ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಾಗತಿಕ ಇಂಧನ ಭವಿಷ್ಯದ ಕೇಂದ್ರ ಸ್ಥಳವಾಗಿ ಜಾಗತಿಕ ದಕ್ಷಿಣವನ್ನಿರಿಸಲು ಭಾರತದ ಪ್ರಯತ್ನ ಕುರಿತ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 27 JUN 2026 1:27PM by PIB Bengaluru

ಸುಭದ್ರ, ಸ್ಥಿರವಾಗಿ ಚೇತರಿಸಿಕೊಳ್ಳಬಲ್ಲ, ಸಮಾನ ಮತ್ತು ಸುಸ್ಥಿರ ಜಾಗತಿಕ ಇಂಧನ ಭವಿಷ್ಯದ ಕೇಂದ್ರ ಸ್ಥಳವಾಗಿ ಜಾಗತಿಕ ದಕ್ಷಿಣವನ್ನು ಇರಿಸಲು ಭಾರತ ಪ್ರಯತ್ನಿಸುತ್ತಿರುವ ಕುರಿತು ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. "ದೃಢ ದೇಶೀಯ ನೀತಿಗಳಿಂದ ಮಾತ್ರವಲ್ಲದೆ ಬಲವಾದ ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಮೂಲಕವೂ ಸಂಕಷ್ಟಗಳಿಂದ ಶೀಘ್ರ ಚೇತರಿಸಿಕೊಳ್ಳಬಲ್ಲ ಸ್ಥಿರ ಇಂಧನ ವ್ಯವಸ್ಥೆಗಳನ್ನು ನಿರ್ಮಿಸಲು ಸಾಧ್ಯ ಎಂಬ ಭಾರತದ ನಂಬಿಕೆಯನ್ನು ಅವರು ವಿವರಿಸಿದ್ದಾರೆ" ಎಂದು ಶ್ರೀ ಮೋದಿ ಹೇಳಿದ್ದಾರೆ. 

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಭಾರತವು 2026ರ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕೇಂದ್ರ ಸಚಿವರಾದ ಶ್ರೀ @ mlkhattar ಅವರು, ಭಾರತವು ಜಾಗತಿಕ ದಕ್ಷಿಣವನ್ನು ಸುರಕ್ಷಿತ, ಸ್ಥಿತಿಸ್ಥಾಪಕ, ಸಮಾನ ಮತ್ತು ಸುಸ್ಥಿರ ಜಾಗತಿಕ ಇಂಧನ ಭವಿಷ್ಯದ ಕೇಂದ್ರದಲ್ಲಿರಿಸಲು ಪ್ರಯತ್ನಿಸುತ್ತಿದೆ ಎಂದು ಬರೆದಿದ್ದಾರೆ.

ದೃಢವಾದ ದೇಶೀಯ ನೀತಿಗಳ ಮೂಲಕ ಮಾತ್ರವಲ್ಲದೆ ಬಲವಾದ ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಮೂಲಕವೂ ಸ್ಥಿತಿಸ್ಥಾಪಕ ಇಂಧನ ವ್ಯವಸ್ಥೆಗಳನ್ನು ನಿರ್ಮಿಸಲು ಸಾಧ್ಯ ಎಂಬ ಭಾರತದ ನಂಬಿಕೆಯನ್ನು ಅವರು ವಿವರಿಸಿದ್ದಾರೆ.

 

*****


(रिलीज़ आईडी: 2278468) आगंतुक पटल : 9
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Bengali , Manipuri , Gujarati , Tamil , Telugu , Malayalam