|
ಸಂಸದೀಯ ವ್ಯವಹಾರಗಳ ಸಚಿವಾಲಯ
ʻಕೇಂದ್ರೀಯ ವಿದ್ಯಾಲಯʼಗಳಿಗಾಗಿ 2025-26ನೇ ಸಾಲಿನ 36ನೇ ʻರಾಷ್ಟ್ರೀಯ ಯುವ ಸಂಸತ್ʼ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ
प्रविष्टि तिथि:
24 JUN 2026 10:32AM by PIB Bengaluru
ʻಕೇಂದ್ರೀಯ ವಿದ್ಯಾಲಯʼಗಳಿಗಾಗಿ 2025-26ನೇ ಸಾಲಿನ 36ನೇ ʻರಾಷ್ಟ್ರೀಯ ಯುವ ಸಂಸತ್ʼ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು 2026ರ ಜೂನ್ 25ರ ಗುರುವಾರದಂದು ಮಧ್ಯಾಹ್ನ 3:00 ಗಂಟೆಯಿಂದ ನವದೆಹಲಿಯ ಸಂಸತ್ ಭವನ ಸಂಕೀರ್ಣದ ಸಂಸತ್ ಗ್ರಂಥಾಲಯ ಕಟ್ಟಡದ ʻಜಿಎಂಸಿ ಬಾಲಯೋಗಿ ಸಭಾಂಗಣʼದಲ್ಲಿ ನಡೆಯಲಿದೆ.
ಕಾನೂನು ಮತ್ತು ನ್ಯಾಯ ಸಹಾಯಕ ಖಾತೆ ಸಚಿವರಾದ (ಸ್ವತಂತ್ರ ನಿರ್ವಹಣೆ) ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸ್ಪರ್ಧೆಯಲ್ಲಿ ಪ್ರತಿಭಾನ್ವಿತ ಸಾಧನೆಗಾಗಿ ವಿಜೇತ ವಿದ್ಯಾರ್ಥಿಗಳು ಮತ್ತು ವಿದ್ಯಾಲಯಗಳಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ, ʻಕೇಂದ್ರೀಯ ವಿದ್ಯಾಲಯʼಗಳಿಗಾಗಿ 2025-26ನೇ ಸಾಲಿನ 36ನೇ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ "ನವದೆಹಲಿಯ ಪ್ರೆಸಿಡೆಂಟ್ ಎಸ್ಟೇಟ್‌ನ ಡಾ.ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದ (ದೆಹಲಿ ಪ್ರದೇಶ, ಉತ್ತರ ವಲಯ)" ವಿದ್ಯಾರ್ಥಿಗಳು ತಮ್ಮ ʻಯುವ ಸಂಸತ್ ಅಧಿವೇಶನʼದ ಪುನರಾವರ್ತಿತ ಪ್ರದರ್ಶನವನ್ನು ಪ್ರಸ್ತುತಪಡಿಸಲಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವಾಲಯವು ಕಳೆದ 38 ವರ್ಷಗಳಿಂದ ಕೇಂದ್ರೀಯ ವಿದ್ಯಾಲಯಗಳಲ್ಲಿ ʻಯುವ ಸಂಸತ್ʼ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ʻಕೇಂದ್ರೀಯ ವಿದ್ಯಾಲಯಗಳಿಗಾಗಿ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯ ಯೋಜನೆʼ ಅಡಿಯಲ್ಲಿ, ಸರಣಿಯ 36ನೇ ಸ್ಪರ್ಧೆಯನ್ನು 2025-26ರಲ್ಲಿ ಭಾರತದಾದ್ಯಂತ ಕೇಂದ್ರೀಯ ವಿದ್ಯಾಲಯ ಸಂಘಟನೆಯ 25 ವಲಯಗಳಲ್ಲಿ ವ್ಯಾಪಿಸಿರುವ 200 ವಿದ್ಯಾಲಯಗಳ ನಡುವೆ ಆಯೋಜಿಸಲಾಗಿತ್ತು.
ʻಯುವ ಸಂಸತ್ʼ ಯೋಜನೆಯು ಯುವ ಪೀಳಿಗೆಯಲ್ಲಿ ಸ್ವಯಂ ಶಿಸ್ತು, ವೈವಿಧ್ಯಮಯ ಅಭಿಪ್ರಾಯಗಳ ಸಹಿಷ್ಣುತೆ, ದೃಷ್ಟಿಕೋನಗಳ ನ್ಯಾಯಯುತ ಅಭಿವ್ಯಕ್ತಿ ಮತ್ತು ಪ್ರಜಾಪ್ರಭುತ್ವದ ಜೀವನ ವಿಧಾನದ ಮನೋಭಾವವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಇದಲ್ಲದೆ, ಈ ಯೋಜನೆಯು ವಿದ್ಯಾರ್ಥಿಗಳಿಗೆ ಸಂಸತ್ತಿನ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳು, ಚರ್ಚೆ ಮತ್ತು ಸಂವಾದ ತಂತ್ರಗಳನ್ನು ಪರಿಚಯಿಸುತ್ತದೆ. ಜೊತೆಗೆ ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವದ ಗುಣ, ಪರಿಣಾಮಕಾರಿ ಭಾಷಣದ ಕಲೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ.
ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ "ನವದೆಹಲಿಯ ಪ್ರೆಸಿಡೆಂಟ್ ಎಸ್ಟೇಟ್‌ನ, ಡಾ.ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯಕ್ಕೆ(ದೆಹಲಿ ಪ್ರದೇಶ, ಉತ್ತರ ವಲಯ)” "ಸರ್ದಾರ್ ವಲ್ಲಭಭಾಯಿ ಪಟೇಲ್ ರನ್ನಿಂಗ್ ಪಾರ್ಲಿಮೆಂಟರಿ ಶೀಲ್ಡ್" ಮತ್ತು ಟ್ರೋಫಿಯನ್ನು ನೀಡಲಾಗುವುದು. ಇದಲ್ಲದೆ, ಸ್ಪರ್ಧೆಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಈ ಕೆಳಗಿನ 4 ಕೇಂದ್ರೀಯ ವಿದ್ಯಾಲಯಗಳಿಗೆ ʻವಲಯ ವಿಜೇತʼ ಟ್ರೋಫಿಗಳನ್ನು ಸಚಿವರು ಪ್ರದಾನ ಮಾಡಲಿದ್ದಾರೆ:-
|
ಕ್ರಮ ಸಂಖ್ಯೆ.
|
ಕೇಂದ್ರೀಯ ವಿದ್ಯಾಲಯದ ಹೆಸರು
|
ವಲಯ
|
|
1.
|
ಕೇಂದ್ರೀಯ ವಿದ್ಯಾಲಯ, ಮಥುರಾ ಕಂಟೋನ್ಮೆಂಟ್, ಮಥುರಾ, ಉತ್ತರ ಪ್ರದೇಶ
(ಎಫ್‌ಕ್ಯುಎ ಪ್ರದೇಶ)
|
ಪಶ್ಚಿಮ
|
|
2.
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ.1, ಮಧುರೈ, ತಮಿಳುನಾಡು
(ಚೆನ್ನೈ ಪ್ರದೇಶ)
|
ದಕ್ಷಿಣ
|
|
3.
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ ನಂ.2, ಶಿವಾಜಿ ನಗರ, ಭೋಪಾಲ್, ಮಧ್ಯಪ್ರದೇಶ
(ಭೋಪಾಲ್ ಪ್ರದೇಶ)
|
ಕೇಂದ್ರೀಯ
|
|
4.
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ, ಏರ್‌ಫೋರ್ಸ್ ಸ್ಟೇಷನ್, ಬರ್ಜಾರ್, ಗುವಾಹಟಿ, ಅಸ್ಸಾಂ
(ಗುವಾಹಟಿ ಪ್ರದೇಶ)
|
ಪೂರ್ವ
|
ಅಲ್ಲದೆ, ಸ್ಪರ್ಧೆಯಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಈ ಕೆಳಗಿನ 20 ಕೇಂದ್ರೀಯ ವಿದ್ಯಾಲಯಗಳಿಗೆ ಸಚಿವರು ʻಪ್ರಾದೇಶಿಕ ವಿಜೇತʼ ಟ್ರೋಫಿಗಳನ್ನು ನೀಡಲಿದ್ದಾರೆ:
|
ಕ್ರಮ ಸಂಖ್ಯೆ.
|
ಕೇಂದ್ರೀಯ ವಿದ್ಯಾಲಯದ ಹೆಸರು
|
ಪ್ರದೇಶ
|
|
1
|
ಕೇಂದ್ರೀಯ ವಿದ್ಯಾಲಯ ಸಂಖ್ಯೆ 2, ಅಖ್ನೂರ್, ಜಮ್ಮು.
