ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಂತಾರಾಷ್ಟ್ರೀಯ ಯೋಗ ದಿನ 2026 ಅನ್ನು ಜಾಗತಿಕ ಆಚರಣೆಯನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಕೆ

प्रविष्टि तिथि: 21 JUN 2026 10:11PM by PIB Bengaluru

ಅಂತಾರಾಷ್ಟ್ರೀಯ ಯೋಗ ದಿನ 2026 ಅನ್ನು ನಿಜವಾದ ಜಾಗತಿಕ ಆಚರಣೆಯನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದಾದ್ಯಂತದ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಸ್ವಾಸ್ಥ್ಯ ಮತ್ತು ಉತ್ತಮ ಆರೋಗ್ಯದ ಜಂಟಿ ಅನ್ವೇಷಣೆಯಲ್ಲಿ, ಯೋಗವು ದೇಶಗಳಾದ್ಯಂತದ ಮತ್ತು ಜೀವನದ ಎಲ್ಲಾ ವರ್ಗಗಳ ಜನರನ್ನು ಒಟ್ಟುಗೂಡಿಸುತ್ತಿರುವುದನ್ನು ನೋಡುವುದು ಉತ್ತೇಜನಕಾರಿಯಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಲು ಈ ದಿನವು ಇನ್ನು ಹೆಚ್ಚಿನ ಜನರಿಗೆ ಪ್ರೇರಣೆ ನೀಡುತ್ತದೆ ಎಂದು ಶ್ರೀ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿಯವರು X ನಲ್ಲಿ ಹೀಗೆ ಬರೆದಿದ್ದಾರೆ;

“ವಿಶ್ವದಾದ್ಯಂತ ಒಂದು ಸ್ಮರಣೀಯ ಯೋಗ ದಿನ!

ಅಂತಾರಾಷ್ಟ್ರೀಯ ಯೋಗ ದಿನ 2026 ಅನ್ನು ನಿಜವಾದ ಜಾಗತಿಕ ಆಚರಣೆಯನ್ನಾಗಿ ಮಾಡಿದ್ದಕ್ಕಾಗಿ ಪ್ರಪಂಚದಾದ್ಯಂತದ ಜನರಿಗೆ ಕೃತಜ್ಞತೆಗಳು.

ಸ್ವಾಸ್ಥ್ಯ ಮತ್ತು ಉತ್ತಮ ಆರೋಗ್ಯದ ಜಂಟಿ ಅನ್ವೇಷಣೆಯಲ್ಲಿ, ಯೋಗವು ದೇಶಗಳಾದ್ಯಂತದ ಮತ್ತು ಜೀವನದ ಎಲ್ಲಾ ವರ್ಗಗಳ ಜನರನ್ನು ಒಟ್ಟುಗೂಡಿಸುತ್ತಿರುವುದನ್ನು ನೋಡುವುದು ಉತ್ತೇಜನಕಾರಿಯಾಗಿದೆ.

ಮುಂಬರುವ ದಿನಗಳಲ್ಲಿ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಲು ಈ ದಿನವು ಇನ್ನು ಹೆಚ್ಚಿನ ಜನರಿಗೆ ಪ್ರೇರಣೆ ನೀಡಲಿ.

#IDY2026

#YogaForHealthyAgeing”

 

*****


(रिलीज़ आईडी: 2276985) आगंतुक पटल : 5
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam