ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಜರತ್‌ ಇಮಾಮ್‌ ಹುಸೇನ್‌ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 26 JUN 2026 12:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಜರತ್‌ ಇಮಾಮ್‌ ಹುಸೇನ್‌ (ಎ.ಎಸ್‌.) ಅವರಿಗೆ ಗೌರವ ನಮನ ಸಲ್ಲಿಸಿ, ಸತ್ಯ ಮತ್ತು ನ್ಯಾಯಕ್ಕಾಗಿ ಅವರ ಕಾಲಾತೀತ ತ್ಯಾಗ ಮತ್ತು ಅಚಲ ಬದ್ಧತೆಯನ್ನು ಸ್ಮರಿಸಿದರು. ಇಮಾಮ್‌ ಹುಸೇನ್‌ ಅವರ ಜೀವನ ಮತ್ತು ಹುತಾತ್ಮತೆಯು ಧೈರ್ಯ ಮತ್ತು ದೃಢನಿಶ್ಚಯದ ಶಕ್ತಿಯ ಶಾಶ್ವತ ಜ್ಞಾಪನೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ:

‘‘ಹಜರತ್‌ ಇಮಾಮ್‌ ಹುಸೇನ್‌ (ಎ.ಎಸ್‌) ಅವರ ತ್ಯಾಗವು ಸತ್ಯ ಮತ್ತು ನ್ಯಾಯದ ಅನ್ವೇಷಣೆಯಲ್ಲಿಸ್ಥಿರವಾಗಿರಲು ಅನೇಕ ಜನರನ್ನು ಪ್ರೇರೇಪಿಸುತ್ತಲೇ ಇದೆ. ಇದು ಧೈರ್ಯ ಮತ್ತು ದೃಢನಿಶ್ಚಯದ ಶಾಶ್ವತ ಶಕ್ತಿಯನ್ನು ನೆನಪಿಸುತ್ತದೆ.’’

 

*****


(ಪ್ರಕಟಣೆ ಐ.ಡಿ.: 2278253) ವಿಸಿಟರ್ ಕೌಂಟರ್ : 62