|
ಜಮ್ಮು
|
|
2
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ ಕಪುರ್ಥಲಾ ಕಂಟೋನ್ಮೆಂಟ್, ಪಂಜಾಬ್
|
ಚಂಡೀಗಢ
|
|
3
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ, ಸೋಲನ್, ಹಿಮಾಚಲ ಪ್ರದೇಶ
|
ಗುರ್ಗಾಂವ್
|
|
4
|
ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯ, ಪಿಥೋರಗಢ, ಉತ್ತರಾಖಂಡ
|
ಡೆಹ್ರಾಡೂನ್
|
|
5
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ, ಸಬರಮತಿ, ಗುಜರಾತ್
|
ಅಹಮದಾಬಾದ್
|
|
6
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ.1, ಏರ್‌ಫೋರ್ಸ್ ಸ್ಟೇಷನ್, ಸೂರತ್‌ಗಢ, ರಾಜಸ್ಥಾನ
|
ಜೈಪುರ
|
|
7
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ.1, ಏರ್‌ಫೋರ್ಸ್ ಸ್ಟೇಷನ್, ಪುಣೆ, ಮಹಾರಾಷ್ಟ್ರ
|
ಮುಂಬಯಿ
|
|
8
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ, ಟಾಟಾ ನಗರ, ಪೂರ್ವ ಸಿಂಗ್ಭೂಮ್, ಜಾರ್ಖಂಡ್
|
ರಾಂಚಿ
|
|
9
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ.1, ಸತ್ನಾ, ಮಧ್ಯಪ್ರದೇಶ
|
ಜಬಲ್‌ಪುರ
|
|
10
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ, ಸಿಆರ್‌ಪಿಎಫ್, ಪಳ್ಳಿಪುರಂ, ತಿರುವನಂತಪುರಂ, ಕೇರಳ
|
ಎರ್ನಾಕುಲಂ
|
|
11
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ, ನೆಲ್ಲೂರು, ಆಂಧ್ರಪ್ರದೇಶ
|
ಹೈದರಾಬಾದ್
|
|
12
|
ಪ್ರಧಾನ ಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ
ನಂ.1, ಏರ್‌ಫೋರ್ಸ್ ಸ್ಟೇಷನ್, ಸಾಂಬ್ರಾ, ಕರ್ನಾಟಕ
|
ಬೆಂಗಳೂರು
|
|
13
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ.1, ಏರ್ ಫೋರ್ಸ್ ಸ್ಟೇಷನ್ ಚಕೇರಿ, ಕಾನ್ಪುರ, ಉತ್ತರ ಪ್ರದೇಶ
|
ಲಕ್ನೋ
|
|
14
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ, ದಾನಾಪುರ್ ಕಂಟೋನ್ಮೆಂಟ್, ಪಾಟ್ನಾ, ಬಿಹಾರ
|
ಪಾಟ್ನಾ
|
|
15
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ.2, ಎನ್‌ಟಿಪಿಸಿ, ಕೊರ್ಬಾ, ಛತ್ತೀಸ್‌ಗಢ
|
ರಾಯ್‌ಪುರ
|
|
16
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ, ಬಿಎಚ್‌ಯು ಕ್ಯಾಂಪಸ್ (ಎಫ್ಎಸ್), ವಾರಣಾಸಿ, ಉತ್ತರ ಪ್ರದೇಶ
|
ವಾರಣಾಸಿ
|
|
17
|
ಕೇಂದ್ರೀಯ ವಿದ್ಯಾಲಯ ನಂ.1, ಇಂಫಾಲ್, ಮಣಿಪುರ
|
ಟಿನ್ಸುಕಿಯಾ
|
|
18
|
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ, ಬಲ್ಲಿಗುಂಗೆ, ಕೋಲ್ಕತ್ತಾ, ಪಶ್ಚಿಮ ಬಂಗಾಳ
|
ಕೋಲ್ಕತ್ತಾ
|
|
19
|
ಕೇಂದ್ರೀಯ ವಿದ್ಯಾಲಯ ಒಎನ್‌ಜಿಸಿ, ಶ್ರೀಕೋನಾ, ಅಸ್ಸಾಂ
|
ಸಿಲ್ಚಾರ್
|
|
20
|
ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯ, ಬಾರ್ಗಢ, ಭುವನೇಶ್ವರ, ಒಡಿಶಾ
|
ಭುವನೇಶ್ವರ
|
*****
(रिलीज़ आईडी: 2277371)
|