ಆಯ್ಕೆಯಾದ ಏಳು ಮಂದಿ ಸದಸ್ಯರಾದ ಶ್ರೀ ಮಾನ್ಸಿಂಗ್ ಮೆರಾಮನ್ ಪರ್ಮಾರ್, ಶ್ರೀ ತರುಣ್ ಚುಗ್, ಡಾ. ಅಲ್ಕಾ ಸಿಂಗ್, ಶ್ರೀ ಜಿತೇಂದ್ರ ಮೇಘಜಿಭಾಯ್ ಕಂಜಾರಿಯಾ, ಶ್ರೀ ರಾಜೇಂದ್ರ ಹಿರಾಲಾಲ್ ಜೈನ್, ಶ್ರೀ ಎಂ. ನಾಗರಾಜ ಮತ್ತು ಶ್ರೀಮತಿ ಅಧಿಕಾರಿಮಾಯುಂ ಶಾರದಾ ದೇವಿ ಅವರಿಗೆ ಪ್ರಮಾಣವಚನ ಬೋಧಿಸಿದರು.
ನಾಲ್ವರು ಸದಸ್ಯರು ಹಿಂದಿಯಲ್ಲಿ, ಒಬ್ಬರು ಕನ್ನಡದಲ್ಲಿ, ಒಬ್ಬರು ಪಂಜಾಬಿಯಲ್ಲಿ ಮತ್ತು ಒಬ್ಬರು ಮಣಿಪುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇಬ್ಬರು ಸದಸ್ಯರು ಗುಜರಾತ್ ರಾಜ್ಯದವರಾಗಿದ್ದು, ಉಳಿದವರು ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ ಮತ್ತು ರಾಜಸ್ಥಾನದ ತಲಾ ಸದಸ್ಯರು ಸೇರಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಸಭೆಯ ಉಪಾಧ್ಯಕ್ಷರಾದ ಶ್ರೀ ಹರಿವಂಶ್; ರಾಜ್ಯ ಸಭಾ ನಾಯಕ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ; ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ಕಾನೂನು ಮತ್ತು ನ್ಯಾಯ ರಾಜ್ಯ ಖಾತೆ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್; ರಾಜ್ಯಸಭೆ ಸದಸ್ಯರಾದ ಶ್ರೀ ಜೈರಾಮ್ ರಮೇಶ್, ಶ್ರೀ ಪ್ರಫುಲ್ ಪಟೇಲ್; ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
(रिलीज़ आईडी: 2279000)
आगंतुक पटल : 12